ನಕ್ಸಲ್ ನಿಗ್ರಹ ಪಡೆಯ (ANF)ಗುಂಡಿಗೆ ಹೆಬ್ರಿಯಲ್ಲಿ ಬಲಿಯಾದ ನಕ್ಸಲ್ ಮುಖಂಡ ವಿಕ್ರಂ ಗೌಡನ ಮೃತದೇಹ ಸಾಗಿಸುತ್ತಿದ್ದ ಆಂಬುಲೆನ್ಸ್ (Ambulance) ಹೆದ್ದಾರಿಯಲ್ಲಿ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ.
ನಕ್ಸಲ್ ವಿಕ್ರಂ ಗೌಡ (Naxal vikram gowda) ಶೂಟ್ ಔಟ್ ನಂತರ, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಆ ಬಳಿಕ ಆತನ ಮೃತದೇಹವನ್ನು ಕುಟುಂಬಸ್ಥರಿಗೆ ಇಂದು ಹಸ್ತಾಂತರಿಸಲಾಯಿತು. ಈ ವೇಳೆ ದೇಹವನ್ನು ಆಂಬ್ಯುಲೆನ್ಸ್ ನಲ್ಲಿ ಅವರ ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 169 Aಯಲ್ಲಿ ಆಂಬುಲೆನ್ಸ್ ಪಲ್ಟಿಯಾಗಿದೆ.
ಹೀಗಾಗಿ ಮಾರ್ಗ ಮಧ್ಯದಲ್ಲೇ ಆತನ ಮೃತ ದೇಹವನ್ನು ಬೇರೆ ವಾಹನದಲ್ಲಿ ತೆಗೆದುಕೊಂಡು ಹೆಬ್ರಿಕೋಡ್ಲು ಗ್ರಾಮಕ್ಕೆ ಕುಟುಂಬಸ್ಥರು ತೆರಳಿದ್ದಾರೆ.