ಮೈಸೂರಿನಿಂದ ಚೆನ್ನೈ (Mysuru to Chennai) ಕಡೆಗೆ ತೆರಳುತ್ತಿದ್ದ ಮೈಸೂರು ದರ್ಬಾಂಗ ಎಕ್ಸ್ಪ್ರೆಸ್ ರೈಲು (Mysuru darbangha express train) ಚೆನ್ನೈ ಸಮೀಪ ಅಪಘಾತಕ್ಕೀಡಾಗಿದೆ. ಹೀಗಾಗಿ ಎಕ್ಸ್ ಪ್ರೆಸ್ ರೈಲಿನ ಒಟ್ಟು ಆರು ಬೋಗಿಗಳು ಅಳಿ ತಪ್ಪಿದ್ದು, ಅಪಘಾತದ ತೀವ್ರತೆಗೆ ಎರಡು ಬೋಗಿಗಳು ಬೆಂಕಿಗೆ ಆಹುತಿಯಾಗಿದೆ.

ಸದ್ಯ ಈ ಅಪಘಾತದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂಬ ಮಾಹಿತಿ ಈ ಕ್ಷಣಕ್ಕೆ ಲಭ್ಯವಾಗಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಇನ್ನು ಸ್ಥಳದಿಂದ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಮೈಸೂರು ರೈಲ್ವೆ ನಿಲ್ದಾಣದಲ್ಲಿ ಮೇ ಐ ಹೆಲ್ಪ್ ಯು ಡೆಸ್ಕ್ (May I help you) ತೆರೆಯಲಾಗಿದೆ. ಮೈಸೂರಿನಲ್ಲಿನ ಸಹಾಯವಾಣಿ ಸಂಖ್ಯೆ: 97311 43981 ಗೆ ಕರೆ ಮಾಡಬಹುದಾಗಿದೆ. ಇನ್ನು ನಿಯಂತ್ರಣ ಸಂಖ್ಯೆಯಾಗಿ 139 ಗೆ ಸಂಪರ್ಕಿಸುವಂತೆ ಮಾಹಿತಿ ನೀಡಿದ್ದಾರೆ.