ಬೆಂಗಳೂರಿನ (Bangalore) ಬನ್ನೇರುಘಟ್ಟ ರೋಡ್ ನೈಸ್ ಟೋಲ್ ಗೇಟ್ (Bannerghatta nice road toll) ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು ,ಸತ್ಯ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.
ರಾಮನಗರ(Ramnagar) ಮೂಲದ ಮೂವರು ಯುವಕರ ತಂಡ , ಸ್ಕಾರ್ಪಿಯೋ ಕಾರ್ (Scrorpio) ನಲ್ಲಿ ಬೆಂಗಳೂರು ಮಾರ್ಗವಾಗಿ ಗೋವಾ (Goa)ಗೆ ತೆರಳುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಅತಿ ವೇಗದಿಂದ ಬಂದ ಸ್ಕಾರ್ಪಿಯೋ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಮಳೆಯಿಂದಾಗಿ ರಸ್ತೆ ತೇವವಾಗಿದ್ದರಿಂದ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ನಿಯಂತ್ರಣ ತಪ್ಪಿ ಡಿವೈಡರಗೆ ಡಿಕ್ಕಿ ಹೊಡೆದು, ಎದುರಿನಿಂದ ಬರುತ್ತಿದ್ದ xuv700 ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿ ಸ್ಕಾರ್ಪಿಯೋ ಕಾರಿನಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ.
ಇನ್ನು ಎಕ್ಸ್ ಯು ವಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹಲವರಿಗೂ ಗಾಯಗಳಾಗಿದ್ದು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ . ತಕ್ಷಣ ಸ್ಥಳೀಯರು ಎಲ್ಲರನ್ನು ಸ್ಥಳಿಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.