ಮಲ್ಲೇಶ್ವರಂ ನ ರೇಣುಕಾಂಬ ಸ್ಟುಡಿಯೋದಲ್ಲಿ ನವಿಲುಗರಿ ಸಿನಿಮಾದ ಧ್ವನಿಸುರುಳಿಯನ್ನು ಸಾಹಿತಿ ದೊಡ್ಡರಂಗೇಗೌಡ ಬಿಡುಗಡೆಗೊಳಿಸಿದರು.
ಈ ಸಿನಿಮಾದಲ್ಲಿ ಆನಂದ್ ಮುಖ್ಯಭೂಮಿಕೆಯಲ್ಲಿ ನಟಿಸುತಿದ್ದು, ರಾಗಿಣಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ, ಸಾರಿಕ ಬಂಡವಾಳ ಹೂಡಿದ್ದಾರೆ.
ಇದೊಂದು ಗಾಯಕನ ಕಥೆಯಾಗಿದ್ದು, ಈಗಾಗಲೇ ಚಿತ್ರತಂಡ ಡಬ್ಬಿಂಗ್ ಕಂಪ್ಲೀಟ್ ಮಾಡಿದ್ದು, ಹಲವಾರು ನಿರೀಕ್ಷೆಗಳನ್ನು ಹೊತ್ತಿದೆ ತಂಡ. ತಾರಾಗಣದಲ್ಲಿ ನರೇಂದ್ರಬಾಬು, ಕೋಟೆಪ್ರಭಾಕರ್ ಮುಂತಾದ ಕಲಾವಿದರು ನಟಿಸುತ್ತಿದ್ದಾರೆ.
ಧ್ವನಿಸುರುಳಿ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ದೊಡ್ಡರಂಗೇಗೌಡ, ಕಲೆಯೂ ಕೂಡ ಹಾಗೆ. ವಯಸ್ಸಿನಲ್ಲಿ ತಾನು ತನ್ನ ಪ್ರತಿಭೆಯನ್ನು ಅನಾವರಣ ಮಾಡಬೇಕು ಅಂತ ಪ್ರತಿಯೊಬ್ಬರಲ್ಲೂ ಆಸೆ ಆಕಾಂಕ್ಷೆ ಇರುತ್ತದೆ. ಇನ್ಮೊಮ್ಮೆ ಬರಿಯಲೇ ಬಾರದು, ಹಾಡಬಾರದು ಅಂತ ಹೇಳೋರಿದ್ದಾರೆ. ಇವಾಗಂತೂ ಹೊಸಬರ ಚಿತ್ರಗಳು ಸಾಕಷ್ಟು ಬರುತ್ತಿವೆ, ಆನಂದ್ ಅವರು ತನ್ನ ಚಿತ್ರದ ಮೂಲಕ ಹಾಡಿನ ಪ್ರಾಮುಖ್ಯತೆ ತಿಳಿಸಿದ್ದಾರೆ. ಪ್ರತಿಭೆ ಯಾರಪ್ಪನ ಸೊತ್ತಲ್ಲ..ಅದನ್ನು ಬೆಳೆಸಬೇಕು, ಪ್ರೋತ್ಸಾಹ ನೀಡಬೇಕು ಎಂದರು.

ನರೇಂದ್ರ ಬಾಬು ಮಾತನಾಡಿ, ಸಿನಿಮಾಗೆ ಬಂಡವಾಳ ಹಾಕೋದಕ್ಕಿಂತ ಪ್ರೇಕ್ಷಕರಿಗೆ ತಲುಪೋದು ಬಹಳ ಮುಖ್ಯ. ಸಿನಿಮಾ ಜನಗಳಿಗೆ ಮುಟ್ಟಬೇಕು. ಈಗಿನ ಸಮಯದಲ್ಲಿ ಬಹಳ ಶ್ರಮ ಬೇಕಾಗಿದೆ. ಕೊರೋನಾ ನಂತರ ಬಹಳ ಬದಲಾವಣೆ ಆಗಿದೆ. ಕಲಾವಿದರಿಗೆ ಎಂದಿಗೂ ಮುಪ್ಪಿಲ್ಲ ಎಂದರು.
ನಾಯಕ ಆನಂದ್ ಮಾತನಾಡಿ, ನಾನು ವೃತ್ತಿಯಲ್ಲಿ ಲಾಯರ್ ಆಗಿದ್ದರಿಂದ ಸಸ್ಪೆನ್ಸ್ ಸಿನಿಮಾ ಮಾಡಬೇಕು ಅಂತ ಅನ್ಕೊಂಡಿದ್ದೆ. ಪೀಟರ್ ಅವರು ಸಲಹೆ ನೀಡಿದ್ರು, ಕನ್ನಡ ಭಾಷೆ ಹಾಡುವ ಹುಡುಗನಾಗಿದ್ದೇನೆ. ರಾಜ್ಯದ ಜನರು ಪದೇ ಪದೇ ಕೇಳುತ್ತಾರೆ ಅಂತ ಸಜೆಸ್ಟ್ ಮಾಡಿದ್ದರು. ಎಲ್ಲರೂ ಲಿರಿಕ್ಸ್ ಯಾರು ಬರೆದಿದ್ದು ಅಂತ ಕೇಳ್ತಾರೆ. ಪ್ರತಿಭೆಗೆ ಅವಕಾಶ ಸಿಗಬೇಕು ಎಂದರು.