ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ(neha hiremath) ಹತ್ಯೆಯ ತನಿಖೆ ಚುರುಕುಗೊಂಡಿದೆ.ರಾಜ್ಯ ಸರ್ಕಾರವು ನೇಹಾ ಹತ್ಯೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಿದ್ದು, ಅಧಿಕಾರಿಗಳು ತನಿಖೆಯನ್ನು ಚುರುಕುಗೊಳ್ಳಿಸಿದ್ದಾರೆ. ಕಾರಾಗೃಹದಲ್ಲಿದ್ದ ಆರೋಪಿ ಫಯಾಜ್ ಕರೆತಂದು ನಿನ್ನೆ ಸ್ಥಳ ಮಹಜರು ಮಾಡಲಾಗಿತ್ತು. ಇವತ್ತು ಗುರುವಾರ ಸಿಐಡಿ ಅಧಿಕಾರಿಗಳು ನೇಹಾ ತಂದೆ-ತಾಯಿಗಳ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ.
ಹುಬ್ಬಳ್ಳಿಯ ಬಿಡ್ನಾಳದಲ್ಲಿರುವ ನೇಹಾ ನಿವಾಸಕ್ಕೆ ಸಿಐಡಿ ಅಧಿಕಾರಿಗಳು ಭೇಟಿ ನೀಡಿದರು. ಸಿಐಡಿ ಎಡಿಜಿಪಿ ಬಿಕೆ ಸಿಂಗ್, ಎಸ್‌ಪಿ ವೆಂಕಟೇಶ ನೇತೃತ್ವದ ತಂಡ ಸುಮಾರು ಒಂದು ಗಂಟೆಗಳ ಸುದೀರ್ಘ ವಿಚಾರಣೆಯನ್ನು ನಡೆಸಿದರು. ನಂತರ ನೇಹಾ ತಂದೆ ನಿರಂಜನ್ ಹಿರೇಮಠ್, ತಾಯಿ ಗೀತಾರಿಂದ ಹೇಳಿಕೆಯನ್ನು ಪಡೆದರು.ನೇಹಾ ಹತ್ಯೆ ಪ್ರಕರಣ ಸಂಬಂಧ ಹುಬ್ಬಳ್ಳಿಯ ಬಿವಿಬಿ ಕಾಲೇಜಿಗೆ ಆರೋಪಿ ಫಯಾಜ್‌ನನ್ನು ಸಿಐಡಿ ಅಧಿಕಾರಿಗಳು ಬುಧವಾರ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದರು. ಆರು ದಿನಗಳ ಕಾಲ ಕಸ್ಟಡಿಗೆ ನೀಡಿದ ಹಿನ್ನೆಲೆ ಆರೋಪಿಯನ್ನು ಧಾರವಾಡದ ಕಾರಾಗೃಹದಿಂದ ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿತ್ತು. ಇದೀಗ ನೇಹಾ ತಂದೆ- ತಾಯಿಯಿಂದ ಮತ್ತಷ್ಟು ಮಾಹಿತಿಯನ್ನು ಕಲೆಹಾಕಿರುವ ಸಿಐಡಿ ಅಧಿಕಾರಿಗಳು ಮಹತ್ವದ ಮಾಹಿತಿ ಸಂಗ್ರಹ ಮಾಡಿದ್ದಾರೆ.
ಫಯಾಜ್ ನೇಹಾಳನ್ನು ಹತ್ಯೆ ಮಾಡಲು ಧಾರವಾಡದಲ್ಲೇ ಚಾಕು ಖರೀದಿ ಮಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಚಾಕು ಖರೀದಿಸಿದ ಸ್ಥಳ, ಸ್ನೇಹಿತರ ಭೇಟಿಯಾದ ಸ್ಥಳಗಳಿಗೆ ಸಿಐಡಿ ಟೀಂ ಭೇಟಿ ನೀಡುವ ಸಾಧ್ಯತೆ ಇದೆ.
ಲವ್ ಮಾಡೋಕೆ ನಿರಾಕರಿಸಿದ್ದಳು ಎಂಬ ಕಾರಣಕ್ಕಾಗಿ ಪ್ರೇಮಿ ಫಯಾಜ್ ಕಾರ್ಪೋರೇಟರ್ ಮಗಳನ್ನು ಭೀಕರವಾಗಿ ಕೊಲೆ ಮಾಡಿದ್ದ. ಚಾಕುವಿನಿಂದ 11ಕ್ಕೂ ಹೆಚ್ಚು ಬಾರಿ ಇರಿದು ಕೊಂದು ಎಸ್ಕೇಪ್ ಆಗಲು ಯತ್ನಿಸಿದ್ದ. ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲೇ ಈ ಹತ್ಯೆ ನಡೆದಿತ್ತು. ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಮಗಳು ನೇಹಾ ಹಿರೇಮಠ ಬರ್ಬರವಾಗಿ ಕೊಲೆಯಾಗಿದ್ದಳು.
ಯತ್ನಾಳ್ ರನ್ನು ಶಾಸಕ ಸ್ಥಾನದಿಂದ ವಜಾ ಮಾಡಿ ! ಚಿತ್ರದುರ್ಗದಲ್ಲಿ ಬಸವ ಬಳಗ ಪ್ರತಿಭಟನೆ!
ಚಿತ್ರದುರ್ಗದಲ್ಲಿ (Chitrdurga) ಬಿಜೆಪಿ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA basana gowda Patil yatnal) ಹೇಳಿಕೆ ಖಂಡಿಸಿ ರಾಷ್ಟ್ರೀಯ ಬಸವದಳದಿಂದ ಪ್ರತಿಭಟನೆ ನಡೆಸಲಾಗಿದೆ.ನಗರದ ಬಸವ...
Read moreDetails