ನಂಜನಗೂಡು
ರೈತರ ನಿದ್ದೆಗೆಡಿಸಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದ ಚಿರತೆ ಸೆರೆ
ಆಗಿಂದಾಗ್ಗೆ ರಸ್ತೆ ಮತ್ತು ಜಮೀನುಗಳಲ್ಲಿ ಕಾಣಿಸಿಕೊಂಡು ಜನ ಮತ್ತು ಜಾನುವಾರುಗಳಲ್ಲಿ ಬೀತಿ ಹುಟ್ಟಿಸಿದ್ದ ನಾಲ್ಕು ವರ್ಷದ ಗಂಡು ಚಿರತೆಯೊಂದು ಬೋನಿಗೆ ಬಿದ್ದಿರುವ ಘಟನೆ ನಂಜನಗೂಡು ತಾಲೂಕು ರಾಂಪುರ ಗ್ರಾಮದಲ್ಲಿ ನಡೆದಿದ.
ರಾಂಪುರ ಗ್ರಾಮದಿಂದ ಹತ್ವಾಳು ಗ್ರಾಮಕ್ಕೆ ಹೋಗುವ ಮಾರ್ಗದಲ್ಲಿ ಚೌಡನಾಯಕ ಎಂಬುವರ ಜಮೀನಿನಲ್ಲಿ ಅರಣ್ಯ ಇಲಾಖೆಯವರು ಇಟ್ಟದ್ದ ಬೋನಿಗೆ ಚಿರತೆ ಸೆರೆ ಸಿಕ್ಕಿದೆ.ಬೋನಿಗೆ ಬಿದ್ದ ವ್ಯಾಘ್ರನಿಂದಾಗಿ ಆ ಭಾಗದ ರೈತರು ನಿಟ್ಟಿಸಿರು ಬಿಟ್ಟಿದ್ದಾರೆ.ಕಳೆದ ಎರಡು ವರ್ಷದಿಂದ ಇದೇ ಜಾಗದಲ್ಲಿ ಐದನೇ ಬಾರಿಗೆ ಚಿರತೆ ಬೋನಿಗೆ ಬಿದ್ದಿದೆ ಎಂದು ತಿಳಿದು ಬಂದಿದೆ.ಚಿರತೆಯ ಹಾವಳಿಯಿಂದಾಗಿ ಬೆಚ್ಚಿಬಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಯವರ ಗಮನಕ್ಕೆ ತಂದು ಆ ಸ್ಥಳದಲ್ಲಿ ಬೋನು ಇರಿಸಲಾಗಿತ್ತು ಸೆರೆ ಸಿಕ್ಕ ಚಿರತೆಯನ್ನು ಅರಣ್ಯಕ್ಕೆ ಬಿಡಲು ಮುಂದಾಗಿದ್ದಾರೆ.