ನೈಲ್ ಪಾಲಿಶ್ ಅಂತ ಹೇಳಿದ್ರೆ ಯಾರಿಗ್ ತಾನೇ ಇಷ್ಟ ಆಗಲ್ಲ.. ಎಲ್ಲರೂ ಕೂಡ ತುಂಬಾನೇ ಇಷ್ಟಪಟ್ಟು ತಮಗೆ ಇಷ್ಟವಾದ ಕಲರ್ ಅಥವಾ ತಮ್ಮ ಡ್ರಸ್ಸಿಗೆ ಮ್ಯಾಚ್ ಆಗುವಂತ ಕಲರ್ ಅನ್ನ ನೈಲ್ ಗೆ ಹಚ್ಕೊಳ್ತಾರೆ.. ನೇಲ್ ಪಾಲಿಶ್ ಅಂತ ಬಂದಾಗ ಲೈಟ್ ಕಲರ್ಸ್, ಡಾರ್ಕ್ ಕಲರ್ ಮ್ಯಾಟ್ ಫಿನಿಶಿಂಗ್ ಅಬ್ಬಬ್ಬಾ ಸಾಕಷ್ಟಿದೆ..ಆದ್ರೆ ಅತಿಯಾಗಿ ನೈಲ್ ಪೋಲಿಷ್ ಬಳಸುವುದರಿಂದ ಕೆಲವು ತೊಂದ್ರೆಗಳು ಎದುರಾಗುತ್ತವೆ..

ಉಗುರಿಗೆ ಹಾನಿ
ನೇಲ್ ಪಾಲಿಷ್ ಅನ್ನು ಆಗಾಗ ಹಚ್ಚುವುದು,ರಿಮೂವ್ ಮಾಡ್ತಾಯಿದ್ರೆ ಉಗುರುಗಳು ಸುಲಭವಾಗಿ, ದುರ್ಬಲಗೊಳ್ಳಬಹುದು ಅಥವಾ ಒಡೆಯುವ ಸಾಧ್ಯತೆಯಿದೆ.
ಫಂಗಲ್ ಇನ್ಫೆಕ್ಷನ್
ಪಾಲಿಶ್ ಅಡಿಯಲ್ಲಿ ಕೆಲವುಬಾರಿ ತೇವಾಂಶವು ಇರುತ್ತದೆ. ಅವು ಶಿಲೀಂಧ್ರಗಳ ಬೆಳವಣಿಗೆ ಮತ್ತು ಸೋಂಕಿಗೆ ಕಾರಣವಾಗಬಹುದು.

ದುರ್ಬಲಗೊಳ್ಳುತ್ತದೆ..
ಅತಿಯಾಗಿ ನೇಲ್ಪಾಲಿಷನ್ನ ಬಳಸುವುದರಿಂದ ಉಗುರುಗಳು ದುರ್ಬಲಗೊಳ್ಳುತ್ತವೆ ಹಾಗೂ ಇದ್ದಕ್ಕಿದ್ದ ಹಾಗೆ ಉಗುರುಗಳು ಮುರಿಯುವ ಚಾನ್ಸಸ್ ಇರುತ್ತದೆ
ಸ್ಕಿನ್ ರಿಯಾಕ್ಷನ್
ನೇಲ್ ಪಾಲಿಶ್ ಹಚ್ಚುವುದು ರಿಮೂವ್ ಮಾಡುವುದು ಹೀಗೆ ಆಗಾಗ ಮಾಡ್ತಾ ಇರುವುದರಿಂದ, ಉಗುರಿಗೆ ಹಾನಿಯಾಗುವುದಲ್ಲದರ ಜೊತೆಗೆ ಉಗುರಿನ ಸುತ್ತ ಇರುವಂತಹ ಸ್ಕಿನ್ಗೂ ಕೂಡ ತೊಂದರೆ. ಕೆಲವು ಬಾರಿ ಸ್ಕಿನ್ ರಿಯಾಕ್ಷನ್ ಅಂದ್ರೆ ಅಲರ್ಜಿ ಆಗುವಂತ ಚಾನ್ಸಸ್ ಇರುತ್ತದೆ.
