
ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್‌ಗೆ ಎಐಸಿಸಿಯಿಂದ ಹೊಸ ಜವಬ್ದಾರಿ ನೀಡಲಾಗಿದೆ. ಹರಿಯಾಣ ರಾಜ್ಯದ ಉಸ್ತುವಾರಿಯಗಿ ನೇಮಕ ಮಾಡಿ ಕಾಂಗ್ರೆಸ್ ಹೈಕಮಾಂಡ್ ಆದೇಶ ಮಾಡಿದೆ. ಜೊತೆಗೆ ವಿವಿಧ ರಾಜ್ಯಗಳಿಗೆ ಉಸ್ತುವಾರಿಗಳನ್ನೂ ನೇಮಿಸಿದೆ ಎಐಸಿಸಿ. ರಾಜ್ಯದ ಇಬ್ಬರು ನಾಯಕರಿಗೆ ಹೊರ ರಾಜ್ಯಗಳ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕ ಮಾಡಿದೆ. ಬಿ.ಕೆ.ಹರಿಪ್ರಸಾದ್‌ಗೆ ಹರಿಯಾಣ ಉಸ್ತುವಾರಿ ಆದರೆ ಡಾ.ಸೈಯದ್ ನಾಸಿರ್ ಹುಸೇನ್‌ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೊತೆಗೆ ಜಮ್ಮು ಕಾಶ್ಮೀರ ಉಸ್ತುವಾರಿ ನೀಡಿದೆ.

ಇನ್ನುಳಿದಂತೆ ಭೂಪೇಶ್ ಬಗೇಲ್ ಅವರನ್ನು ಪಂಜಾಬ್ ಉಸ್ತುವಾರಿ, ರಜನಿ ಪಾಟೀಲ್‌ಗೆ ಹಿಮಾಚಲ ಪ್ರದೇಶ್& ಚಂಢಿಗಡ ಉಸ್ತುವಾರಿ, ಹರೀಶ್ ಚೌಧರಿಗೆ ಮಧ್ಯಪ್ರದೇಶ ಉಸ್ತುವಾರಿ, ಗಿರೀಶ್ ಚೋಡಂಕರ್ – ತಮಿಳುನಾಡು & ಪಾಂಡಿಚೇರಿ ಉಸ್ತುವಾರಿ. ಅಜಯ್ ಕುಮಾರ್ ಲಲ್ಲು – ಒಡಿಶಾ ಉಸ್ತುವಾರಿ ಆಗಿ ನೇಮಕ ಆಗಿದ್ದಾರೆ.

ಕೆ.ರಾಜು ಅವರನ್ನು ಜಾರ್ಖಾಂಡ್ ಉಸ್ತುವಾರಿ, ಮೀನಾಕ್ಷಿ ನಟರಾಜನ್ ಅವರಿಗೆ ತೆಲಂಗಾಣ ಉಸ್ತುವಾರಿ, ಸಪ್ತಗಿರಿ ಸಂಕರ್ ಅವರನ್ನು ಮಣಿಪುರ, ತ್ರಿಪುರ, ಸಿಕ್ಕಿಂ, ನಾಗಲ್ಯಾಂಡ್ ಉಸ್ತುವಾರಿ ಕೃಷ್ಣ ಅಳ್ಳವರು ಅವರನ್ನು ಬಿಹಾರ ಉಸ್ತುವಾರಿ ಆಗಿ ನೇಮಕ ಮಾಡಿದ್ದು. ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಆದ ಬಳಿಕ ಸುರ್ಜೆವಾಲ ಬದಲಾವಣೆಗೆ ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ. ಸಿಎಂ ಬಣದಿಂದ ಗೋಬ್ಯಾಕ್ ಸುರ್ಜೆವಾಲ ಎಂದು ಆಂತರಿಕ ಅಭಿಯಾನ ಮಾಡಲಾಗಿತ್ತು. ಹೀಗಾಗಿ ರಾಜ್ಯ ಉಸ್ತುವಾರಿಯೂ ಬದಲಾಗುವ ಸಾಧ್ಯತೆ