ರಾಷ್ಟ್ರಕವಿ ಕುವೆಂಪು ಅವರಿಗೆ ಶಿಕ್ಷಣ ಇಲಾಖೆಯಿಂದ ಅವಮಾನ ಆಗಿದೆ ಎಂದು ಸಮಾಜಿಕ ಜಾಕತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ.
ಹೌದು, ಕುವೆಂಪು ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತಿ ಆಗಿದ್ದಾರೆ ಎಂದು ಪಠ್ಯಪುಸ್ತಕದ ಮುದ್ರಿಸಿ ಶಿಕ್ಷಣ ಇಲಾಖೆ ಎಡವಟ್ಟಿಗೆ ಸಿಲುಕಿಕೊಂಡಿದೆ, ಕುವೆಂಪು ಅವರು ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತಿ ಆಗಿದ್ದಾರೆಯೇ? ನಿಮಗೆ ಹೇಳಿದ್ದು ಯಾರು? ಎಂದು ಅನೇಕರು ಕಿಡಿಕಾರಿದ್ದಾರೆ.
ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಕವಿ ಕುವೆಂಪು ಕಥೆ, ಕವನ ಬರೆಯುವ, ಪುಸ್ತಕ ಓದುವ ಅಭ್ಯಾಸವಿತ್ತು ಎಂಬುದಾಗಿ ಹೇಳಲಾಗಿದೆ. ಜೊತೆಗೆ ಅವರು ಅನೇಕರ ಪ್ರೋತ್ಸಾಹದಿಂದ ಮುಂದೆ ಬಂದು ಪ್ರಖ್ಯಾತ ಕವಿ ಎನಿಸಿಕೊಂಡರು ಎಂದು ತಿಳಿಸಲಾಗಿದೆ.
![](https://pratidhvani.com/wp-content/uploads/2022/05/FotoJet-3-3-1024x705.jpg)
ಈ ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪುಗೆ ಅವಮಾನ ಮಾಡಲಾಗಿದ್ದರ ಬಗ್ಗೆ ಕನ್ನಡಿಗರು ಸೇರಿದಂತೆ ಅನೇಕ ವಿಚಾರವಾದಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಕುವೆಂಪು ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತ ಕವಿ ಎನಿಸಿಕೊಂಡರು ಎನ್ನುವ ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.
ಕುವೆಂಪು ತಮ್ಮ ಸ್ವ ಪರಿಶ್ರಮದಿಂದ, ಸಾಹಿತ್ಯ ಕೃಷಿಯ ಮೂಲಕ ಮಹಾನ್ ಕವಿಯಾದವರು.. ರಾಷ್ಟ್ರಕವಿಗೆ ಶಿಕ್ಷಣ ಇಲಾಖೆ ಅಪಮಾನ ಮಾಡಿದೆ. ಕೂಡಲೇ ಕುವೆಂಪು ಬಗ್ಗೆ ಇರುವಂತ ವಿವಾದಾತ್ಮಕ ಪಠ್ಯದ ಬರಹವನ್ನು ಸರಿ ಪಡಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡೋದಾಗಿ ಅನೇಕರು ಶಿಕ್ಷಣ ಇಲಾಖೆಗೆ ಎಚ್ಚರಿಕೆ ನೀಡಿದ್ದಾರೆ.