ಕೇರಳದ ವೈನಾಡು ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕಪಿಲಾ ನದಿ ತುಂಬಿ ಹರಿಯುತ್ತಿದೆ. ದಕ್ಷಿಣ ಕಾಶಿ ನಂಜನಗೂಡಲ್ಲಿ ಜಲ ಗಂಡಾಂತರ ಸೃಷ್ಟಿಯಾಗಿದೆ. ಐತಿಹಾಸಿಕ
ಪರಶುರಾಮನಿಗೆ ಜಲ ದಿಗ್ಭಂಧನವನ್ನ ಕಪಿಲೆ ಹಾಕಿದ್ದಾಳೆ.
ಕಬಿನಿ ಜಲಾಶಯದಿಂದ 46 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಹಿನ್ನೆಲೆ.ಅಪಾಯದ ಮಟ್ಟ ಮೀರಿ ಉಕ್ಕಿ ಕಪಿಲ ನದಿ ಉಕ್ಕಿ ಹರಿಯುತ್ತಿದೆ.ಕಪಿಲ ನದಿ ನೀರಿನಲ್ಲಿ ನಂಜನಗೂಡಿನ ಪರಶುರಾಮ ದೇವಸ್ಥಾನ ಮುಳುಗಡೆಯಾಗಿದೆ.
ದೇವಸ್ಥಾನದ ಎರಡು ಮಂಟಪಗಳು ಸೇರಿ ಎಲ್ಲವೂ ಮುಳುಗಡೆಯಾಗಿದೆ.ಹದಿನಾರು ಕಾಲು ಮಂಟಪ ಕೂಡ ಭಾಗಶಃ ಮುಳುಗಡೆಯಾಗಿದೆ.ಪ್ರವಾಹದ ಭೀತಿಯಲ್ಲಿ ಕಪಿಲ ನದಿ ತೀರದ ನಿವಾಸಿಗಳು ಜೀವನ ಸಾಗಿಸುತ್ತಿದ್ದಾರೆ.