ದಕ್ಷಿಣಕಾಶಿ ನಂಜನಗೂಡಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಮುಜುಗರ ಆಗುವಂತಹ ಘಟನೆ ನಡೆದಿದೆ. ಶ್ರೀಕಂಠೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದ HDK , ನಂತ್ರ ರೆಸ್ಟ್ ತೆಗೆದುಕೊಳ್ಳಲು ಪ್ರವಾಸಿ ಮಂದಿರಕ್ಕೆ ಹೋದಂತಹ ಸಂದರ್ಭದಲ್ಲಿ ಬೀಗ ಹಾಕಿದ್ದಂತಹ ಘಟನೆ ನಡೆದಿದೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬಂದರೂ ಬೀಗ ತೆಗೆಯದ ಅಧಿಕಾರಿಗಳು ಉಡಾಫೆ ಮಾಡಿದ್ದಾರೆ.ಕೇಂದ್ರ ಸಚಿವರ ಭೇಟಿ ವಿಚಾರವನ್ನು ಅಧಿಕಾರಿಗಳಿಗೆ ಮೊದಲೇ ತಿಳಿಸಲಾಗಿತ್ತು.ಈ ಬಗ್ಗೆ ಪ್ರವಾಸ ಪಟ್ಟಿಯನ್ನು ಸಚಿವಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಆದ್ರೆ, ಅಧಿಕಾರಿಗಳು ಪ್ರವಾಸಿ ಮಂದಿರಕ್ಕೆ ಬೀಗ ಹಾಕಿ ಯಡವಟ್ಟು ಮಾಡಿದ್ದಾರೆ.10 ನಿಮಿಷ ಕಾದರೂ ಬಾಗಿಲು ತೆಗೆಯಲು ಬಾರದ ವಿರುದ್ಧ ಡಿಸಿ ಲಕ್ಷ್ಮೀಕಾಂತ್ ರೆಡ್ಡಿ ಗರಂ ಆಗಿದ್ದಾರೆ.