ಕಾಂಗ್ರೆಸ್ ಪಕ್ಷದಲ್ಲಿ ವಕ್ತಾರರಿಲ್ಲ, ಬಿಜೆಪಿಯಲ್ಲಿ ಮಾತನಾಡುವವರು ಕಾಂಗ್ರೆಸ್ ಪಕ್ಷದಲ್ಲಿ ಇಲ್ಲವಲ್ಲವೆಂದು ಹೇಳುತ್ತಿದ್ದವರಿಗೆ. ನಿಕೇತ್ ರಾಜ್ ಮೌರ್ಯ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಪಕ್ಷ ಸೇರ್ಪಡೆ ನಂತರ ತಳಮಟ್ಟದಲ್ಲಿ ಕೆಲಸ ಮಾಡಲು ಪ್ರಾರಂಭಿಸಿ, ಬಳಿಕ ಪಕ್ಷದ ಬೇರೆ ಬೇರೆ wings / division’s ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಅದರಲ್ಲೂ ಸಂಶೋಧನಾ ವಿಭಾಗ ಮತ್ತು ಐಟಿ ಸೆಲ್ ತಂಡಗಳೊಂದಿಗೆ ಕೆಲಸ ಮಾಡಿದರು.

ಅನೇಕ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ, ವಿಡಿಯೋಗಳಿಗೆ ಹಿನ್ನಲೆ ಧ್ವನಿಯನ್ನು ನೀಡುವ ಮೂಲಕ ಪಕ್ಷದ ಬಹುತೇಕ ನಾಯಕರಿಗೆ ಪರಿಚಯವಾದರು. ನಿಕೇತ್ ರಾಜ್ಯದ ಮನೆ ಮಾತಾದಾದರು. ನಿಕೇತ್ ಜನಪ್ರೀಯತೆ ದಿನೇ ದಿನೇ ಹೆಚ್ಚಾಗುತ್ತ ಹೋಯಿತು. ಕಾಂಗ್ರೆಸ್ ನಾಯಕರ ಸರಿಸಮಾನವಾಗಿ ವೇದಿಕೆಗಳಲ್ಲಿ ಜೊತೆ ಕಾಣಿಸಿಕೊಳ್ಳುವುದರ ಜೊತೆ ಅವರು ಭಾಷಣ ಮಾಡಲು ಅವಕಾಶ ಲಭಿಸಿತು. 2023 ವಿಧಾನ ಸಭಾ ಚುನಾವಣೆ ಇರಲಿ, 2024 ರ ಸಾರ್ವತ್ರಿಕ ಚುನಾವಣೆಯೇ ಇರಲಿ ಅವರು ಪ್ರಚಾರ ಹಾಗೂ ಚುನಾವಣೆಗೆ ಸಂಬಂಧಿಸಿದ ಕೆಲಸದಲ್ಲಿ ಭಾಗಿಯಾಗುತ್ತಿದ್ದರಿಂದಲೇ ಅವರಿಗೆ ಪ್ರಭಾವಿ ನಾಯಕರಿಂದ ಮತ್ತು ಅಭ್ಯರ್ಥಿಗಳಿಂದಲೇ ಪ್ರಚಾರಕ್ಕೆ ಆಹ್ವಾನ ಬರುತಿತ್ತು.

ನಿಕೇತ್ ಅವರ ವರ್ಚಸ್ಸು ಇಡೀ ಕಾಂಗ್ರೆಸ್ ಪಕ್ಷಕ್ಕೆ ತಿಳಿದಿತ್ತು ಎಂದರೆ ಅತಿಶಯೋಕ್ತಿಯಲ್ಲ, ಕಾರಣ ಇವರ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೂ ಗೊತ್ತು ಹಾಗೂ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್(DCM DK Shivakumar) ಅವರಿಗೂ ಚಿರಪರಿತರಾಗಿದ್ದಾರೆ. ಬಿಜೆಪಿ ಸಂಘಪರಿವಾರದವರದಲ್ಲಿ ಸುಳ್ಳು- ದ್ವೇಷಗಳದ್ದೆ ಭಾಷಣ ಅದರಲ್ಲೂ ಹೆಂಗ್ ಪುಂಗ್ಲಿ ಅಂತವರನ್ನು ಭಾಷಣಕ್ಕೆ ಆಹ್ವಾನಿಸುವ ಲಜ್ಜೆಗೇಡಿ ಕೆಲಸವನ್ನು ಮುಂದುವರೆಸಿದರೆ, ಕಾಂಗ್ರೆಸ್ ವಿಚಾರವಂತರನ್ನು, ಪ್ರಬುದ್ಧರನ್ನು ಮತ್ತು ವಸ್ತುನಿಷ್ಠವಾಗಿ ಮಾತನಾಡುವ ಯೋಗ್ಯ ಹಾಗೂ
ಸಾರ್ಮರ್ಥ್ಯ ಹೊಂದಿರುವವರನ್ನು ಪ್ರಚಾರಕ್ಕೆ ಆಹ್ವಾನಿಸುತ್ತ ಪಕ್ಷದ ಘನತೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದನ್ನು ಗಮನಿಸಬಹುದು.

ದೇಶ ಪ್ರೇಮ, ರಾಷ್ಟ್ರಗಡಿ, ಸೇನೆ ಹೀಗೆ ಅನೇಕ ವಿಚಾರಗಳು ಈಗ ಮನರೋಂಜನಾ ಹಾಗೂ ಪ್ರಚಾರದ ಆಟಿಕೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಖರವಾಗಿ ಮಾತನಾಡುವ ವಕ್ತಾತರರ ಕೊರತೆಯಿಲ್ಲ, ಬಿಜೆಪಿಯಲ್ಲಿ ಸತ್ಯ ಹೇಳುವ ಸತ್ಯ ತಿಳಿಸುವ ವಕ್ತಾರರ ಕೊರತೆ ಇರುವುದನ್ನು ಇಡೀ ದೇಶ ಗಮನಿಸುತ್ತಿದೆ.

ವಕ್ತಾರರ ಪ್ರಾಮುಖ್ಯತೆಯನ್ನು ತೊರಿಸಿಕೊಟ್ಟಿದೆ ಸಂಘಪರಿವಾರ, ಅವರು ಹೇಳುವ ಹಸಿ ಹಸಿ ಸುಳ್ಳುಗಳಿಂದಲೇ ಇಂದು ರಾಜಕೀಯವೆಂದರೆ ವಾಕರಿಕೆ ತರುವಂತಿದೆ.
ಹೀಗಿರುವಾಗ ನಿಕೇತ್ ರಾಜ್ ಮೌರ್ಯರಂತಹ ವಕ್ತಾರರು ಪಕ್ಷದಲ್ಲಿ ಹಂತಹಂತವಾಗಿ ಬೆಳೆದು, ಇಂದು ರಾಜ್ಯದ ಮನೆ ಮಾತಾಗಿದ್ದಾರೆ. ನಿಕೇತ್ ಬಂದ ದಾರಿ ಬೇರೆ ಇರಬಹುದು, ಅವರು ಮೊದಲು ಎಲ್ಲಿದ್ದರು? ಅವರು ಯಾರ ಮಾರ್ಗದರ್ಶನದಲ್ಲಿ ಬೆಳೆದರು ? ಎಂಬ ಪ್ರಶ್ನೆಗಳು ಮೂಡುವುದು ಸಹಜ, ಆದರೆ ಆ ಎಲ್ಲಾ ಪ್ರಶ್ನೆಗಳು ಪ್ರಸ್ತುತವಲ್ಲ. ಅವರು ಮಹಾನ್ ಸಂತ ಸ್ವಾಮಿ ವಿವೇಕಾನಂದ, ರಾಷ್ಟ್ರಪಿತ ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಭೇಡ್ಕರ್, ದೇಶದ ಮೊಟ್ಟ ಮೊದಲ ಪ್ರಧಾನಿ, ದಾರ್ಶನಿಕ ಜವಾಹರ್ ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ರಾಷ್ಟ್ರಕವಿ ಕುವೆಂಪು, ಪೂರ್ಣ ಚಂದ್ರ ತೇಜಸ್ವಿ ರಾಮ ಮನೋಹರ್ ಲೋಹಿಯಾ ಸೇರಿದಂತೆ ಇನ್ನು ಹಲವಾರು ಮಹನೀಯರ ಬಗ್ಗೆ ಚೆನ್ನಾಗಿ ಓದಿ ಅರ್ಥ ಮಾಡಿಕೊಂಡ ಫಲವೇ ಅವರಿಂದು ಸಂಘಪರಿವಾರದವರಿಗೆ ಸಿಂಹಸ್ವಪ್ನರಾಗಿರುವುದು.

ಅವರು ವಸ್ತುನಿಷ್ಠವಾಗಿ ವಿಚಾರವನ್ನು ಮಂಡಿಸುವ ಶೈಲಿ, ಶ್ರೀ ಸಾಮಾನ್ಯನಿಗೆ ಗಂಭೀರವಾದ ವಿಷಯಗಳನ್ನು ತಿಳಿಸುವ ರೀತಿಯಿಂದ ಅವರು ಜನರಿಗೆ ಹತ್ತಿರವಾಗಲು ಸಾಧ್ಯವಾಗಿದೆ.
ರಾಜಕೀಯ ಬೇಡ, ಭಾಷಣ ಕೇಳಿ ಕೇಳಿ ಸಾಕಾಗಿದೆ ಎನ್ನುವವರೆಗೂ ಇವರ ಮಾತುಗಳನ್ನು ಒಮ್ಮೆ ಕೇಳಿದರೆ ಮತ್ತೆ ಮತ್ತೆ ಈ ವಿಷಯಗಳನ್ನು ಕೇಳಬೇಕೆಂದು ಅನಿಸದೆ ಇರಲಾರದು. ಕಾಂಗ್ರೆಸ್ ಪಕ್ಷ ಯುವಕರಿಗೆ ಮಣೆಹಾಕಲ್ಲ, ಅವರನ್ನು ಕಡಿಗಣಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತದೆ. ಆದರೆ ಕಾಂಗ್ರೆಸ್ ಹಿರಿಯರನ್ನು ನಿರ್ಲಕ್ಷಿಸದೆ, ಕಿರಿಯನ್ನು ಕಡಿಗಣಿಸದೆ ಎಲ್ಲರಿಗೂ ಅವಕಾಶ ಒದಗಿಸುವುದರಿಂದಲೇ ಕಾಂಗ್ರೆಸ್ ಇಂದು ದೇಶದ ಜನರ ನಾಡಿ ಮಿಡತವಾಗಿದೆ.

ಸದ್ಯ ನಿಕೇತ್ ರಾಜ್ ನಿಕೇತ್ ರಾಜ್ ಮೌರ್ಯ ಅವರಿಗೆ ಪಕ್ಷ ಸೂಕ್ತವಾದ ಮತ್ತು ಮಹತ್ತರ ಜವಾಬ್ಧಾರಿಯನ್ನು ನೀಡಿದೆ. ಅವರಿಗೆ ನಗರದ ಸಾರಿಗೆ ಸಂಸ್ಥೆ ಅಧ್ಯಕ್ಷರನ್ನಾಗಿ ಪಕ್ಷದ ವರಿಷ್ಠರು ನೇಮಕ ಮಾಡಿದ್ದಾರೆ. ಈ ಬಗ್ಗೆ ಸಂತಸವನ್ನು ನಿಕೇತ್ ರಾಜ್ ಮೌರ್ಯರವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆ ಮೂಲಕ ಹರ್ಷವನ್ನು ಹಂಚಿಕೊಂಡಿದ್ದಾರೆ.