ಬೀದರ್ (Bidar): ಎನ್ಸಿಬಿ (NCB) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನೆಡೆಸಿ ರಾಜ್ಯಕ್ಕೆ ಅಕ್ರಮವಾಗಿ ಸಾಗಿಸಲಾಗ್ತಿದ್ದ 1,596 ಕೆಜಿ ಗಾಂಜಾವನ್ನು (Ganja) ಜಪ್ತಿ ಮಾಡಿದ್ದಾರೆ.
ಗಾಂಜಾ ಜಪ್ತಿ ಮಾಡಿರುವುದರೊಂದಿಗೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆಂಧ್ರಪ್ರದೇಶದಿಂದ ರಾಜ್ಯಕ್ಕೆ ಸಾವಿರಾರು ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದಾರೆ ಎನ್ನುವ ಖಚಿತ ಮಾಹಿತಿ ಆಧರಿಸಿ ಈ ದಾಳಿ ನಡೆಸಿ ಗಾಂಜಾ ಸಾಗಾಟ ಮಾಡ್ತಿದ್ದ ಲಾರಿಯನ್ನು ಸೀಜ್ ಮಾಡಿದ್ದಾರೆ.
ಬೆಂಗಳೂರು ವಲಯದ ಡೈರೆಕ್ಟರ್ ಶೈಲೇಂದ್ರ ಕೆ.ಮಿಶ್ರಾ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಸದ್ಯ ಇಬ್ಬರನ್ನು ಬಂಧಿಸಿ ತೀವ್ರ ವಿಚಾರಣೆ ಮಾಡಲಾಗ್ತಿದೆ. ಬೆಂಗಳೂರಿನಲ್ಲಿ ಯಾರ ನೇತೃತ್ವದಲ್ಲಿ ಈ ಗಾಂಜಾ ತರಿಸಲಾಗ್ತಿತ್ತು..? ಯಾರಿಗೆ ತಲುಪಿಸಲು ಸೂಚನೆ ಇತ್ತು. ಆಂಧ್ರದಲ್ಲಿ ಹಣಕಾಸು ವ್ಯವಹಾರ ಮಾಡಿದ್ದು ಯಾರು..? ಅನ್ನೋ ಬಗ್ಗೆ ತನಿಖೆ ನಡೆಯುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಾಂಜಾ ಖರೀದಿ ಹಾಗೂ ವಿತರಣೆ ಸಣ್ಣ ಪುಟ್ಟ ಪೆಡ್ಲರ್ಸ್ಗಳಿಂದ ಅಸಾಧ್ಯ, ಇದರ ಹಿಂದೆ ದೊಡ್ಡ ದೊಡ್ಡವರ ಕೈವಾಡ ಇದೆ ಎನ್ನುವ ಮಾತುಗಳು ಕೇಳಿ ಬಂದಿವೆ.
#karnataka #bidar #ganja #ganjacase #crime