ದೇಶದಲ್ಲಿ ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು ಇನ್ನು ಮುಂದೆ ಹೊಸ ಗ್ಯಾಸ್ ಕನೆಕ್ಷನ್ ಹೆಚ್ಚುವರಿ ಮತ್ತವನ್ನ ಠೇವಣಿಯನ್ನಾಗಿ ಇಡಬೇಕಾಗುತ್ತದೆ. ಈ ಮೂಲಕ ಹೊಸದಾಗಿ ಗ್ಯಾಸ್ ಸಂಪರ್ಕ ಪಡೆಯುವುದು ದುಬಾರಿ ಆಗಿದೆ.
ನೂತನ ದರವು ಜೂನ್ 16, 2022ರಿಂದಲೇ ಜಾರಿಗೆ ಬರುತ್ತದೆ ಎಂದು ತಿಳಿಸಲಾಗಿದೆ. ಈ ಹಿಂದೆ ಗ್ರಾಹಕರು 1450 ರೂ. ಕನೆಕ್ಷನ್ ಶುಲ್ಕವಾಗಿ ಪಾವತಿಸುತ್ತಿದ್ದರು. ಇನ್ನು ಮುಂದೆ 2200 ರೂ. ಪಾವತಿಸಬೇಕಾಗುತ್ತದೆ. ಅಂದರೆ ಹಿಂದಿನ ದರಕ್ಕೆ ಹೋಲಿಸಿದೆ ಇನ್ನು ಮುಂದೆ ಹೆಚ್ಚವರಿಐಾಗಿ 750 ರೂ. ನೀಡಬೇಕಾಗುತ್ತದೆ.

14.2ಕೆಜಿಯ ಎರಡು ಸಿಲಿಂಡರ್ ಗಳನ್ನು ಪಡೆಯುವವರು 4400 ರೂ. ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಗ್ಯಾಸ್ ರೆಗ್ಯುಲೇಟರ್ ದರ ಸಹ 150 ರೂ.ನಿಂದ 250 ರೂ.ಗೆ ಏರಿಕೆಯಾಗಿದ್ದು, ಬರೋಬ್ಬರಿ 100 ರೂ. ಏರಿಕೆಯಾಗಿದೆ.ʼ
5 ಕೆಜಿ ಸಿಲಿಂಡರ್ ಪಡೆಯುವವರು ಭದ್ರತಾ ಶುಲ್ಕವನ್ನ 350 ರೂಪಾಯಿ ಏರಿಸಲಾಗಿದೆ. ಅಂದರೆ, ಈ ಹಿಂದೆ 800 ರೂಪಾಯಿ ಇದ್ದ ದರ ಇದೀಗ 1150 ರೂಪಾಯಿಗೆ ಏರಿಸಲಾಗಿದೆ. ಇದರ ಜೊತೆಗೆ ಪಾಸ್ ಬುಕ್ಕಿಗೆ 25 ರೂಪಾಯಿ, ಪೈಪ್ಗೆ 150 ರೂಪಾಯಿ ಹಾಗು ಸಿಲಿಂಡರ್ ಜೊತೆಗೆ ಸ್ಟೌವ್ ಖರೀದಿಸಲು ಹೆಚ್ಚುವರಿ ಶುಲ್ಕವನ್ನ ಪಾವತಿಸಬೇಕಾಗುತ್ತದೆ.