ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ( Tamilnadu CM M K Stalin) ಅವರು ಕೇಂದ್ರದ ಉದ್ದೇಶಿತ ಡಿಲಿಮಿಟೇಶನ್ ಯೋಜನೆಗಳ ಬಗ್ಗೆ, ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ನವವಿವಾಹಿತ ದಂಪತಿಗಳು ತಕ್ಷಣವೇ ಮಕ್ಕಳನ್ನು ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ. ನವವಿವಾಹಿತರು (Unmarried) ಸಮಯ ಹೊಂದಾಣಿಕೆ ಮಾಡಿಕೊಂಡು ಮಕ್ಕಳನ್ನು ಪಡೆಯಿರಿ ಎಂದು ನಾನು ಈ ಹಿಂದೆ ಕೇಳುತ್ತಿದ್ದೆ. ಆದರೆ ಇನ್ನು ಮುಂದೆ ಇಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಹೇಳಿದ್ದಾರೆ.

‘ಆದರೆ ಈಗ ಕೇಂದ್ರ ಸರ್ಕಾರ ಜಾರಿಗೆ ತರಲು ಯೋಜಿಸುತ್ತಿರುವ ಡಿಲಿಮಿಟೇಶನ್ ನಂತಹ ನೀತಿಗಳೊಂದಿಗೆ, ನಾವು ಅದನ್ನು ಹೇಳಲು ಸಾಧ್ಯವಿಲ್ಲ. ನಾವು ಕುಟುಂಬ ಯೋಜನೆಯತ್ತ ಗಮನ ಹರಿಸಿದ್ದೇವೆ ಮತ್ತು ಯಶಸ್ವಿಯಾಗಿದ್ದೇವೆ ಮತ್ತು ಈ ರೀತಿಯ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದೇವೆ. ಆದ್ದರಿಂದ ನಾನು ಈಗ ನವವಿವಾಹಿತರನ್ನು ತಕ್ಷಣವೇ ಮಕ್ಕಳನ್ನು ಹೊಂದಲು ಮತ್ತು ಅವರಿಗೆ ಉತ್ತಮ ತಮಿಳು ಹೆಸರನ್ನು ನೀಡುವಂತೆ ಒತ್ತಾಯಿಸುತ್ತೇನೆ” ಎಂದು ಸಿಎಂ ಸ್ಟಾಲಿನ್ ಹೇಳಿದರು.