![](https://pratidhvani.com/wp-content/uploads/2024/05/narendra-modi-1657162582.jpg)
ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ (Lok Sabha Election 2024) ತೆರೆ ಬಿದ್ದಿದ್ದು, ವಿವಿಧ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿದೆ. ಲೋಕಸಭೆ ಚುನಾವಣೆ ಕುರಿತು ಪಿ ಮಾರ್ಕ್ ಸಮೀಕ್ಷಾ ವರದಿ ಪ್ರಕಟಿಸಿದ್ದು, ಚುನಾವಣೆಯಲ್ಲಿ ಎನ್ಡಿಎ 359 ಕ್ಷೇತ್ರ, ಇಂಡಿಯಾ ಒಕ್ಕೂಟ 154 ಹಾಗೂ ಇತರೆ ಅಭ್ಯರ್ಥಿಗಳು 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು ಇಂಡಿಯಾ ಟುಡೇ ತಮಿಳುನಾಡಿನ ಸಮೀಕ್ಷೆ ವರದಿ ಪ್ರಕಟಿಸಿದೆ. ಅಷ್ಟೇ ಅಲ್ಲ, ಪೋಲ್ ಸ್ಟ್ರ್ಯಾಟ್ ಕರ್ನಾಟಕದ ಸಮೀಕ್ಷಾ ವರದಿ ತಿಳಿಸಿದೆ.
![](https://pratidhvani.com/wp-content/uploads/2024/04/INDIA-ELECTION-MANIFESTO-4_1713071292417_1713071321983-1024x576.webp)
ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗುವುದು ಖಚಿತವಾಗಿದೆ ಎಂದೇ ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆಯುದ್ದಕ್ಕೂ ಇಂಡಿಯಾ ಒಕ್ಕೂಟ ಅಬ್ಬರದ ಪ್ರಚಾರ ನಡೆಸಿದರೂ, ಮೂರನೇ ಬಾರಿಗೂ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂಬುದು ಬಹುತೇಕ ಸಮೀಕ್ಷಾ ವರದಿಗಳ ಲೆಕ್ಕಾಚಾರವಾಗಿದೆ.
![](https://pratidhvani.com/wp-content/uploads/2024/05/rahul-gandhi-211408574-16x9_0-1024x576.webp)
ಅದರಲ್ಲೂ, ತಮಿಳುನಾಡಿನಲ್ಲಿ ಬಿಜೆಪಿಯು ಖಾತೆ ತೆರೆಯಲು ಮುಂದಾಗಿರುವುದು ಬಿಜೆಪಿಗೆ ಪಾಲಿಗೆ ದಕ್ಷಿಣ ಭಾರತದಲ್ಲಿ ವರದಾನವಾಗಲಿದೆ. ಮಂಗಳವಾರ ಜೂ.4ಕ್ಕೆ ಫಲಿತಾಂಶ ಹೊರಬೀಳಲಿದೆ.