ಪ್ರಜ್ವಲ್ ರೇವಣ್ಣ (Prajwal revanna) ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಬೆಳವಣಿಗೆಗಳ ನಡುವೆ ,ಇದೀಗ ಪೆನ್ ಡ್ರೈವ್ (Pen drive) ವಿಚಾರವಾಗಿ ಎಚ್ ಡಿ ಕುಮಾರಸ್ವಾಮಿ (HD Kumaraswamy) ಕಾಂಗ್ರೆಸ್ ನಾಯಕರ (congress) ವಿರುದ್ಧ ಮತ್ತೆ ಹರಿಹರಿದ್ದಾರೆ. ಇಂತಹ ಪೆನ್ ಡ್ರೈವ್ಗಳನ್ನು ಸೃಷ್ಟಿ ಮಾಡುವ ಸಂಸ್ಕೃತಿ ನಮ್ಮದಲ್ಲ ಎಂದು ಕಿಡಿಕಾರಿದ್ದಾರೆ.

ಈ ಹಿಂದೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಹಗರಣಗಳು ,ಭ್ರಷ್ಟಾಚಾರಗಳು ನಡೆಯುತ್ತಿವೆ ಎಂದು ಆರೋಪಿಸಿದ್ದ ಕುಮಾರಸ್ವಾಮಿ ,ತಮ್ಮ ಬಳಿ ದಾಖಲೆಗಳ ಪೆನ್ ಡ್ರೈವ್ ಇರುವುದಾಗಿ, ತಮ್ಮ ಜೇಬಿನಿಂದ ಪೆನ್ ಡ್ರೈವ್ (Pen drive) ತೆಗೆದು ತೋರಿಸಿ ಪುನಹ ತಮ್ಮ ಬಳಿಯೇ ಇರಿಸಿಕೊಂಡಿದ್ದರು. ಈ ಬಗ್ಗೆ ಇತ್ತೀಚಿಗೆ ಕಾಂಗ್ರೆಸ್ ನಾಯಕರು ಟೀಕಾ ಪ್ರಹಾರ ನಡೆಸಿದ್ದು ,ಇದೇನಾ ಆ ಪೆನ್ ಡ್ರೈವ್ ಎಂದು ಕಾಲೆಳೆಯುವ ರೀತಿ ವ್ಯಂಗ್ಯವಾಡಿದ್ದರು.

ನನ್ನ ಬಳಿ ಇರುವ ಪೆನ್ ಡ್ರೈವ್ ಸರ್ಕಾರದಲ್ಲಿ (Government of karnataka) ನಡೆದಿರುವ ಹಗರಣಗಳು ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರುವ ಪೆನ್ ಡ್ರೈವ್ . ಈ ರೀತಿ ಅಶ್ಲೀಲ ವಿಡಿಯೋಗಳನ್ನು ಹಂಚಿಕೆ ಮಾಡಲು ತಯಾರಿಸಿರುವ ಪೆನ್ ಡ್ರೈವ್ ಅಲ್ಲ ,ಅದು ನಮ್ಮ ಸಂಸ್ಕೃತಿ ಅಲ್ಲ . ಮುಂದಿನ ದಿನಗಳಲ್ಲಿ ನನ್ನ ಬಳಿ ಇರುವ ಪೆನ್ ಡ್ರೈವ್ ಕೂಡ ರಿಲೀಸ್ ಮಾಡುವೆ ಎಂದು ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.