ಬೆಂಗಳೂರಿನ ನಮ್ಮ ಮೆಟ್ರೋ (Bengaluru Namma metro) ವ್ಯಾಪ್ತಿಯ ಹಸಿರು ರೈಲು ಮಾರ್ಗ ಇನ್ನಷ್ಟು ವಿಸ್ತೃತಗೊಂಡಿದ್ದು, ಇಂದಿನಿಂದ ನಾಗಸಂದ್ರದಿಂದ ಮಾದಾವರಕ್ಕೆ (Nagasandra to madavara) 3.14 ಕಿಮೀ ವಿಸ್ತರಣೆಗೊಂಡಿದೆ.
ಇಂದು ಮುಂಜಾನೆ 5 ಗಂಟೆಯಿಂದಲೇ ಈ ಹಸಿರು ಬಣ್ಣದ ಮಾರ್ಗದಲ್ಲಿ ಮೆಟ್ರೊ (Green line metro) ಸಂಚಾರ ಶುರುವಾಗಿದೆ. ಈಗಾಗಲೇ ನಾಗಸಂದ್ರ ನಿಲ್ದಾಣದವರೆಗೂ ಹಸಿರು ಮಾರ್ಗ ಮೆಟ್ರೋ ಸಚಾರವಿದ್ದು, ಇದೀಗ ನಾಗಸಂದ್ರದಿಂದ ಮಾದಾವರವರೆಗೂ ಮೆಟ್ರೋ ಮಾರ್ಗ ವಿಸ್ತರಣೆ ಮಾಡಲಾಗಿದೆ.
ನವೆಂಬರ್ 6ರಂದು ಡಿಸಿಎಂ ಡಿಕೆ ಶಿವಕುಮಾರ್, ಸಂಸದ ತೇಜಸ್ವಿ ಸೂರ್ಯ, ನೆಲಮಂಗಲ ಶಾಸಕ ಶ್ರೀನಿವಾಸ್, ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್ ಈ ವಿಸ್ತರಿತ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಮಾಡುವ ಮೂಲಕ ಸಂಚಾರಕ್ಕೆ ಚಾಲನೆ ನೀಡಿದ್ರು.