ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ಹಾಗು ಲಖನೌ ಸೂಪರ್ ಜೈಯಂಟ್ಸ್(LSG) ನಡುವಿನ ಪಂದ್ಯಕ್ಕು ಮುನ್ನ ಎಲ್ಎಸ್ಜಿ ತಂಡದ ಅಧಿಕೃತ ಇನ್ಸ್ಟಾಗ್ರಾಂ ಪೇಜ್ನಲ್ಲಿ ಗ್ಯಾಂಗ್ಸ್ ಆಫ್ ವಸ್ಸೇಪುರ್ ಚಿತ್ರದ ಡೈಲಾಗ್ ಅನ್ನು ಹಾಕಿ ಎದುರಾಳಿ ತಂಡವನ್ನು ಟೀಕಿಸಿದಂತಿತ್ತು.
ಬೇಟಾ ತುಮ್ ಸೇ ನಾ ಹೋ ಪಾಯೇಗಾ ಎಂದು ಪ್ಲೇಯಿಂಗ್ XI ಅನ್ನು ಪೋಸ್ಟ್ ಮಾಡಿದೆ. ಅಂದರೆ ಮಗನೇ ಇದು ನಿನ್ನಿಂದ ಸಾಧ್ಯವಿಲ್ಲ ಎಂಬ ಅರ್ಥದಲ್ಲಿ ಚಿತ್ರವನ್ನು ಪೋಸ್ಟ್ ಮಾಡಿತ್ತು. ಆದರೆ, ಲಕನೌ ತಂಡ ಅಂದುಕೊಂಡಂತೆ ನಡೆಯಲಿಲ್ಲ ಆರ್ಸಿಬಿ ತಂಡದ ಸರ್ವಾಂಗೀಣ ಪ್ರದರ್ಶನದ ಫಲವಾಗಿ ಎಲ್ಎಸ್ಜಿ 18 ರನ್ಗಳ ಸೋಲನ್ನು ಕಂಡಿತ್ತು.
ಲಕನೌ ತಂಡದ ಪೋಸ್ಟ್ಗೆ ಕೆರಳಿದ ಆರ್ಸಿಬಿ ಅಭಿಮಾನಿಗಳು ಪಂದ್ಯ ಮುಗಿದ ನಂತರ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಅತಿಯಾದ ಆತ್ಮ ವಿಶ್ವಾಸ ಒಳ್ಳೆಯದಲ್ಲ ಎಂದು ಒಬ್ಬರು ಬರೆದಿದ್ದರೆ ಮತ್ತೊಬ್ಬರು ಬೇಗನೆ ಎಂದು ಆಚರಣೆಯನ್ನು ಶುರು ಮಾಡಬೇಡಿ ಎಂದು ಹೇಳಿದ್ದಾರೆ. ಇದು ನಿಮ್ಮಗೆ ಆಗಬೇಕಾಗಿದೆ ಎಂದು ಒಬ್ಬರು ಹೇಳಿದ್ದಾರೆ ಇನ್ನೊಬ್ಬರು ಓವರ್ ಕಾನ್ಫಿಡೆಂಟ್ ಅಡ್ಮಿನ್ ಇದು ನಿಮ್ಮಿಂದ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇತ್ತ ಇದನ್ನು ಗಮನಿಸುತ್ತಿದ್ದ ಆರ್ಸಿಬಿ ತಂಡ KGF ಚಿತ್ರದ ದೃಶ್ಯವೊಂದನ್ನು ಬಳಸಿಕೊಂಡು ತಿರುಗೇಟು ನೀಡಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಕ್ರಿಕೆಟಿಗ ದೊಡ್ಡ ಗಣೇಶ್ ಕ್ರಿಕೆಟ್ನಲ್ಲಿ ತಮಾಷೆಗಾಗಿ ಕಾಲೆಳೆದುಕೊಳ್ಳುವುದು ಸ್ವಾಗತಾರ್. ಆದರೆ, ಎಂದಿಗೂ ಟ್ರೋಲ್ ಮಾಡಿಲ್ಲ 2008ರಿಂದಲೂ ಐಪಿಎಲ್ನ ಭಾಗವಾಗಿರುವ ತಂಡವನ್ನು ಬೇಟಾ ಎಂದು ಕರೆಯುವುದು ಸರಿಯಲ್ಲ ದಯವಿಟ್ಟು ತಿದ್ದಿಕೊಳ್ಳಿ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.