ನೀಟ್ (NEET) ಪರೀಕ್ಷೆಯ ಕುರಿತು ತಮಿಳು ನಟ ಸೂರ್ಯ ನೀಡಿದ ಹೇಳಿಕೆ ನ್ಯಾಯಾಂಗದ ಕೆಂಗಣ್ಣಿಗೆ ಗುರಿಯಾಗಿದೆ. ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿರುವ ಎಸ್ ಎಂ ಸುಬ್ರಹ್ಮಣ್ಯಂ, ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರವನ್ನು ಬರೆದಿದ್ದು, ಸೂರ್ಯ ಅವರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು ಎಂದು ಕೇಳಿಕೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭಾನುವಾರ ಸೂರ್ಯ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ನೀಟ್ ಪರೀಕ್ಷೆಯ ವಿರುದ್ದ ಕಿಡಿಕಾರಿದ್ದರು. ಕೋವಿಡ್‌ನಂತಹ ವಿಷಮ ಪರಿಸ್ಥಿತಿಯಲ್ಲಿ ನೀಟ್ ಪರೀಕ್ಷೆ ನಡೆಸುವ ಅಗತ್ಯ ಏನಿತ್ತು? ಇಂಟರ್ನೆಟ್ ಇರುವಂತಹ ಹಾಗೂ ಉತ್ತಮ ತರಬೇತಿ ಪಡೆಯಲು ಸಾಧ್ಯವಾಗುವ ವಿದ್ಯಾರ್ಥಿಗಳು ಹಾಗೂ ಏನೂ ಇಲ್ಲದಿರುವ ವಿದ್ಯಾರ್ಥಿಗಳ ನಡುವೆ ಇದು ಖಂದಕವನ್ನು ಸೃಷ್ಟಿಸಿದೆ ಎಂದು ಅವರು ಬರೆದಿದ್ದರು. ನ್ಯಾಯಾಧೀಶರೇ ವೀಡಿಯೋ ಕಾನ್ಫರೆನ್ಸ್ ಮೂಲಕ ಅವರ ಕರ್ತವ್ಯ ನಿರ್ವಹಿಸುತ್ತಿರುವಾಗ, ವಿದ್ಯಾರ್ಥಿಗಳು ಧೈರ್ಯವಾಗಿ ಮನೆಯಿಂದ ಹೊರಬರಲು ಹೇಗೆ ಸಾಧ್ಯ? ಎಂದು ಸೂರ್ಯ ಪ್ರಶ್ನಿಸಿದ್ದರು.
“ಕೋವಿಡ್‌ನಿಂದ ಉಂಟಾದ ಜೀವ ಭಯದಿಂದಾಗಿ, ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿಗಳು ಭಯವಿಲ್ಲದೇ ಹೋಗಿ ಪರೀಕ್ಷೆ ಬರೆಯಲು ಹೇಳಿದೆ,” ಎಂದು ಹೇಳಿದ್ದಾರೆ.

ನೀಟ್ ಪರೀಕ್ಷೆಯು ಶ್ರೀಮಂತರ ಪರೀಕ್ಷೆಯಾಗಿದೆ. ಬಡ ವಿದ್ಯಾರ್ಥಿಗಳು ಖಾಸಗಿ ಕೋಚಿಂಗ್ ಪಡೆಯಲಾಗದೇ, ಕಷ್ಟ ಪಡುತ್ತಿದ್ದಾರೆ, ಎಂದು ಸೂರ್ಯ ಅಭಿಪ್ರಾಯಪಟ್ಟಿದ್ದಾರೆ.
ಈ ಹೇಳಿಕೆಯನ್ನು ಗಂಭಿರವಾಗಿ ಪರಿಗಣಿಸಿರುವ ನ್ಯಾಯಾಲಯವು, ಸೂರ್ಯ ಅವರ ಹೇಳಿಕೆಯನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಬೇಕೆಂದು ಹೇಳಿದೆ.

ಸೂರ್ಯ ಅವರಿಗೆ ತಮಿಳುನಾಡಿನ ತುಂಬಾ ಬೆಂಬಲ ದೊರಕಿದ್ದು, #TNStandsWithSuriya ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗುತ್ತಿದೆ. ಕಳೆದ ಒಂದು ದಶಕಗಳಿಂದಲೂ, ತಮಿಳುನಾಡು ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ನಡೆಸಿರಲಿಲ್ಲ. 12ನೇ ತರಗತಿಯ ಅಂಕಗಳ ಆಧಾರದ ಮೇಲೆ ವೈದ್ಯಕೀಯ ಕೋರ್ಸ್‌ಗಳಿಗೆ ದಾಖಲಾತಿ ನೀಡಬೇಕೆಂದು ಆಗ್ರಹಿಸಿತ್ತು.
