ಗುವಾಹಟಿ: ನವೆಂಬರ್ 25 ರಂದು ಮೈತೇಯ್ ವ್ಯಕ್ತಿಯೊಬ್ಬರು ನಾಪತ್ತೆಯಾದ ನಂತರ ಮಣಿಪುರದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಮಣಿಪುರದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಶುಕ್ರವಾರ ನಾಪತ್ತೆಯಾದ ವ್ಯಕ್ತಿಯನ್ನು(missing person) ಶೀಘ್ರವಾಗಿ ಪತ್ತೆಹಚ್ಚಲು ಸೇನೆಯನ್ನು ಕೇಳಿದೆ.
ನವೆಂಬರ್ 25 ರಂದು( Indian Army)ಭಾರತೀಯ ಸೇನೆಯ 57 ಮೌಂಟನ್ ವಿಭಾಗದ GOC ಕ್ಯಾಂಪಸ್‌ನಿಂದ ಲೊಯಿಟಾಂಗ್ ಖುನೌ ಪ್ರದೇಶದ 56 ವರ್ಷ ವಯಸ್ಸಿನ ಲೈಶ್ರಾಮ್ ಕಮಲಬಾಬು (Laishram Kamalbabu)ನಾಪತ್ತೆಯಾಗಿದ್ದರು ಮತ್ತು ಅಂದಿನಿಂದ ಅವರ ಯಾವುದೇ ಕುರುಹು ಕಂಡುಬಂದಿಲ್ಲ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು, ಕುಟುಂಬದವರು (FIR) ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಶುಕ್ರವಾರ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ (Chief Minister N Biren Singh)ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರವು ಸೇನೆ ಮತ್ತು ಇತರ ಕೇಂದ್ರ ಪಡೆಗಳ ಸಮನ್ವಯದಲ್ಲಿ ಲೈಶ್ರಾಮ್ ಕಮಲಬಾಬು ಅವರನ್ನು ರಕ್ಷಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು.
ನಾಪತ್ತೆಯಾದ ವ್ಯಕ್ತಿಯನ್ನು ಹುಡುಕುವಲ್ಲಿ ಮತ್ತು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಸರ್ಕಾರವು ಈ ಹಿಂದೆ ಜಿಒಸಿ, 57 ಮೌಂಟೆನ್ ವಿಭಾಗದ ಅಧಿಕಾರಿಗಳನ್ನು ಕೇಳಿದೆ ಎಂದು ಮುಖ್ಯಮಂತ್ರಿ ಹೇಳಿದರು. ಸೇನಾ ಕ್ಯಾಂಪಸ್‌ನ ಎಂಟ್ರಿ ರಿಜಿಸ್ಟರ್‌ನಲ್ಲಿ ಕಮಲಬಾಬು ಅವರ ಸಹಿ ಪತ್ತೆಯಾಗಿದ್ದು, ಅವರು ಕ್ಯಾಂಪಸ್‌ನ ಒಳಗಿನಿಂದ ನಾಪತ್ತೆಯಾಗಿದ್ದಾರೆ ಎಂದು ತೋರಿಸುತ್ತದೆ ಎಂದು ಎನ್ ಬಿರೇನ್ ಸಿಂಗ್ ತಿಳಿಸಿದ್ದು, ನಾಪತ್ತೆಯಾದವರನ್ನು ರಕ್ಷಿಸುವ ಜವಾಬ್ದಾರಿಯನ್ನು ಸೇನೆಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಲೈಶ್ರಾಮ್ ಕಮಲಬಾಬು ನಾಪತ್ತೆ ವಿರುದ್ಧ ರಚಿಸಲಾದ ಜಂಟಿ ಕ್ರಿಯಾ ಸಮಿತಿಯ ಸದಸ್ಯರನ್ನು ಸಮಾಜ ಕಲ್ಯಾಣ ಸಚಿವ ಮತ್ತು ಸೆಕ್ಮಾಯಿ ಶಾಸಕ ಹೈಕಮ್ ಡಿಂಗೋ ಸಿಂಗ್ ಅವರೊಂದಿಗೆ ಭೇಟಿ ಮಾಡಿರುವುದಾಗಿ ಮುಖ್ಯಮಂತ್ರಿ ತಿಳಿಸಿದರು.
“ಜೆಎಸಿ ಸದಸ್ಯರು ತಮ್ಮ ಕುಂದುಕೊರತೆಗಳನ್ನು ಹಂಚಿಕೊಂಡರು ಮತ್ತು ಜ್ಞಾಪಕ ಪತ್ರವನ್ನು ಸಲ್ಲಿಸಿದರು, ಇದರಲ್ಲಿ ಕಾಣೆಯಾದ ವ್ಯಕ್ತಿಯ ಪತ್ತೆ ಮತ್ತು ಶೀಘ್ರದಲ್ಲಿ ಅವರನ್ನು ರಕ್ಷಿಸುವುದು” ಮುಖ್ಯವಾಗಿದೆ ಎಂದು ಅವರು ಹೇಳಿದರು.