ರಾಷ್ಟ್ರ ಧ್ವಜವನ್ನ ತಾಲಿಬಾನಿಗೆ ಹೋಲಿಸಿದ ಆರೋಪ.
ಹನುಮ ಧ್ವಜ ಇಳಿಸಿ, ತಾಲಿಬಾನ್ ಧ್ವಜ ಹಾರಿಸಿದ್ದಾರೆ ಎಂಬ ಸಿ.ಟಿ ರವಿ ಹೇಳಿಕೆಗೆ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ತಾಯಿ ಸಮನಾದ ರಾಷ್ಟ್ರ ಧ್ವಜವನ್ನ ತಾಲಿಬಾನ್ ಗೆ ಹೋಲಿಕೆ ಮಾಡಿರೋದು ಸರಿಯಲ್ಲ. ರಾಷ್ಟ್ರ ಧ್ವಜವನ್ನ ತಾಲಿಬಾನಿಗೆ ಹೋಲಿಸಿರುವ ದಾಖಲೆ ನನ್ನ ಬಳಿ ಇದೆ. ಆತನ ವಿರುದ್ಧ ನಾನೇ, ಇವತ್ತೇ ದೂರು ಕೊಡ್ತೀನಿ. ಆತನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ.
ನಾವು ಅವರ ಥರ ಗಾಂಡುಗಳಲ್ಲ, ಗಂಡಸು ಮಕ್ಕಳು ನಾವು ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮೊದಲು ಆತನ ಹೇಳಿಕೆ ವಾಪಸ್ ಪಡೆಯಲಿ.
ಆನಂತರ ನನ್ನ ಹೇಳಿಕೆಯನ್ನ ನಾನು ವಾಪಸ್ ಪಡೆಯುತ್ತೇನೆ ಎಂದು ಸಿ.ಟಿ.ರವಿ ವಿರುದ್ಧದ ಹೇಳಿಕೆಯನ್ನು ನರೇಂದ್ರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

#Mandya #CTRavi #Narendeaswamy #Politics #Keregodu