ಮೈಸೂರು :- ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಹೊಂದಿಕೊಂಡಂತಿರುವ 10 ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಮೇಲ್ದರ್ಜೆಗೇರಿಸಿ 01 ನಗರಸಭೆ (ಹೂಟಗಳ್ಳಿ ನಗರಸಭೆ), 4 ಪಟ್ಟಣ ಪಂಚಾಯತ್ ಗಳನ್ನು (ಬೋಗಾದಿ, ರಮ್ಮನಹಳ್ಳಿ, ಶ್ರೀರಾಂಪುರ, ಕಡಕೊಳ) ರಚಿಸಲಾಗಿದ್ದು,1/4/2021ರಂದು ಕರ್ನಾಟಕ ರಾಜ್ಯ ಲೆಕ್ಕಪತ್ರದಲ್ಲಿ ಅಂತಿಮ ಸೂಚನೆ ಹೊರಡಿಸಲಾಗಿದ್ದು 1/8/2021ರಿಂದ ಅದಿಕೃತವಾಗಿ ನಗರ ಸ್ಥಳೀಯ ಸಂಸ್ಥೆಗಳು ಕಾರ್ಯ ಆರಂಭಿಸಿವೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಇಂದು ಜಲದರ್ಶಿನಿ ನೂತನ ಕಟ್ಟಡದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು ಗ್ರಾ.ಪಂಗಳು ನಗರ ಸ್ಥಳೀಯ ಸಂಸದಥೆಗಳಾಗಿ ಮೇಲ್ದರ್ಜೆಗೇರಿದ ನಂತರ ವಿವಿಧ ಯೋಜನೆಗಳ ಅಡಿಯಲ್ಲಿ ಒಟ್ಟು 203 ಕೋಟಿ ಅನುದಾನ ಮಂಜೂರಾಗಿದ್ದು ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ವಸತಿ ಯೋಜನೆಯಡಿ 550 ಮನೆಗಳು ಮಂಜೂರಾಗಿದ್ದು ಫಲಾನುಭವಿಗಳಿಗೆ ಹಂಚಿಕೆ ಮಾಡಿ ಈಗಾಗಲೇ ಮನೆಗಳು ನಿರ್ಮಾಣ ಹಂತದಲ್ಲಿವೆ. ಸ್ವಚ್ಛತೆಗಾಗಿ ಮನೆಮನೆ ಕಸ ಸಂಗ್ರಹಣೆಗಾಗಿ 39 ಆಟೋ ಟಿಪ್ಪರ್ ಗಳು, 8ಟ್ಯಾಕ್ಟರ್, 2ಜೆಸಿಬಿ, 2ಜೆಟ್ಟಿಂಗ್ ಯಂತ್ರಗಳ ಮೂಲಕ ಸ್ವಚ್ಛತೆ, ಒಳಚರಂಡಿ ನಿರ್ವಹಣೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಯಿ ಮರಿಗೆ ಹೋಲಿಕೆ ವಿಚಾರದಲ್ಲಿ ಮೈಸೂರಿನಲ್ಲಿ ಶಾಸಕ ಜಿ.ಟಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ನಾಯಿಗೆ ನಾರಾಯಣಸ್ವಾಮಿ ಅಂತಾ ಕರೆಯುತ್ತಾರೆ. ನಮ್ಮ ಆದಿಚುಂಚನಗಿರಿ ಸ್ವಾಮೀಜಿ ಎರಡು ನಾಯಿ ಸಾಕಿದ್ದಾರೆ. ಆ ನಾಯಿಗಳು ದೊಡ್ಡವರು ಬಂದಾಗ ನಮಸ್ಕಾರ ಮಾಡುತ್ತವೆ. ನಾಯಿಗಿರುವ ನಿಯತ್ತು ಮನುಷ್ಯರಿಗೆ ಇಲ್ಲ ಎಂದು ಹೇಳಿದರು.ನಾಯಿಗೆ ನಾವು ಮನುಷ್ಯರು ಸಮವಲ್ಲ. ಮಾತನಾಡುವವರು ಅವರ ಇತಿ ಮಿತಿ ಅರ್ಥ ಮಾಡಿಕೊಳ್ಳಲ್ಲ ಅದೇ ಸಮಸ್ಯೆ. ಅವರವರ ಕ್ಷೇತ್ರ ನೋಡಿಕೊಳ್ಳಲಾಗದವರು ರಾಷ್ಟ್ರ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಜಿಟಿಡಿ ಪರೋಕ್ಷ ವಾಗ್ದಾಳಿ ನಡೆಸಿದರು
ಸಿದ್ದರಾಮಯ್ಯ ಹೇಳಿಕೆಯನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ. ಮುತ್ಸದ್ದಿಗಳ ಬಾಯಲ್ಲಿ ಈ ರೀತಿ ಮಾತು ಸರಿಯಲ್ಲ ಎಂದರು.












