ಮೇಕಪ್(makeup) ಅಂತ ಹೇಳಿದ್ರೆ ಯಾರಿಗ್ ತಾನೇ ಇಷ್ಟ ಆಗಲ್ಲ ಪ್ರತಿಯೊಬ್ರು ಕೂಡ ಮೇಕಪ್ ಮಾಡಿಕೊಳ್ಳುತ್ತಾರೆ ,ಆದರೆ ಕೆಲವರು ಸಿಂಪಲ್ ಮೇಕಪ್ ಮಾಡಿಕೊಳ್ತಾರೆ, ಇನ್ನು ಕೆಲವರು ಹೆವಿ ಮೇಕಪ್ ಲುಕ್ ಅಲ್ಲಿ ಕಾಣಿಸಿಕೊಳ್ಳುವುದಕ್ಕೆ ಇಷ್ಟಪಡುತ್ತಾರೆ. ಮೇಕಪ್ ಮಾಡ್ಕೊಳ್ಳೋದು ದೊಡ್ಡ ವಿಷಯ ಅಲ್ಲ ,ಆದರೆ ಅದನ್ನ ರಿಮೂವ್ ಮಾಡೋದು ಸ್ವಲ್ಪ ಕಷ್ಟದ ವಿಚಾರ.
ಯಾವುದೋ ಒಂದು ಫಂಕ್ಷನ್ (Function)ಹೋಗಿ ಬಂದು ಮೇಕಪ್ ಅನ್ನು ತೆಗಿತೀವಿ ಅಂತ ಹೇಳಿದ್ರೆ ಸ್ವಲ್ಪ ಉದಾಸಿನ ಆಗುತ್ತೆ..ಹಾಗೆ ಮಲ್ಗೋಣ ಅಂತನು ಯೋಚನೆ ಮಾಡ್ತೀವಿ. ಆದ್ರೆ ಮೇಕಪ್ ನ ರಿಮೋವ್ ಮಾಡದೇ ಹಾಗೆ ಮಲ್ಕೊಂಡ್ರೆ ನಮ್ಮ ಸ್ಕಿನ್ ಡೆಫಿನೆಟ್ಲಿ ಹಾಳಾಗುತ್ತೆ. ಹಾಗಾಗಿ ಮೇಕ್ಅಪ್ ನ ರಿಮೂವ್ ಮಾಡುವಂತದ್ದು ತುಂಬಾನೇ ಇಂಪಾರ್ಟೆಂಟ್ ,ಇನ್ನೂ ರಿಮೂವ್ ಮಾಡೋ ವಿಚಾರ ಅಂತ ಬಂದಾಗ ಕೆಲವರು ಕ್ಲನ್ಸರನ್ನ ಬಳಸುತ್ತಾರೆ ಹಾಗೂ ದುಬಾರಿ ಕ್ರೀಮ್ ಗಳನ್ನ ಬಳಸ್ತಾರೆ..
ಆದ್ರೆ ಒಂದಿಷ್ಟು ಜನ ಮೇಕಪ್ ಪ್ರಾಡಕ್ಟ್ ಗೆ (make up product)ಖರ್ಚು ಮಾಡಿದಷ್ಟು ಮೇಕಪ್ ರಿಮೂವರ್ ಗೇ ಖರ್ಚು ಮಾಡೋದಕ್ಕೆ ಸ್ವಲ್ಪ ಯೋಚನೆ ಮಾಡುತ್ತಾರೆ. ಹಾಗಾಗಿ ಮನೆಯಲ್ಲಿ ಯಾವ ರೀತಿ ಸಿಂಪಲ್ಲಾಗಿ ಮೇಕಪ್ ನ ರಿಮೂವ್ ಮಾಡ್ಬೋದು ಅನ್ನೋದ್ರ ಟಿಪ್ಸ್ ಇಲ್ಲಿದೆ..
ಆಲಿವ್ ಆಯಿಲ್(Olive oil)
ಮೇಕಪ್ ರಿಮೂವ್ ಮಾಡೋದಕ್ಕೆ ಬೆಸ್ಟ್. ಆಲಿವ್ ಆಯಿಲ್ ನ ಕಂಪ್ಲೀಟ್ ನಿಮ್ಮ ಮುಖಕ್ಕೆ ಅಪ್ಲೈ ಮಾಡಿ ನೀಟಾಗಿ ರಬ್ ಮಾಡಿ ಮಸಾಜ್ (massage)ಮಾಡಿ ನಂತರ ಒಂದು ಕಾಟನ್ ಬಟ್ಟೆಯಿಂದ ಅಥವಾ ಹತ್ತಿ ಉಂಡೆಯಿಂದ ಆ ಮೇಕಪ್ ನ ಒರೆಸಿ. ಆಲಿವ್ ಆಯಿಲ್ ಮೇಕಪ್ ರಿಮೂವ್ ಮಾಡೋತ್ತದೆ ಜೊತೆಗೆ ಸ್ಕಿನ್ ನ ನ್ಯಾಚುರಲ್ ಆಗಿ ಮೊಯ್ಸ್ ಚರ್ ಮಾಡುತ್ತೆ, ಹಾಗೂ ಸ್ಕಿನ್ ಗ್ಲೋ ಆಗೋತ್ತದೆ,ಆಲಿವ್ ಆಯಿಲ್ ನಲ್ಲಿ ಆಂಟಿ ಆಕ್ಸಿಡೆಂಟ್ ಅಂಶ ಹಾಗೂ ವಿಟಮಿನ್ ಇ (vitamine E)ಅಂಶ ಜಾಸ್ತಿ ಇರುತ್ತೆದೇ.
ಹಾಲು(Milk)
ಕಾಟನ್ಗೆ (cotton)ಎರಡು ಟೇಬಲ್ ಸ್ಪೂನ್ ಅಷ್ಟು ಹಾಲನ್ನ ಹಾಕಿ ನಿಮ್ಮ ಮುಖದ ಮೇಕಪ್ ಅನ್ನು ನೀಟಾಗಿ ತೆಗೆಯೋದ್ರಿಂದ ಮೇಕಪ್ ಈಜಿ ಆಗಿ ರಿಮೂವ್ ಆಗುತ್ತೆ ಜೊತೆಗೆ ಹಾಲು ನಮ್ಮ ಸ್ಕಿನ್(skin) ನಿಗೆ ತುಂಬಾನೆ ಒಳ್ಳೆಯದು ಯಾಕಂತ ಹೇಳಿದ್ರೆ ಅದರಲ್ಲಿ ಪ್ರೋಟೀನ್ ಅಂಶ ಜಾಸ್ತಿ ಇರುತ್ತೆ ಇದು ನಮ್ಮ ಸ್ಕಿನ್ ಅನ್ನ ಹೈಡ್ರೇಟ್ (hydrate)ಆಗಿ ಇಡೋದಕ್ಕೆ ಸಹಾಯ ಮಾಡುತ್ತೆ..
ಕೊಬ್ಬರಿ ಎಣ್ಣೆ(Coconut oil)
ನೀವು ಸುಲಭವಾಗಿ (easy)ಮೇಕಪ್ ಅನ್ನು ರಿಮೂವ್ ಮಾಡಬೇಕು ಅಂತ ಹೇಳಿದ್ರೆ ಕೊಬ್ಬರಿ ಎಣ್ಣೆನ ಬಳಸಬೇಕು .. ಇಡೀ ಮುಖಕ್ಕೆ (face)ಕೊಬ್ಬರಿ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಂತರ ಒಂದು ಕಾಟನ್ ಬಟ್ಟೆಯಿಂದ ಮೇಕಪ್ ಅನ್ನು ಒರೆಸಬಹುದು.. ಕೊಬ್ಬರಿ ಎಣ್ಣೆ ನಿಮ್ಮ ಕಾಜಲ್ ನ (Kajal)ರಿಮೂವ್ ಮಾಡೋದಕ್ಕೆ ತುಂಬಾನೇ ಹೆಲ್ಪ್ ಫುಲ್ ಜೊತೆಗೆ ಮ್ಯಾಟ್ ಫಿನಿಶಿಂಗ್ ( matte finishing)ಲಿಪ್ಸ್ಟಿಕ್ ನ ಬಳಸಿದರೂ ಕೂಡ ಈಸಿಯಾಗಿ ರಿಮೂವ್ ಮಾಡ್ಬೋದು..
ಬೇಬಿ ಆಯಿಲ್ (Baby oil)
ಸಾಕಷ್ಟು ಬ್ರಾಂಡ್ ಗಳ ಬೇಬಿ ಆಯಿಲ್ ಗಳು ನಿಮಗೆ ದೊರೆಯುತ್ತೆ. ಇದರ ಸಹಾಯದಿಂದ ನೀವು ಮೇಕಪ್ ಅನ್ನು ಸುಲಭವಾಗಿ ರೀಮೂವ್ ಮಾಡ್ಬೋದು, ಇದು ನಿಮ್ಮ ಮುಖದ ಕಾಂತಿಗೆ ಯಾವುದೇ ರೀತಿಯ ಹಾನಿಯನ್ನು ಮಾಡಲ್ಲ..ಪಿಂಪಲ್ ಮಾರ್ಕ್ಸ್ ಆಗಿರಬಹುದು ಅಥವಾ ಗುಳ್ಳೆಗಳಾಗಿರಬಹುದು ಯಾವುದು ಕೂಡ ಆಗಲ್ಲ.. ಡ್ರೈ ಸ್ಕಿನ್ ಆಗಿದ್ರೂ ಕೂಡ ಮಾಯಿಶ್ಚರೈಸ್ ಮಾಡೋದಕ್ಕೆ ಇದು ಉಪಕಾರಿ..
ಒಟ್ಟಿನಲ್ಲಿ ಏನೇ ಒಂದು ಮೇಕಪ್ ಮಾಡಿದ್ರು ಕೂಡ ಮನೆಗೆ ಬಂದ ತಕ್ಷಣ ಮೇಕಪ್ ರಿಮೂವ್ ಮಾಡೋದು ತುಂಬಾನೇ ಒಳ್ಳೆಯದು.. ಮೇಕಪ್ ರಿಮೂವ್ ಮಾಡದೆ ಹಾಗೆ ಇದ್ರೆ.. ನೀವು ನಿಮ್ಮ ಕೈಯಾರೆ ಸ್ಕಿನ್ನ ಅಥವಾ ನಿಮ್ಮ ಫೇಸ್ ಗ್ಲೋನ ಕಡಿಮೆ ಮಾಡಿಕೊಳ್ಳುತ್ತೀರಾ..