• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನನ್ನ ಸ್ವತ್ತು, ಸ್ವಯಂ ಚಾಲಿತ ನಕ್ಷೆ ಅನುಮೋದನೆ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್

Any Mind by Any Mind
October 9, 2023
in Top Story, ಕರ್ನಾಟಕ
0
ನನ್ನ ಸ್ವತ್ತು, ಸ್ವಯಂ ಚಾಲಿತ ನಕ್ಷೆ ಅನುಮೋದನೆ ಯೋಜನೆ ಜಾರಿ: ಡಿಸಿಎಂ ಡಿ.ಕೆ. ಶಿವಕುಮಾರ್
Share on WhatsAppShare on FacebookShare on Telegram

ಬೆಂಗಳೂರು: “ಬ್ರ್ಯಾಂಡ್ ಬೆಂಗಳೂರು ಯೋಜನೆ ಅಡಿಯಲ್ಲಿ ಬೆಂಗಳೂರಿನ ನಾಗರೀಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ‘ನನ್ನ ಸ್ವತ್ತು’, ‘ಸ್ವಯಂ ಚಾಲಿತ ನಕ್ಷೆ ಅನುಮೋದನೆ’ ಹಾಗೂ ವಾರ್ಡ್ ಮಟ್ಟದಲ್ಲಿ ‘ರಾಜಕೀಯೇತರ ಸಾರ್ವಜನಿಕ ಸಮಿತಿ’ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ಸರ್ಕಾರ ಕೈಗೊಳ್ಳಲಿರುವ ಕ್ರಾಂತಿಕಾರಿ ನಿರ್ಧಾರಗಳ ಬಗ್ಗೆ ಮಾಹಿತಿ ನೀಡಿದರು. ತಕ್ಷಣವೇ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಆಲೋಚನೆ ಸರ್ಕಾರಕ್ಕಿಲ್ಲ. ಎಲ್ಲಿ ತೆರಿಗೆ ಪೋಲಾಗುತ್ತಿದೆ, ಯಾರು ಕಟ್ಟುತ್ತಿಲ್ಲ. ಹೀಗಾಗಿ ನಗರದಲ್ಲಿ ಆಸ್ತಿಗಳ ಮರು ಸಮೀಕ್ಷೆ ನಡೆಸಿ, ಆಸ್ತಿ ಪಟ್ಟಿಯನ್ನು ಡಿಜೀಟಲೀಕರಣ ಮಾಡಿ ಎಲ್ಲಾ ದಾಖಲೆಗಳು ಜನರಿಗೆ ಸುಲಭವಾಗಿ ಸಿಗುವಂತೆ ಯೋಜನೆ ರೂಪಿಸಲಾಗುವುದು. ಮರು ಸಮೀಕ್ಷೆ ಆದ ನಂತರ ಪ್ರಸ್ತುತ ಇರುವ ತೆರಿಗೆ ಸಂಗ್ರಹಕ್ಕಿಂತ ಎರಡು- ಮೂರು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ” ಎಂದು ತಿಳಿಸಿದರು.

ಮನೆ ನಿರ್ಮಾಣದ ಪ್ಲಾನ್ ಸ್ಯಾಂಕ್ಷನ್ ನೀಡುವ ವಿಚಾರದಲ್ಲಿ, ಸ್ವಯಂ ಚಾಲಿತ ನಕ್ಷೆ ಮಂಜೂರಾತಿ ಗೆ ಚಾಲನೆ ನೀಡಲು ಚಿಂತಿಸಿದ್ದೇವೆ. ಇದರಿಂದ ಮನೆ ಕತ್ತಲು ಪ್ಲಾನ್ ಅನುಮೋದನೆ ಪಡೆಯಲು ಸರ್ಕಾರಿ ಕಚೇರಿ ಅಲೆಯುವಂತಿಲ್ಲ ಎಂದು ತಿಳಿಸಿದರು. ಪ್ರತಿ ವಾರ್ಡ್ಗಳ ಉದ್ಯಾನವನ, ಆಟದ ಮೈದಾನಗಳ ನಿರ್ವಹಣೆಗೆ “ರಾಜಕೀಯೇತರ ಸಾರ್ವಜನಿಕರ ಸಮಿತಿ” ಮಾಡುವ ಆಲೋಚನೆಯಿದ್ದು, ಅದಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ, ಜನರೇ ಸೇರಿ ಉದ್ಯಾನ ಮತ್ತು ಆಟದ ಮೈದಾನಗಳನ್ನು ಸ್ಥಳೀಯ ಸಿಎಸ್ಆರ್ ನಿಧಿ ಬಳಸಿ ಅಭಿವೃದ್ದಿ ಮಾಡುವ, ಒತ್ತುವರಿಯಿಂದ ರಕ್ಷಣೆ ಮಾಡುವ ಯೋಜನೆಯ ಬಗ್ಗೆ ಚಿಂತನೆ ನಡೆಯುತ್ತಿದ್ದು, ಸ್ಥಳೀಯ ಶಾಸಕರ ಬಳಿ ಚರ್ಚೆ ಮಾಡಿ ನೀತಿ ನಿರೂಪಣೆ ತಯಾರು ಮಾಡಲಾಗುವುದು” ಎಂದರು.

“ಸಂಚಾರ ದಟ್ಟಣೆ ನಿವಾರಣೆ, ತೆರಿಗೆ ಸಂಗ್ರಹ ಹೆಚ್ಚಳ, ಕಸ ವಿಲೇವಾರಿ ಈ ಮೂರು ವಿಚಾರಗಳೇ ಸರ್ಕಾರದ ಹಾಗೂ ನನ್ನ ಪ್ರಮುಖ ಗುರಿ” ಎಂದು ತಿಳಿಸಿದರು. “ಸಾರ್ವಜನಿಕ ಕುಂದು- ಕೊರತೆ, ದೂರುಗಳ ವಿಚಾರಗಳಿಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ದಿ ಸಚಿವರ ಕಚೇರಿಯಿಂದಲೇ ನೇರವಾಗಿ ನಿರ್ವಹಣೆ ಮಾಡುವ ಆಲೋಚನೆಯಿದೆ. “ಸಹಾಯಹಸ್ತ” ಎನ್ನುವ ವೆಬ್ಸೈಟ್ ಅಭಿವೃದ್ದಿ ಮಾಡುತ್ತಿದ್ದು, ಇದರಿಂದ ನಾನೇ ನೇರವಾಗಿ ಎಲ್ಲಾ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಅಗತ್ಯ ಪರಿಹಾರ ನೀಡುವ ಯೋಚನೆಯಿದೆ. ಜನರು ಪಾಲಿಕೆಗೆ ಮನವಿ ನೀಡಿ ಕಾಯುವ ಕೆಲಸ ಹೊಸ ಆಲೋಚನೆಯಿಂದ ತಪ್ಪುತ್ತದೆ” ಎಂದು ತಿಳಿಸಿದರು.

“ಸಂಚಾರ ದಟ್ಟಣೆ ಕಡಿಮೆ ಮಾಡಲು ಮೇಲ್ಸೆತುವೆ, ಮೆಟ್ರೋ ಹಾಗೂ ಸುರಂಗ ರಸ್ತೆ ಈ ಮೂರು ಬಗೆಯ ಪರಿಹಾರ ಮಾತ್ರ ಇರುವುದು. ಈಗ ರಸ್ತೆ ಅಗಲೀಕರಣ ಕಷ್ಟದ ಕೆಲಸ, ಭೂಮಿಯ ಸ್ವಾದೀನದ ಬೆಲೆ ಹೊಸ ಕಾನೂನು ಬಂದ ನಂತರ ಹೆಚ್ಚಳವಾಗಿದೆ, ಜನ ನಮಗೆ ಸಹಕಾರ ನೀಡುವುದು ಸಹ ಕಷ್ಟವಾಗುತ್ತದೆ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿರುವ ಐಟಿ ಪಾರ್ಕ್ ಉದ್ಯೋಗಿಗಳ ಕಚೇರಿ ಸಮಯ ಹಾಗೂ ಶಾಲೆಗಳ ಸಮಯದಲ್ಲಿ ಬದಲಾವಣೆ ಬಗ್ಗೆ ಚರ್ಚೆ ನಡೆಸಲು ಸಂಚಾರಿ ಪೊಲೀಸ್ ವಿಭಾಗಕ್ಕೆ ಸೂಚಿಸಲಾಗಿದ್ದು, ಅವರು ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬಂದು ವರದಿ ಸಲ್ಲಿಸಲಿದ್ದಾರೆ” ಎಂದು ತಿಳಿಸಿದರು.

“ರಾಜಕಾಲುವೆ ವಿಚಾರವಾಗಿ ಬಿಬಿಎಂಪಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದ್ದು, ನೀರು ಹರಿಯಲು ಎಲ್ಲೆಲ್ಲಿ ತೊಡಕುಂಟಾಗಿದೆ ಅಲ್ಲೆಲ್ಲಾ ಮುಂಚಿತವಾಗಿಯೇ ಒತ್ತುವರಿ ತೆರವುಗೊಳಿಸಲು ಸೂಚಿಸಲಾಗಿದೆ” ಎಂದು ಹೇಳಿದರು. “ಘನತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಶಾಶ್ವತವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದ್ದೇವೆ. ಕಸವನ್ನು ಒಂದು ಕಡೆ ಮಾತ್ರ ಹಾಕಲಾಗುತ್ತಿದ್ದು ಸರಿಯಾಗಿ ವಿಂಗಡಣೆಯಾಗುತ್ತಿಲ್ಲ. ಆದ ಕಾರಣ ಪರಿಸರ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ಮಂಗಳವಾರ (ಅ.10) ಕರೆಯಲಾಗಿದೆ. ಒಮ್ಮೆ ಕಸವನ್ನು ಒಂದು ಕಡೆ ಹಾಕಿದರೆ ಮುಂದಿನ 40 ವರ್ಷಗಳು ಆ ಸ್ಥಳದಲ್ಲಿ ಯಾವುದೇ ಯೋಜನೆಗಳನ್ನು ಹಾಕಿಕೊಳ್ಳಬಾರದು. ಆ ಸ್ಥಳದಲ್ಲೇ ಕಸವನ್ನು ಗೊಬ್ಬರ ಹಾಗೂ ವೈಜ್ಞಾನಿಕ ವಿಂಗಡಣೆ ಮಾಡಲಾಗುವುದು” ಎಂದು ಹೇಳಿದರು.

“750 ಎಂಎಲ್ಡಿ ನೀರು ಪೂರೈಸುವ ಕಾವೇರಿ 5 ನೇ ಹಂತ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿದಂತಾಗುತ್ತದೆ. 20 ಎಸ್ಟಿಪಿಗಳನ್ನು ಸ್ಥಾಪನೆ ಮಾಡಲಾಗುತ್ತಿದ್ದು, ಒಳಚರಂಡಿ ನೀರಿನ ಶುದ್ದೀಕರಣ ಮಾಡುವ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಅನೇಕಲ್, ಅತ್ತಿಬೆಲೆ ಹಾಗೂ 110 ಹಳ್ಳಿಗಳಿಗೆ ಶೀಘ್ರ ಕಾವೇರಿ ನೀರು ನೀಡಲಾಗುವುದು” ಎಂದು ತಿಳಿಸಿದರು. “ಬಿಡಿಎ ಅಪಾರ್ಟ್ಮೆಂಟ್ ಮತ್ತು ನಿವೇಶನಗಳ ಕುರಿತು ಎರಡು ದಿನಗಳಲ್ಲಿ ಪತ್ರಿಕಾಗೋಷ್ಟಿ ಕರೆದು ವಿವರಣೆ ನೀಡಲಾಗುವುದು. ಇದರ ಬಗ್ಗೆ ವಿಶೇಷವಾದ ಯೋಜನೆ ರೂಪಿಸುತ್ತಿದ್ದು ಪ್ರತ್ಯೇಕ ಚರ್ಚೆ ನಡೆಸಲಾಗುವುದು” ಎಂದು ತಿಳಿಸಿದರು.

“ಬೆಂಗಳೂರು ಯೋಜಿತವಾದ ನಗರವಲ್ಲ, ಒಂದಷ್ಟು ಭಾಗ ಮಾತ್ರ ಸಮರ್ಪಕವಾಗಿತ್ತು, ಆನಂತರ ಬೆಳೆದು, ಈಗ 28 ವಿಧಾನಸಭಾ ಕ್ಷೇತ್ರಗಳು ಒಳಗೆ ಸೇರಿಕೊಂಡಿವೆ. ಪ್ರತಿ ವರ್ಷ 2- 3 ಲಕ್ಷ ಜನರು ಹೊರಗಿನಿಂದ ಬಂದು ಬೆಂಗಳೂರು ಸೇರಿಕೊಳ್ಳುತ್ತಿದ್ದಾರೆ. 1.48 ಕೋಟಿ ಜನ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದು ಎಲ್ಲರೂ ವಾಸಿಸುವ ಯೋಗ್ಯ ನಗರವನ್ನಾಗಿ ರೂಪಿಸಲಾಗುವುದು.

ವಿದ್ಯುತ್ ಸಂಪರ್ಕಗಳು ಎಷ್ಟು ಹೆಚ್ಚಳವಾಗುತ್ತಿವೆ ಎನ್ನುವ ಆಧಾರದ ಮೇಲೆ ಅಂದಾಜು ಸಿಗುತ್ತಿದೆ. ಕುಡಿಯುವ ನೀರು, ಸಂಚಾರ ದಟ್ಟಣೆ ಸೇರಿದಂತೆ ಅನೇಕ ಸಮಸ್ಯೆಗಳು ಹೆಚ್ಚುತ್ತಿದ್ದು, ಇದರ ನಿವಾರಣೆಗೆ 8 ತಂಡಗಳನ್ನು ಮಾಡಿದ್ದು ಅವುಗಳು ನೀಡುವ ವರದಿಯ ಮೇಲೆ ಯೋಜನೆ ರೂಪಿಸಲಾಗುವುದು” ಎಂದು ತಿಳಿಸಿದರು.

Tags: BangloreCauvery waterDCM DK ShivakumarNewsTraffic
Previous Post

ಇಸ್ರೇಲ್‌ನ ಸರ್ಪಗಾವಲು ತಪ್ಪಿಸಿ ಹಮಾಸ್‌ ಸೇನಾ ಶಸ್ತ್ರಾಸ್ತ್ರಗಳನ್ನ ಪಡೆಯುತ್ತಿರೋದಾದ್ರೂ ಹೇಗೆ…?

Next Post

ಕುಮಾರಣ್ಣ ಹಿಂದೆ ಏನು ಮಾಡಿದ್ದರು, ಮುಂದೆ ಏನು ಮಾಡಲು ಹೊರಟಿದ್ದಾರೆ ಎಂಬುದನ್ನು ಹೇಳಿದ್ದಾರೆ: ಡಿ.ಕೆ. ಶಿವಕುಮಾರ್

Related Posts

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
0

https://youtube.com/live/MVIPvxtGf0k

Read moreDetails
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

July 5, 2025

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

July 5, 2025

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

July 5, 2025
Next Post
ಕುಮಾರಣ್ಣ ಹಿಂದೆ ಏನು ಮಾಡಿದ್ದರು, ಮುಂದೆ ಏನು ಮಾಡಲು ಹೊರಟಿದ್ದಾರೆ ಎಂಬುದನ್ನು ಹೇಳಿದ್ದಾರೆ: ಡಿ.ಕೆ. ಶಿವಕುಮಾರ್

ಕುಮಾರಣ್ಣ ಹಿಂದೆ ಏನು ಮಾಡಿದ್ದರು, ಮುಂದೆ ಏನು ಮಾಡಲು ಹೊರಟಿದ್ದಾರೆ ಎಂಬುದನ್ನು ಹೇಳಿದ್ದಾರೆ: ಡಿ.ಕೆ. ಶಿವಕುಮಾರ್

Please login to join discussion

Recent News

Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

by ಪ್ರತಿಧ್ವನಿ
July 5, 2025
SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!
Top Story

SriLeela: ʼಜೂನಿಯರ್‌ʼ ವೈರಲ್‌ ವಯ್ಯರಿ… ಕಿರೀಟಿ-ಶ್ರೀಲೀಲಾ ಡ್ಯಾನ್ಸ್‌ ಭರ್ಜರಿ..!!

by ಪ್ರತಿಧ್ವನಿ
July 5, 2025
Top Story

Dolly Dananjay: ಹೊಸ ರೆಟ್ರೋ ಲುಕ್‌ನಲ್ಲಿ ಧನಂಜಯ್..

by ಪ್ರತಿಧ್ವನಿ
July 5, 2025
Top Story

Ranya Rao: ಅಕ್ರಮ ಚಿನ್ನ ಸಾಗಾಟಣೆಯ ನಟಿ ರನ್ಯಾ ರಾವ್ ಗೆ ಸೇರಿದ 34 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು

by ಪ್ರತಿಧ್ವನಿ
July 5, 2025
ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,
Top Story

ಇಂದು ಸ್ವಾಮಿ ವಿವೇಕಾನಂದರನ್ನು ಅದಮ್ಯ ಚೇತನ, ವೀರ ಸನ್ಯಾಸಿ,

by ಪ್ರತಿಧ್ವನಿ
July 5, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

ರಾಜೀವ್‌ ಹತ್ಯೆ ಯ ʻThe Hunt ́ ಪ್ರೇಕ್ಷಕರ ಮುಂದೆ/ಮುಂದೇನು?

July 5, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಯಾದಗಿರಿ..!

July 5, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada