ಮುಖದ ಅಂದವನ್ನ ಹೆಚ್ಚಿಸಲು ನಾವು ಸಾಕಷ್ಟು ಪ್ರಯತ್ನವನ್ನ ಮಾಡ್ತಾನೆ ಇರ್ತೀವಿ. ಪ್ರತಿಯೊಬ್ಬರಿಗೂ ಕೂಡ ನಮ್ಮ ಸ್ಕಿನ್ ನಲ್ಲಿ ಯಾವುದೇ ರೀತಿಯ ಪಿಂಪಲ್ಸ್ ಕಲೆಗಳು ಇರಬಾರದು ಎಂಬ ಆಸೆ ಇರುತ್ತದೆ. ಇದರಿಂದಾಗಿ ಕೆಲವು ಬಾರಿ ನಾವು ರಾಸಾಯನಿಕ ಇರುವಂತಹ ಪದಾರ್ಥಗಳನ್ನು ತ್ವಚೆಗೆ ಬಳಸುತ್ತೇವೆ. ಇದರಿಂದ ತ್ವಚೆ ಹಾನಿಯಾಗುತ್ತದೆ. ಹಾಗಾಗಿ ನ್ಯಾಚುರಲ್ ಆಗಿ ಸಿಗುವಂತ ಈ ಎಲೆಗಳನ್ನು ರುಬ್ಬಿ ಬಳಸುವುದರಿಂದ ಉತ್ತಮ ತ್ವಚೆ ನಿಮ್ಮದಾಗುತ್ತದೆ .

ಬೇವಿನ ಎಲೆಗಳು
ಬೇವಿನ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಅವುಗಳ ಶಿಲೀಂಧ್ರನಾಶಕ ಗುಣಗಳು ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಸಾಕಷ್ಟು ಫೇಸ್ ವಾಶ್ , ಸೋಪು ತಯಾರಿಕೆಯಲ್ಲಿ ಬೇವಿನ ಎಲೆಗಳನ್ನ ಬಳಸುತ್ತಾರೆ.

ತುಳಸಿ ಎಲೆಗಳು
ತುಳಸಿ ಎಲೆಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಹಾಗೂ ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಹೆಚ್ಚಿರುವುದರಿಂದ ಮೊಡವೆ ಕಡಿಮೆಯಾಗುತ್ತದೆ.

ಮಿಂಟ್ ಎಲೆಗಳು
ಪುದಿನ ಎಲೆಗಳನ್ನ ಚೆನ್ನಾಗಿ ರುಬ್ಬಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮದಲ್ಲಾಗುವಂತ ಕಿರಿಕಿರಿಯನ್ನ ಕಡಿಮೆ ಮಾಡುತ್ತದೆ.
ಫೇಸ್ ಪ್ಯಾಕ್ ತಯಾರಿಸುವ ವಿಧಾನ
- ಇವುಗಳಲ್ಲಿ ಯಾವುದಾದರು ಒಂದು ತರಹದ ಎಲೆಯನ್ನ ಆಯ್ಕೆ ಮಾಡಿ, ನಂತರ ಅವುಗಳನ್ನು ಚೆನ್ನಾಗಿ ರುಬ್ಬಿ.
- ನಂತರ ಎಲೆಗಳನ್ನು ರುಬ್ಬಿದ ಪೇಸ್ಟ್ ಗೆ ನೀವು ಜೇನು ಮೊಸರು ವೋಟ್ ಮಿಲ್, ಯಾವುದಾದರು ಒಂದನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಹಾಗೂ ಆ ಮಿಶ್ರಣವನ್ನು ನಿಮ್ಮ ತ್ವಚೆಗೆ ಹಚ್ಚಿ 15ರಿಂದ 20 ನಿಮಿಷಗಳ ಕಾಲ ಹಾಗೆ ಬಿಟ್ಟು ತಣ್ಣಗೆ ಇರುವಂತಹ ನೀರಿನಿಂದ ಮುಖವನ್ನ ತೊಳೆಯುವುದು ಉತ್ತಮ.
- ಈ ಫೇಸ್ ಪ್ಯಾಕ್ ಅನ್ನು ವಾರದಲ್ಲಿ ಒಮ್ಮೆ ಬಳಸುವುದರಿಂದ ಉತ್ತಮ ತ್ವಚೆ ನಿಮ್ಮದಾಗುತ್ತದೆ.