ಚನ್ನಪಟ್ಟಣ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿಯನ್ನು ಆಯ್ಕೆ ಮಾಡಲಾಗಿದೆ. ಹಾಲಿ, ಮಾಜಿ ಶಾಸಕರ ಸಭೆ ಬಳಿಕ ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದರು. ಆ ಬಳಿಕ ನಿಖಿಲ್ ಕುಮಾರಸ್ವಾಮಿ ನಮ್ಮ ಅಬ್ಯರ್ಥಿ ಎಂದು ಘೋಷಣೆ ಮಾಡಲಾಯ್ತು. ಯಡಿಯೂರಪ್ಪ ಮಾತನಾಡಿ, ವಿರೋಧಿಗಳ ಬಗ್ಗೆ ಮಾತನಾಡಲ್ಲ, ನಾವು ಗೆದ್ದು ಮತ್ತೆ ಮಾತನಾಡ್ತೇವೆ ಎಂದಿದ್ದಾರೆ.
ಯಡಿಯೂರಪ್ಪ ಬಳಿಕ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಮುಕ್ತವಾದ ಅವಕಾಶ ಇದ್ದರೂ ಬೇರೆ ಬೇರೆ ನಿರ್ಧಾರ ಮಾಡಿದ್ದಾರೆ. ಆ ಬಗ್ಗೆ ನಾವು ಚರ್ಚೆ ಮಾಡಲ್ಲ, ನಮ್ಮ NDA ಅಭ್ಯರ್ಥಿ ಗೆಲ್ಲಬೇಕು ಎನ್ನುವುದು ನಮ್ಮ ಗುರಿ ಎಂದಿದ್ದಾರೆ. ಮೂರೂ ಕ್ಷೇತ್ರದಲ್ಲೂ ನಾವಿಬ್ಬರೂ ಒಟ್ಟಾಗಿ ಚುನಾವಣೆ ಗೆಲ್ತೇವೆ ಎಂದಿದ್ದಾರೆ.
NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಮಗೆ ಇನ್ನು ಕೇವಲ 20 ದಿನಗಳು ಮಾತ್ರ ಉಳಿದಿವೆ. ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಪಕ್ಷದ ಕಾರ್ಯಕರ್ತರನ್ನು ನಿಲ್ಲಿಸುವ ಮನಸ್ಸು ಮಾಡಿದ್ದೆವೆ. ಆದರೆ ಮೈತ್ರಿ ನಾಯಕರ ನಿರ್ಧಾರಕ್ಕೆ ಮಣಿದು ಸ್ಪರ್ಧೆ ಮಾಡ್ತಿದ್ದೇನೆ. ಈ ಚಕ್ರವ್ಯೂಹ ಭೇದಿಸುವ ಶಕ್ತಿಯನ್ನು ಎರಡೂ ಪಕ್ಷದ ಕಾರ್ಯಕರ್ತರು ನೀಡಲಿದ್ದಾರೆ ಎಂದಿದ್ದಾರೆ.
ಜೆಡಿಎಸ್ ಕಚೇರಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ಚನ್ನಪಟ್ಟಣ ಅಭ್ಯರ್ಥಿ ನಾಳೆ ನಾಮಪತ್ರ ಸಲ್ಲಿಕೆ ಮಾಡ್ತಾರೆ. ಚನ್ನಪಟ್ಟಣಲ್ಲಿ ನಾನೇ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.