ನಾಡ ಹಬ್ಬ ಮೈಸೂರು ದಸರಾಗೆ (Mysuru dasara) ದಿನಗಣನೆ ಆರಂಭವಾಗಿದೆ. ಈಗಾಗಲೇ ಸಾಂಸ್ಕೃತಿಕ ನಗರಿ ದಸರಾಗೆ ಸಜ್ಜಾಗುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಿದ್ಧತೆಗಳು ಒಂದೆಡೆ ನಡಿತಾಯಿದ್ರೆ. ಮತ್ತೊಂದೆಡೆ ಯುವ ದಸರಾ (Yuva dasara) ಸದ್ದು ಕೂಡ ಈ ಬಾರಿ ಜೋರಾಗಿದೆ.

ಹೌದು, ಯುವ ದಸರಾ ಅಂದ್ರೆ ಸಂಗೀತ ಪ್ರೇಮಿಗಳಿಗೆ ಹಬ್ಬ. ದಸರಾ ಹಬ್ಬದ ಸಂಭ್ರಮದಲ್ಲಿ ನಡೆಯೋ ಈ ಯುವ ದಸರ ಕಾರ್ಯಕ್ರಮದಲ್ಲಿ ದೇಶ ವಿದೇಶದ ಖ್ಯಾತ ಗಾಯಕರು (Singers), ಸಂಗೀತ ನಿರ್ದೇಶಕರು (Music directors) ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ಪರ್ಫಾಮ್ ಮಾಡಲಿದ್ದಾರೆ.
ಈ ಬಾರಿಯೂ ಯುವ ದಸರಾಗೆ ಆಗಮಿಸುವ ಸೆಲೆಬ್ರೆಟಿಗಳ ತುಂಬಾ ದೊಡ್ಡ ಪಟ್ಟಿಯೇ ಇದ್ದು ಎ.ಆರ್.ರೆಹಮಾನ್ (A R rehaman), ಇಳಯರಾಜಾ (Elayaraja), ಬಾಲಿವುಡ್ ರ್ಯಾಪರ್ ಬಾದ್ ಷಾ, ರವಿ ಬಸೂರು (Ravi basrur) ಹಾಗೂ ಶ್ರೇಯಾ ಘೋಷಾಲ್ (Shreya ghoshal) ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅಕ್ಟೋಬರ್ 6ರಿಂದ ಯುವ ದಸರಾ ಆರಂಭವಾಗಲಿದೆ.