ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು (Chitradirga renukaswamy murder case) ಇನ್ನು ರಾಜ್ಯ ಮರೆತಿಲ್ಲ. ಪವಿತ್ರ ಗೌಡಗೆ (Pavitra gowda) ಅಶ್ಲೀಲವಾಗಿ ಮೆಸೇಜ್ ಮಾಡಿದ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿ ಬೆಂಗಳೂರಿನ ಪಟ್ಟಣಗೆರೆ ಶೆಡ್ ಗೆ ಕರೆತಂದು ಹಲ್ಲೆ ಮಾಡಿ, ಹಿಂಸಿಸಿ ಕೊಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪವಿತ್ರ ಗೌಡ, ನಟ ದರ್ಶನ್ (Actor darshan) ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳು ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.

ಆದ್ರೆ ರೇಣುಕಾಸ್ವಾಮಿ ಕೊಲೆಯಾಗುವ ವೇಳೆ ಆತನ ಪತ್ನಿ ಗರ್ಭಿಣಿಯಾಗಿದ್ದರು. ಆ ನಂತರ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮೃತ ರೇಣುಕಾಸ್ವಾಮಿ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಾಳೆ (ಫೆ 23) ಮೃತ ರೇಣುಕಾಸ್ವಾಮಿ ಮಗನ ನಾಮಕರಣ ಕಾರ್ಯಕ್ರಮ ಜರುಗಲಿದೆ.
ರೇಣುಕಾಸ್ವಾಮಿ ಹಾಗೂ ಸಹನಾ ದಂಪತಿ ಮಗುವಿಗೆ ಈಗ 5 ತಿಂಗಳು ತುಂಬಿದೆ. ಹೀಗಾಗಿ ಕುಟುಂಬಸ್ಥರು ನಾಮಕರಣ ಶಾಸ್ತ್ರಕ್ಕೆ ಮುಂದಾಗಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ನಿವಾಸದಲ್ಲೇ ಅವರ ಮಗವಿಗೆ ನಾಮಕರಣ ಶಾಸ್ತ್ರ ನಡೆಯಲಿದೆ.