ಮ್ಯಾಗಿ, ಕಿಟ್‌ಕ್ಯಾಟ್ ತಯಾರಕ ‘ನೆಸ್ಲೆ’ಯ 60% ಆಹಾರ ಉತ್ಪನ್ನಗಳು ಅನಾರೋಗ್ಯಕರ: ಕಂಪೆನಿಯ ಆಂತರಿಕ ವರದಿ ಬಹಿರಂಗ

ಜನಪ್ರಿಯ ಆಹಾರ ಉತ್ಪನ್ನಗಳಾದ ಮ್ಯಾಗಿ, ಕಿಟ್‌ಕ್ಯಾಟ್, ನೆಸ್‌ಕೆಫೆಗಳನ್ನು ತಯಾರಿಸುವ ನೆಸ್ಲೆ ಕಂಪೆನಿಯ ಆಂತರಿಕ ದಾಖಲೆಯು, ಕಂಪೆನಿಯ ಒಟ್ಟು ಉತ್ಪನ್ನದ 60% ಆಹಾರ ಉತ್ಪನ್ನಗಳು ಆರೋಗ್ಯಕರ ಮಾನ್ಯತೆಯ ಮಾನದಂಡಗಳನ್ನು ತಲುಪುವುದಿಲ್ಲ ಎಂಬ ಅಂಶವನ್ನು ಬಹಿರಂಗಪಡಿಸಿದೆ. ಅಂದರೆ ಕಂಪೆನಿಯ 60 ಶೇಕಡಾ ಆಹಾರ, ಪಾನೀಯ ಉತ್ಪನ್ನಗಳು ಅನಾರೋಗ್ಯಕರ ಎಂದು ವರದಿಯಾಗಿದೆ. ಯುಕೆ ಮೂಲದ ಫಿನಾನ್ಷಿಯಲ್ ಟೈಮ್ಸ್‌ಗೆ ಲಭ್ಯವಾಗಿರುವ ಕಂಪೆನಿಯ ಆಂತರಿಕ ದಾಖಲೆಗಳಲ್ಲಿ ಈ ಅಂಶ ಬಯಲಾಗಿದೆ. 

ಕಂಪೆನಿಯ ಕೆಲವು ಉತ್ಪನ್ನಗಳು ಎಂದಿಗೂ ಆರೋಗ್ಯಕರವಾಗುವುದಿಲ್ಲ ಎನ್ನುವುದನ್ನೂ ದಾಖಲೆಗಳು ಹೇಳಿವೆ. 2021 ರ ಆರಂಭದಲ್ಲಿ ಕಂಪೆನಿಯ ಉನ್ನತಾಧಿಕಾರಿಗಳಿಗಾಗಿ ತಯಾರಿಸಿದ ಈ ದಾಖಲೆಯಲ್ಲಿ,  ಕಂಪೆನಿಯ ಕೆಲವು ವರ್ಗದ ಉತ್ಪನ್ನಗಳನ್ನು ಎಷ್ಟು ನವೀಕರಿಸಿದರೂ, ಅವು ಆರೋಗ್ಯಕರವಾಗಿರುವುದಿಲ್ಲ ಎಂದು ತಿಳಿಸಲಾಗಿದೆ. 


ವೈದ್ಯಕೀಯ ಪೋಷಣೆ, ಸಾಕುಪ್ರಾಣಿಗಳ ಆಹಾರ, ಕಾಫಿ ಮತ್ತು ಮಕ್ಕಳ ಆಹಾರ ಉತ್ಪನ್ನಗಳ ವಿಭಾಗಗಳನ್ನು ವಿಶ್ಲೇಷಣೆಯಿಂದ ಹೊರಗಿಡಲಾಗಿರುವುದರಿಂದ ಮೌಲ್ಯಮಾಪನವು ನೆಸ್ಲೆಯ ಒಟ್ಟಾರೆ ಬಂಡವಾಳದ ಅರ್ಧದಷ್ಟು ಭಾಗಕ್ಕೆ ಅನ್ವಯಿಸುತ್ತದೆ ಎಂದು ದಾಖಲೆಗಳಲ್ಲಿ ವ್ಯಕ್ತವಾಗಿದೆ. 
 ಆಸ್ಟ್ರೇಲಿಯಾದ ಹೆಲ್ತ್ ಸ್ಟಾರ್ ರೇಟಿಂಗ್ ಸಿಸ್ಟಮ್ ಅಡಿಯಲ್ಲಿ ಕಂಪೆನಿಯ ಶೇಕಡಾ 37 ರಷ್ಟು ಆಹಾರ ಮತ್ತು ಪಾನೀಯಗಳು ಮಾತ್ರ 5 ರಲ್ಲಿ 3.5 ಕ್ಕಿಂತ ಹೆಚ್ಚು ರೇಟಿಂಗ್ ಗಳಿಸಿದೆ.  ದಾಖಲೆಯ ಪ್ರಕಾರ, 3.5 ಪಾಯಿಂಟ್ ಗಿಂತ ಕೆಳಗಿರುವುದು ‘ಆರೋಗ್ಯ ಮಾನ್ಯತೆ’ಯನ್ನು ಪಡೆಯುವುದಿಲ್ಲ. 

JJಕಂಪನಿಯ ನೀರು ಮತ್ತು ಡೈರಿ ಉತ್ಪನ್ನಗಳು ಹೆಚ್ಚಿನ ಪ್ರಮಾಣದಲ್ಲಿ ಈ ಮಾನದಂಡವನ್ನು ತಲುಪುತ್ತವೆ. 82%ನೀರು  ಮತ್ತು 60% ಕ್ಕಿಂತ ಹೆಚ್ಚು ಡೈರಿ ಉತ್ಪನ್ನಗಳು 3.5 ರ ಮಿತಿಯನ್ನು ತಲುಪುತ್ತದೆ ಎಂದು ಆಂತರಿಕ ಸಮೀಕ್ಷೆಯ ವರದಿಯು ತಿಳಿಸಿದೆ. ಆರೋಗ್ಯಕರ ಆಹಾರದ ವ್ಯಾಖ್ಯಾನಗಳಿಗೆ ವಿರುದ್ಧವಾಗಿ ಕಂಪೆನಿಯ ಆಹಾರ ಉತ್ಪನ್ನಗಳು ಉತ್ಪತ್ತಿಯಾಗುತ್ತಿವೆ ಎಂದೂ ದಾಖಲೆಗಳು ಧೃಡೀಕರಿಸಿವೆ. 


ನಮ್ಮ ಉತ್ಪನ್ನಗಳಲ್ಲಿ ನಾವು ಗಮನಾರ್ಹ ಸುಧಾರಣೆಗಳನ್ನು ಮಾಡಿದ್ದೇವೆ. ಆದರೆ ನಿಯಂತ್ರಕ ಒತ್ತಡ ಮತ್ತು ಗ್ರಾಹಕರ ಬೇಡಿಕೆಗಳು ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯದ  ವ್ಯಾಖ್ಯಾನಗಳಿಗೆ  ತಕ್ಕಂತೆ ನಮ್ಮ ಉತ್ಪನ್ನಗಳು ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ ”ಎಂದು ಆಂತರಿಕ ಪ್ರಸ್ತುತಿ ಹೇಳಿದೆ.ತನ್ನ ಆಂತರಿಕ ದಾಖಲೆಗಳು ಬಹಿರಂಗಗೊಂಡ ಬೆನ್ನಲ್ಲೇ ಕಂಪೆನಿಯು, ಹಾನಿಯನ್ನು ಕಡಿಮೆಗೊಳಿಸಲು ಪ್ರಯತ್ನಿಸಿದೆ. ಆರೋಗ್ಯಕರ ಆಹಾರ ಉತ್ಪನ್ನಗಳ ಕುರಿತು ಜಾಹಿರಾತನ್ನು ಹೆಚ್ಚಿಸಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...