ಹುಬ್ಬಳ್ಳಿಯ (Hubli) ನೇಹಾ (Neha) ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ.. ಕಾಲೇಜಿಗೆ ಹೋದ ಮಗಳು ಹೆಣವಾಗಿ ಮನೆಗೆ ಬಂದಿದ್ದು ಇಡೀ ಕರುನಾಡಿನ (Karnataka) ಜನರ ನೆತ್ತರು ಕುದಿಯುವಂತೆ ಮಾಡಿದೆ.. ಹಂತಕ ಫಯಾಜ್ ವಿರುದ್ಧ ಎಲ್ಲೆಡೆ ಆಕ್ರೋಶದ ಜ್ವಾಲೆ ಧಗಧಗಿಸಿದೆ.

ಇದೀಗ ಮುಸ್ಲಿಂ (Muslim) ಬಾಂಧವರು ಕೂಡ ನೇಹಾ ಪರವಾಗಿ ನ್ಯಾಯಕ್ಕಾಗಿ ಆಗ್ರಹಿಸ್ತಿದ್ದಾರೆ. ಅಂಜುಮನ್ ಇಸ್ಲಾಂ ಸಂಸ್ಥೆ (Anjuman Islam), ಧಾರವಾಡ (Dharwad) ಬಂದ್‌ಗೆ ಕರೆ ಕೊಟ್ಟಿದೆ. ಅದರಂತೆ ಇಂದು ಅರ್ಧ ದಿನ ಧಾರವಾಡ ಬಂದ್ ಮಾಡಲಾಗ್ತಿದೆ. ಮುಸ್ಲಿಂ ಸಮುದಾಯದ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಕ್ಲೋಸ್ ಆಗಿರಲಿದೆ.

ಇತ್ತ ರಾಜಕೀಯ ನಾಯಕರು ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ತನ್ನದೇ ಪಕ್ಷದ ನಾಯಕರ ಕುಟುಂಬಕ್ಕೆ ನ್ಯಾಯ ಕೊಡಿಸಲು ಸಿದ್ದರಾಮಯ್ಯ (siddaramaiah) ಮುಂದೆ ಬಂದಿಲ್ಲ ಅಂತಾ ಯಡಿಯೂರಪ್ಪ (yediyurappa) ಕಿಡಿಕಾರಿದ್ದರು.ನೇಹಾ ಹತ್ಯೆ ಖಂಡಿಸಿ, ಎಲ್ಲಾ ಜಾತಿ, ಎಲ್ಲಾ ಸಮುದಾಯದವರು ನ್ಯಾಯಕ್ಕೆ ಆಗ್ರಹಿಸ್ತಿದ್ದಾರೆ. ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಇದರಲ್ಲೂ ರಾಜಕೀಯ ನಡೀತಿರೋದು ಮಾತ್ರ ಕಲಿಯುಗದ ಅತಿದೊಡ್ಡ ದುರಂತ.