ಸಾಂಸ್ಕೃತಿಕ ನಗರಿ ಮೈಸೂರಲ್ಲಿ (Mysuru ) ನಿಷೇದಾಜ್ಞೆ ಜಾರಿಮಾಡಲಾಗಿದ್ದು, ಆ ನಡುವೆಯೂ ಪ್ರತಿಭಟನೆ, ರ್ಯಾಲಿಗೆ ಸಿದ್ಧತೆಗಳು ನಡೆದಿವೆ. ಉದಯಗಿರಿ ಗಲಭೆ (Udayaagiri riots) ಪ್ರಕರಣದ ಹಿನ್ನೆಲೆಯಲ್ಲಿ ಪರ- ವಿರೋಧ ಪ್ರತಿಭಟನೆ – ರ್ಯಾಲಿಗೆ ಸಂಘಟನೆಗಳು ತಯಾರಿ ನಡೆಸಿಕೊಂಡಿವೆ.

ಆದ್ರೆ ಪೊಲೀಸರು ಯಾವುದೇ ಸಂಘಟನೆಗೂ ಅನುಮತಿ ನೀಡಿಲ್ಲ. ಹೀಗಾಗಿ ಮೈಸೂರು ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.ರಾತ್ರಿ 12 ಗಂಟೆಯಿಂದ ಮರುದಿನ ರಾತ್ರಿ 12 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ಈ ಬಗ್ಗೆ ಪೊಲೀಸ್ ಕಮೀಷನರ್ ಸೀಮಾ ಲಾಟ್ಕರ್ ಆದೇಶ ಹೊರಡಿಸಿದ್ದಾರೆ.

ಮತ್ತೊಂದೆಡೆ ಈಗಾಗಲೇ ರಾಷ್ಟ್ರ ಸುರಕ್ಷಾ ಜನಾಂದೋಲನ ಸಮಿತಿ ಜಾಥಾ ಹಮ್ಮಿಕೊಂಡಿದ್ದು ಜಾಥಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಲನೆ ನೀಡಲಿದ್ದಾರೆ. ಇತ್ತ ಇದನ್ನು ವಿರೋಧಿಸಿ ಅದೇ ಸಮಯದಲ್ಲಿ ದಲಿತ ಮಹಾಸಭಾ ಮೌನ ಮೆರವಣಿಗೆ ಹಾಗೂ ಸಮಾವೇಶ ಹಮ್ಮಿಕೊಳ್ಳಲು ಮುಂದಾಗಿದೆ.

ಆದ್ರೆ ಈ ಎರಡಕ್ಕೂ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಕೋಮು ಸೌಹಾರ್ದ ದೃಷ್ಟಿಯಿಂದ ಮಧ್ಯರಾತ್ರಿ 12 ಗಂಟೆಯಿಂದಲೇ ನಗರದಲ್ಲಿನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ಬಿ. ಎನ್.ಎಸ್.ಎಸ್ ಕಾಯ್ದೆ 163 ರ ಅಡಿಯಲ್ಲಿ ಜಾರಿ ಮಾಡಲಾಗಿದೆ.
ಆದ್ರೆ ಶಾಲಾ ಕಾಲೇಜು, ಮದುವೆ ಸಮಾರಂಭ ಎಲ್ಲವೂ ಎಂದಿನಂತೆ ನಡೆಯಲು ಅನುಮತಿ ನೀಡಲಾಗಿದ್ದು ಪ್ರತಿಭಟನೆ, ಹೋರಾಟ, ರ್ಯಾಲಿ, ಮೆರವಣಿಗೆ, ಸಮಾವೇಶಗಳಿದೆ ಮಾತ್ರ ಸಂಪೂರ್ಣ ನಿಷೇಧ ಹೇರಲಾಗಿದೆ.