ಪಕ್ಕದ ಕೇರಳದಲ್ಲಿ ಕೊರೋನಾ ನಡುವೆ ನಿಫಾ ವೈರಸ್ ಕೂಡ ದಾಳಿ ಇಟ್ಟಂತಿದೆ ಈಗಾಗಲೇ ಕೊರೋನಾಗೆ ಬಸವಳಿದಿರುವ ಕೇರಳ ನಿಫಾ ಕಬಂಧಬಾಹುನಲ್ಲಿದೆ. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆ ರಾಜ್ಯಕ್ಕೂ ನಿಫಾ ವೈರಸ್ ದಾಂಗುಡಿ ಇಟ್ಟರೆ ಅಚ್ಚರಿ ಇಲ್ಲ ಎಂಬ ನೆಲೆಗಟ್ಟಿನಲ್ಲಿ ಮುನ್ನೆಚ್ಚರಿಕೆ ವಹಿಸಲೆ ಸೂಚಿಸಿದೆ. ಅಲ್ಲದೆ ನಿಫಾ ವೈರಸ್ ರೋಗ ಲಕ್ಷಣಗಳನ್ನು ಪಟ್ಟಿ ಮಾಡಿಕೊಂಡಿದೆ.
ಕೇರಳದಲ್ಲಿ ನಿಫಾ ಸೋಂಕು ಹಿನ್ನೆಲೆ.. ರಾಜ್ಯದಲ್ಲಿ ನಿಫಾ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ!
ಪಕ್ಕದ ಕೇರಳದ ಕೋಝಿಕೋಡಿನಲ್ಲಿ ಕೊರೋನಾ ನಡುವೆ ನಿಫಾ ವೈರಸ್ ಪ್ರಕರಣವೊಂದು ಪತ್ತೆಯಾಗಿದೆ. ಅಲ್ದೆ ಈ ಸೋಂಕಿತನ ಪ್ರಾರ್ಥಮಿಕ ಸಂಪರ್ಕ ಎಂದು 250ಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಈಗ ರಾಜ್ಯದಲ್ಲೂ ಕೊರೋನಾ ನಡುವೆ ಆತಂಕ ಮೂಡಿಸುವಂತೆ ಮಾಡಿದೆ. ಈ ನಿಟ್ಡಿನಲ್ಲಿ ರಾಜ್ಯ ಸರ್ಕಾರ ಕೂಡ ಎಚ್ಚರವಹಿಸಲು ಆರೋಗ್ಯ ಇಲಾಖೆಗೆ ಸೂಚನೆ ಕೊಟ್ಟಿದೆ. ಹೀಗಾಗಿ ಆರೋಗ್ಯ ಇಲಾಖೆ ನಿಫಾ ವೈರಸ್ ರೋಗ ಲಕ್ಷಣಗಳನ್ನು ಪಟ್ಟಿ ಮಾಡಿಕೊಂಡಿದೆ.
ನಿಫಾ ವೈರಸ್ ಗುಣ ಲಕ್ಷಣಗಳ ಪಟ್ಟಿ ಮಾಡಿದ ರಾಜ್ಯ ಸರ್ಕಾರ.!!
• ಜ್ವರ
• ಮೈಕೈ ನೋವು
• ನಡುಕ
• ತೊದಲುವಿಕೆ
• ತಲೆನೋವು
• ವಾಂತಿ
• ನಿದ್ರಾಲಸ್ಯ
• ಪ್ರಜ್ಞಾಹೀನತೆ
ಹೀಗೆ ಹಲವು ರೋಗ ಲಕ್ಷಣಗಳನ್ನು ಸರ್ಕಾರದ ಆರೋಗ್ಯ ಇಲಾಖೆ ಪಟ್ಟಿ ಮಾಡಿಕೊಂಡಿದೆ. ಇದರ ಜೊತೆಗೆ ಏನು ಮಾಡಬೇಕು ಏನೇನು ಮಾಡಬಾರದು ಎಂಬುವುದನ್ನೂ ಹೇಳಿದೆ.
ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಏನು ಮಾಡಬಾರದು.!?
• ಪ್ರಾಣಿಗಳು & ಪಕ್ಷಿಗಳು ಕಚ್ಚಿದ ಹಣ್ಣು ತಿನ್ನಬಾರದು
• ಬಾವಲಿಗಳು ಅತಿ ಹೆಚ್ಚು ಕಂಡು ಬರುವ ಪ್ರದೇಶಗಳಿಂದ ಸಂಗ್ರಹಿಸಿದ ನಿರಾ ಕುಡಿಯಬಾರದ
• ರೋಗಿಯ ಶರೀರ ದ್ರಾವದಿಂದ (ಜೊಲ್ಲು, ಬೆವರು, ಮೂತ್ರ ಇತ್ಯಾದಿ) ಸಂಪರ್ಕ ತಪ್ಪಿಸಿ
ನಿಫಾದಿಂದ ತಪ್ಪಿಸಿಕೊಳ್ಳಲು ಏನೇನು ಮಾಡಬೇಕು.!?
• ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳಿ (ಮಾಸ್ಕ್, ಪಿಪಿ ಕಿಟ್ ಇತ್ಯಾದಿ)
• ಹಂದಿ, ನಾಯಿ, ಕುದುರೆ, ಬೆಕ್ಕು, ಬಾವಲಿ ಸೇರಿದಂತೆ ಎಲ್ಲಾ ಹಕ್ಕಿಗಳಿಂದ ಸಾಧ್ಯವಾದಷ್ಟು ದೂರವಿರಿ
• ಸೋಂಕಿತರ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳಬೇಡಿ
•ಹಸ್ತಲಾಘವ ಕೊಡುವುದನ್ನು ತಪ್ಪಿಸಿ, ಮನೆಯಿಂದ ಹೊರ ಹೋಗಿ ಬಂದ ಬಳಿಕ ಕೈ , ಕಾಲುಗಳನ್ನು ಶುಚಿಗೊಳಿಸಿ
• ಎಲ್ಲಾ ರೀತಿಯ ಹಣ್ಣುಗಳು ತಿನ್ನುವಾಗ ಚೆನ್ನಾಗಿ ತೊಳೆದು ತಿನ್ನುವುದು
ಇನ್ನು ಈ ನಿಫಾ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ ಎಂದು ಸರ್ಕಾರ ಹೇಳಿದೆ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಮೊದಲೊಮ್ಮೆ ಕೇರಳದಲ್ಲಿ ನಿಫಾ ವೈರಸ್ ಅಪ್ಪಳಿಸಿ ಅವಾಂತರ ಸೃಷ್ಡಿಸಿತ್ತು. ಇದೀಗ ಎರಡನೇ ಬಾರಿಯೂ ಸೋಂಕು ದೃಢವಾಗಿ ಅತಂಕ ಮೂಡಿಸಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಈ ತಿಳುವಳಿಕೆಯನ್ನು ಜನತೆಗೆ ನೀಡಿದೆ.