ಕೇಂದ್ರ ಬರ ಅಧ್ಯಯನ ತಂಡಕ್ಕೆ ರಾಜ್ಯದ ಕ್ಲಿಷ್ಟ ಪಾಕೃತಿಕ ಸಂಕಷ್ಟ ಮನವರಿಕೆಯಾಗಿದ್ದು, ಒಂದು ವಾರದೊಳಗೆ ವರದಿ ಸಲ್ಲಿಸಲಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ರಾಜ್ಯದ 13 ಜಿಲ್ಲೆಗಳಲ್ಲಿ ಮೂರು ದಿನಗಳ ಬರ ಆಧ್ಯಯನ ಮುಗಿಸಿದ ಕೇಂದ್ರ ತಂಡ ತಂಡ ವಿಧಾನದದ ಸಮಿತಿ ಕೊಠಡಿಯಲ್ಲಿ ನಡೆದ ವಿಕೋಪ ನಿರ್ವಹಣೆಗೆ ರಚಿಸಲಾಗಿರುವ ಸಚಿವ ಉಪ ಸಮಿಯಿ ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ವಿನಿಮಯ ಮಾಡಿಕೊಂಡಿತು . ಸಭೆಯ ನಂತರ ಕೃಷಿ ಸಚಿವರು ಕಂದಾಯ ಸಚಿವರಾದ ಕೃಷ್ಣಾ ಬೈರೆಗೌಡ ಅವರೊಂದಿಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಒಕ್ಕೂಟದ ವ್ಯವಸ್ಥೆಯಲ್ಲಿ ಕೇಂದ್ರ ರಾಜ್ಯಗಳ ನಡುವೆ ಪರಸ್ಪರ ನಂಬಿಕೆ, ಸಮನ್ವಯ ಅಗತ್ಯ. ಶೀಘ್ರವೇ ಬರ ಪರಿಹಾರ ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆ ನಮ್ಮದ್ದು ಎಂದು ಚಲುವರಾಯಸ್ವಾಮಿ ತಿಳಿಸಿದರು..
ಹಸಿರು ಬರ ಹಾಗೂ ರೈತರ ಸಂಕಷ್ಟ ಪರಿಸ್ಥಿತಿ ಕೇಂದ್ರ ತಂಡಕ್ಕೆ ಮನವರಿಕೆಯಾಗಿದೆ ಎಂಬುದು ಸಭೆಯಲ್ಲಿನ ಅಭಿಪ್ರಾಯ ವಿನಿಮಯದ ವೇಳೆ ತಿಳಿದಿದೆ. ಕೇಂದ್ರ ಸರ್ಕಾರಕ್ಕೆ ನಿರ್ಧಾರದ ಬಗ್ಗೆ ಕಾಯ್ದು ನೋಡೋಣ.ರೈತರ ಹಿತ ಕಾಯಲು ರಾಜ್ಯ ಸರ್ಕಾರ ಸದಾ ಸಿದ್ದವಾಗಿದೆ ಎಂದು ಎನ್. ಚಲುವರಾಯಸ್ವಾಮಿ ಹೇಳಿದರು.

ಮುಖ್ಯಮಂತ್ರಿಗಳು ಸಚಿವ ಸಂಪುಟ ಉಪ ಸಮಿತಿ ಸದಸ್ಯರಾಗಿರುವ ಸಚಿವರುಗಳು ದೆಹಲಿಗೆ ತೆರಳಿ ಕೇಂದ್ರ ಕೃಷಿ ಹಾಗು ಗೃಹ ಸಚಿವರನ್ನು ಭೇಟಿ ಮಾಡಿ ರಾಜ್ಯದ ಬರ ಸ್ಥಿತಿಯನ್ನು ವಿವರಿಸುವಂತೆ ಸೂಚಿಸಿದಂತೆ ಅದರಂತೆ ಕಾಲಾವಕಾಶ ಕೋರಲಾಗಿದ್ದು ಶೀಘ್ರದಲ್ಲೇ ದೆಹಲಿಗೆ ತೆರಳಲಾಗುವುದು ಎಂದು ಹೇಳಿದರು.
ರಾಜ್ಯದ ಬರ ಪೀಡಿತ ತಾಲ್ಲೂಕುಗಳಿಂದ ಹೊರಗುಳಿದಿದ್ದ 41 ತಾಲ್ಲೂಕುಗಳ ಪೈಕಿ 21 ತಾಲೂಕುಗಳು ಈಗ ಕೇಂದ್ರದ ನಿಯಮಾವಳಿಗ ಪ್ರಕಾರ ಬೆಳೆ ಸಮೀಕ್ಷೆಗೆ ಅರ್ಹ ವಾಗಿದ್ದು ಮುಂದಿನ ಎರೆಡು ದಿನಗಳೊಳಗೆ ಗ್ರೌಡ್ ಟ್ರುಥ್ ವೆರಿಫಿಕೇಷನ್ ಮಾಡಲು ಅಧಿಕಾರಿಗಳಿಗೆ ಸೂಚಿಸಿಲಾಗಿದೆ ಎಂದು ಕೃಷಿ ಸಚಿವರು ಮಾಹಿತಿ ನೀಡಿದರು

ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಸಹಕಾರ ಸಚಿವರಾದ ಕೆ ರಾಜಣ್ಣ ,ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಸೇರಿದಂತೆ ಕಂದಾಯ ಹಾಗು ಕೃಷಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಕೇಂದ್ರ ಬರ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ಸೇರಿದಂತೆ ಇತರ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು..