ಎಐಸಿಸಿ(AICC President) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna kharge) ಪ್ರಧಾನಿ ನರೇಂದ್ರ ಮೋದಿ (Pm narendra modi) ಮತ್ತು ಎನ್.ಡಿ.ಎ (NDA) ಸರ್ಕಾರದ ವಿರುದ್ಧ ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡುವುದರ ಮೂಲಕ ಹರಿಹರಿದ್ದಾರೆ . ಗುಜರಾತ್(Gujarat )ನ ದಲಿತ ಕುಟುಂಬ ಒಂದನ್ನ ಗುರಿಯಾಗಿಸಿಕೊಂಡು ಮೋದಿ ಮತ್ತು ಅವರ ಬಿಜೆಪಿ ಪಕ್ಷ , ಯಾವ ರೀತಿ ಬ್ರಷ್ಟಾಚಾರ ಮಾಡಿದೆ ಎಂಬುದನ್ನು ಒಂದು ವರದಿ ರೂಪದಲ್ಲಿ ಮಲ್ಲಿಕಾರ್ಜುನ ಖರ್ಗೆ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ನಲ್ಲಿ ಪೇಪಿಎಂ (Pay pm) ಎಂಬ ಹಾಶ್ ಟ್ಯಾಗ್ ಬೆಳೆಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ಈ ಕಥೆಯು ಬಿಜೆಪಿಯ ಭ್ರಷ್ಟಾಚಾರ, ರೈತ ಮತ್ತು ದಲಿತ ವಿರೋಧಿ ಮನಸ್ಥಿತಿ, ಕ್ರೋನಿ ಕ್ಯಾಪಿಟಲಿಸಂ-ಎಲ್ಲವನ್ನೂ ಬಯಲು ಮಾಡಲಿದೆ ಎಂದು ಹೇಳಿದ್ದಾರೆ.

ಅಸಾಂವಿಧಾನಿಕ ಎಲೆಕ್ಟೋರಲ್ ಬಾಂಡ್‌ಗಳ (Electiral bonds) ಮೂಲಕ ಹಣ ವಸೂಲಿ ಮಾಡುವ ದುರಾಸೆಯಲ್ಲಿ ಬಿಜೆಪಿ (BJP)ಗುಜರಾತ್‌ನಲ್ಲಿ ದಲಿತ ಕುಟುಂಬವನ್ನು ದಬ್ಬಾಳಿಕೆ ಮಾಡಿದೆ. ಬಿಜೆಪಿಯ ಸ್ಥಳೀಯ ನಾಯಕತ್ವದ ‘ಡಬಲ್ ಇಂಜಿನ್’ (Double engine) ತಂಡ ಮತ್ತು ಮೋದಿಯವರ ಆಪ್ತ ಮಿತ್ರನ ಗುಂಪು ಬೆದರಿಕೆ ಮತ್ತು ವಂಚನೆಯ ಮೂಲಕ ದಲಿತ ರೈತ ಕುಟುಂಬಕ್ಕೆ ಸೇರಿದ ಜಮೀನನ್ನು ಕಿತ್ತುಕೊಂಡು, ಚುನಾವಣಾ ಬಾಂಡ್‌ಗಳ ಸುಲಿಗೆ ದಂಧೆಯಲ್ಲಿ ₹10 ಕೋಟಿ(10 crores) ಹೂಡಿಕೆ ಮಾಡುವಂತೆ ಒತ್ತಾಯಿಸಿದೆ ಎಂದು ವರದಿಯಾಗಿದೆ!

ಈ ಮೂಲಕ ನರೇಂದ್ರ ಮೋದಿ ಜೀ ಮತ್ತು ಬಿಜೆಪಿ ಭ್ರಷ್ಟರಲ್ಲ, ಅವರು ತಮ್ಮ ಅಜ್ಞಾನವನ್ನು ಬಳಸಿಕೊಂಡು ಜನರನ್ನು ಹೇಗೆ ವಂಚಿಸುತ್ತಾರೆ ಎಂಬ ಸತ್ಯವನ್ನು ತಿಳಿದಿರಬೇಕು! ಎಂದು ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.