ಕೇಂದ್ರ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ನೇಮಕಗೊಂಡಿದ್ದಾರೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಂಗಳವಾರ ಟ್ವೀಟರ್ ನಲ್ಲಿ ಈ ವಿಷಯ ಪ್ರಕಟಿಸಿದ್ದಾರೆ.

ಹಾಲಿ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಕುಮಾರ್ ಅವರ ಅಧಿಕಾರಾವಧಿ ಮೇ ೧೪ರಂದು ಕೊನೆಗೊಳ್ಳಲಿದೆ. ನೂತನವಾಗಿ ನೇಮಕಗೊಂಡಿರುವ ರಾಜೀವ್ ಕುಮಾರ್ ಚುನಾವಣಾಧಿಕಾರಿಯಾಗಿ ಮೇ ೧೫ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
೧೯೮೪ ಬ್ಯಾಚ್ ನ ಐಎಎಸ್ ಅಧಿಕಾರಿ ಆಗಿರುವ ರಾಜೀವ್ ಕುಮಾರ್, ೨೦೨೦ರಲ್ಲಿ ರಾಜೀವ್ ಕುಮಾರ್ ಚುನಾವಣಾ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದಕ್ಕೂ ಮುನ್ನ ಉದ್ಯಮಗಳ ಮಂಡಳಿ, ಜಾರ್ಖಂಡ್ ಆಡಳಿತಾತ್ಮಕ ಸೇವೆ, ಕೇಂದ್ರ ಹಣಕಾಸು ಸಚಿವಾಲಯ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.