ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರಬೋಸ್ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನಾಯಕರು ನಮ್ಮ ದೂರದೃಷ್ಟಿಗಳನ್ನು ಪ್ರಚಾರ ಮಾಡುವ ಭರವಸೆಗಳನ್ನು ಈಡೇರಿಸಲಿಲ್ಲ ಎಂದು ಹೇಳಿದ್ದಾರೆ.
ದೆಹಲಿ : ನೇತಾಜಿ ಸುಭಾಷ್ ಚಂದ್ರ ಬೋಸ್ (Subhas chandra Bose) ಅವರ ಮೊಮ್ಮಗ ಚಂದ್ರಬೋಸ್ (Chandra Bose) ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ (BJP) ನಾಯಕರು ನಮ್ಮ ದೂರದೃಷ್ಟಿಗಳನ್ನು ಪ್ರಚಾರ ಮಾಡುವ ಭರವಸೆಗಳನ್ನು ಈಡೇರಿಸಲಿಲ್ಲ ಎಂದಿದ್ದಾರೆ. ಚಂದ್ರಬೋಸ್ ಅವರು 2016ರಲ್ಲಿ ಬಿಜೆಪಿ ಸೇರಿದ್ದರು ಮತ್ತು 2016ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡು ಬಾರಿ ಸ್ಪರ್ಧಿಸಿದ್ದರು. ನಾನು ಬಿಜೆಪಿಗೆ ಸೇರಿದಾಗ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಶರತ್ ಚಂದ್ರ ಬೋಸ್ ಅವರನ್ನು ಒಳಗೊಳ್ಳುವ ಸಿದ್ಧಾಂತವನ್ನು ಪ್ರಚಾರ ಮಾಡಲು ನನಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಲಾಯಿತು. ಆದರೆ ಈ ಬಗ್ಗೆ ಪಕ್ಷದ ನಾಯಕರು ಯಾವುದೇ ರೀತಿಯ ಬೆಂಬಲವನ್ನು ನೀಡುತ್ತಿಲ್ಲ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನು ಸಹ ಓದಿ: ಆ ಮ್ಯಾನೇಜರ್ ಒಬ್ಬನಿಂದಲೇ ನನಗೆ ದೊಡ್ಡ ಸಿನಿಮಾಗಳು ಕೈ ತಪ್ಪಿದ್ದವು : ಗದರ್-2 ಚಿತ್ರದ ನಾಯಕಿ ಅಮೀಷಾ ಪಟೇಲ್
2016ರಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷರಾಗಿ ನೇಮಕಗೊಂಡ ಚಂದ್ರ ಬೋಸ್ ಅವರನ್ನು 2020ರ ಸಾಂಸ್ಥಿಕ ಪುನರ್ ರಚನೆ ಸಮಯದಲ್ಲಿ ಅವರನ್ನು ಇದರಿಂದ ಕೈಬಿಡಲಾಯಿತು. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಚಂದ್ರ ಬೋಸ್, ನನ್ನ ಚರ್ಚೆಗಳು (ಬಿಜೆಪಿಯೊಂದಿಗೆ) ಆಗ ಬೋಸ್ ಸಹೋದರರ (ನೇತಾಜಿ ಮತ್ತು ಅವರ ಹಿರಿಯ ಸಹೋದರ ಶರತ್ ಚಂದ್ರ ಬೋಸ್, ಸ್ವಾತಂತ್ರ್ಯ ಹೋರಾಟಗಾರ) ಅಂತರ್ಗತ ಸಿದ್ಧಾಂತದ ಮೇಲೆ ಕೇಂದ್ರೀಕೃತವಾಗಿತ್ತು. ಆಗ ಮತ್ತು ನಂತರ, ನಾನು ಈ ಸಿದ್ಧಾಂತವನ್ನು ಎಲ್ಲೆಡೆ ಪ್ರಚಾರ ಮಾಡುತ್ತೇನೆ ಎಂಬುದನ್ನು ಹೇಳಿ ಬಿಜೆಪಿಗೆ ಸೇರಿದ್ದೆ, ಜತೆಗೆ ಇದು ನನ್ನ ಪ್ರಮುಖ ಕಾರ್ಯವಾಗಿತ್ತು.
ಬಿಜೆಪಿ ವೇದಿಕೆಯಲ್ಲಿ ದೇಶ, ಧರ್ಮ, ಜಾತಿ ಮತ್ತು ಪಂಥದ ಭೇದವಿಲ್ಲದೆ ಎಲ್ಲಾ ಸಮುದಾಯಗಳನ್ನು ಭಾರತೀಯರಾಗಿ ಒಗ್ಗೂಡಿಸುವ ನೇತಾಜ್ ಅವರ ಸಿದ್ಧಾಂತವನ್ನು ಪ್ರಚಾರ ಮಾಡುವ ಪ್ರಾಥಮಿಕ ಉದ್ದೇಶದೊಂದಿಗೆ ಬಿಜೆಪಿಯ ಚೌಕಟ್ಟಿನೊಳಗೆ ಆಜಾದ್ ಹಿಂದ್ ಮೋರ್ಚಾವನ್ನು ರಚಿಸಲು ನಿರ್ಧರಿಸಲಾಯಿತು. ಆದರೆ ನನಗೆ ಈ ಯಾವುದಕ್ಕೂ ಅವಕಾಶಗಳನ್ನು ಬಿಜೆಪಿ ಸರಿಯಾಗಿ ನೀಡಿಲ್ಲ ಮತ್ತು ಬೆಂಬಲವನ್ನು ಕೊಟ್ಟಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ರಾಜೀನಾಮೆ ಪತ್ರ ನೀಡಲಾಗಿದೆ ಎಂದು ಹೇಳಿದ್ದಾರೆ.
ಚಂದ್ರ ಬೋಸ್ ಅವರ ಹಲವಾರು ವಿಷಯಗಳ ಬಗ್ಗೆ ರಾಜ್ಯ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಚಂದ್ರ ಬೋಸ್ ಅವರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ವಕ್ತಾರ ಸಮಿಕ್ ಭಟ್ಟಾಚಾರ್ಯ ಅವರು ಚಂದ್ರ ಬೋಸ್ ಅವರು 2019ರಲ್ಲಿ ಸಿಎಎಯನ್ನು ವಿರೋಧಿಸಿದ್ದಾರೆ. ಪಕ್ಷದ ನೀತಿ ನಿಯಮಗಳ ರೇಖೆಗೆ ವಿರುದ್ಧವಾಗಿದ್ದಾರೆ. ಸಾಕಷ್ಟು ಸಮಯದಿಂದ ಅವರು ಪಕ್ಷದ ಕಾರ್ಯಚಟುವಟಿಕೆಯಿಂದ ದೂರವಿದ್ದರು ಎಂದು ಹೇಳಿದ್ದಾರೆ.