
ಬೆಂಗಳೂರು ; ಎಡಿಜಿಪಿ ಎಂ.ಚಂದ್ರಶೇಖರ್ (ADGP M. Chandrasekhar)ಬರೆದಿರುವ ಪತ್ರಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ (Nikhil Kumaraswamy)ಅವರು ತಿರುಗೇಟು ನೀಡಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಅವರು ಎಡಿಜಿಪಿ ಎಂ.ಚಂದ್ರಶೇಖರ್ ಬರೆದಿರುವ ಪತ್ರದ ಹಿಂದೆ ಸಾಕಷ್ಟು ಕೈವಾಡವಿದೆ.ಅವರ ಬೆನ್ನಿಂದೆ ನಿಂತು ಈ ರೀತಿ ಪತ್ರ ಬರೆಯುವುದಕ್ಕೆ ಪ್ರೇರಣೆಕೊಟ್ಟಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಅಧಿಕಾರಿಗಳು ಸರ್ಕಾರದ ಕೈಗೊಂಬೆ:
ರಾಜ್ಯ ಸರ್ಕಾರ ಇವತ್ತು ಯಾವ ರೀತಿ ನಡೆಯುತ್ತಿದೆ. ಅಧಿಕಾರಿಗಳು ಸರ್ಕಾರದ ಕೈಗೊಂಬೆ ರೀತಿ ವರ್ತಿಸುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಭವಿಷ್ಯ ಹಿಂದಿನ ಸಾಕಷ್ಟು ಸರ್ಕಾರಗಳು ರಾಜ್ಯದಲ್ಲಿ ಆಡಳಿತ ಮಾಡಿದ್ದವು, ಆದರೆ ಈ ರೀತಿಯಾಗಿ ಅಧಿಕಾರಿಗಳನ್ನ ದುರುಪಯೋಗ ಪಡೆಸಿಕೊಂಡು ಈ ರೀತಿ ಆಡಳಿತ ಮಾಡುತ್ತಿರುವುದು ರಾಜ್ಯದ ಇತಿಹಾಸದಲ್ಲೇ ಇದೇ ಮೊದಲು ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು ಅವರು.
ಆಗಾಗಿ ಇದ್ಯಾವುದಕ್ಕೂ ಭಯಪಡುವ ಅಗತ್ಯ ಇಲ್ಲ. ಅವರ ಈ ಇಂತಹ ನೂರು ಪತ್ರಗಳನ್ನ ಬರೆಯಲಿ, ಅಧಿಕಾರ ಶಾಶ್ವತ ಅಲ್ಲ, ಇವರು ತೋರಿಸಿಕೊಟ್ಟಿರುವ ದಾರಿ ದ್ವೇಷದ ರಾಜಕಾರಣ ಮುಂದುವರೆಸಬೇಕಾ ? ಅಧಿಕಾರದಲ್ಲಿದ್ದಾಗ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಕುಮಾರಣ್ಣ ಅವರು ಈ ರೀತಿ ಮಾಡಿದರಾ.? ಎಂದು ಕಿಡಿಕಾರಿದರು.ನಿನ್ನೆ ಬರೆದಿರುವ ಪತ್ರದಲ್ಲಿ ಆ ಪತ್ರದಲ್ಲಿ ಏನೇನು ಉಲ್ಲೇಖಿಸಿದ್ದರೆ ಇವೆಲ್ಲವನ್ನು ನೋಡಿದಾಗ ಅದರ ಹಿಂದೆ ಯಾವ್ಯಾವ ವ್ಯಕ್ತಿಗಳು ಅವರಿಗೆ ಪ್ರೇರೆಪಣೆ ಕೊಟ್ಟಿದ್ದಾರೆ ಅನ್ನುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.