ಮುಖ್ಯಮಂತ್ರಿ ಸಿದ್ದರಾಮಯ್ಯ ಟಿ ನರಸೀಪುರದಲ್ಲಿ ಮಾತನಾಡಿದ್ದ ಮಾತು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. ಸಿಎಂ ಸಿದ್ದರಾಮಯ್ಯ ಮಾತಿನಲ್ಲಿ ಎಚ್ಚರಿಕೆ ಕೊಟ್ರಾ..? ಬೆಂಬಲಿಗರಿಗೆ ಸಂದೇಶ ರವಾನೆ ಮಾಡಿದ್ರಾ ಅನ್ನೋ ಮಾತುಗಳೂ ಕೇಳಿ ಬರುತ್ತಿವೆ. ಆದರೆ ಸಿಎಂ ಸಿದ್ದರಾಮಯ್ಯ ಆಪರೇಷನ್ ಕಮಲ ಪ್ರಸ್ತಾಪ ಮಾಡುವ ಮೂಲಕ 50 ಶಾಸಕರಿಗೆ ತಲಾ 50 ಕೋಟಿ ಕೊಡುವುದಕ್ಕೆ ಪ್ರಯತ್ನ ಮಾಡಿದ್ರು. ಅದು ಸಾಧ್ಯವಾಗದ್ದಕ್ಕೆ ನನ್ನ ವಿರುದ್ಧ ಸುಳ್ಳು ಕೇಸ್ ಹಾಕಿದ್ದಾರೆ ಎಂದು ಅಬ್ಬರಿಸಿದ್ದಾರೆ. ಅಂದರೆ ಸಿಎಂ ಸಿದ್ದರಾಮಯ್ಯಗೆ ಬಂಧನದ ಭೀತಿ ಎದುರಾಗಿದ್ಯಾ..? ಅನ್ನೋ ಪ್ರಶ್ನೆ ಮೂಡಿಸುತ್ತಿದೆ.
ಮುಡಾ ಹಗರಣದಲ್ಲಿ ಒಂದು ಕಡೆ ಲೋಕಾಯುಕ್ತ ತನಿಕೆ ನಡೆಯುತ್ತಿದೆ. ಮತ್ತೊಂದು ಕಡೆ ಇಡಿ ತನಿಖೆಯೂ ನಡೆಯುತ್ತಿದೆ. ಲೋಕಾಯುಕ್ತ ಎಸ್‌ಪಿ ಎದುರು ತನಿಖೆಗೆ ಹಾಜರಾಗಿದ್ದ ಸಿಎಮ ಸಿದ್ದರಾಮಯ್ಯ, ಆರಾಮವಾಗಿ ಹೊರ ಬಂದಿದ್ದರು. ಆದರೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಒಬ್ಬೊಬ್ಬರನ್ನೇ ಕರೆದು ವಿಚಾರಣೆ ಮಾಡ್ತಿದ್ದು, ಅಮದಿನ ಡಿಸಿ, ತಹಶೀಲ್ದಾರ್, ಮುಡಾ ಅಧ್ಯಕ್ಷ ಮರಿಗೌಡ, ಸಿದ್ದರಾಮಯ್ಯ ಆಪ್ತ ಸಹಾಯಕ ಎಲ್ಲರನ್ನು ವಿಚಾರಣೆ ಮಾಡಿದ್ದಾರೆ. ಮುಮದಿನ ದಿನಗಳಲ್ಲಿ ಸಿಎಂ ಹಾಗು ಸಿಎಂ ಪತ್ನಿಯನ್ನೂ ವಿಚಾರಣೆಗೆ ಕರೆಯುವ ಸಾಧ್ಯತೆಯಿದೆ. ಒಂದು ವೇಳೆ ವಿಚಾರಣೆಗೆ ಕರೆದು ಬಂಧನ ಮಾಡುವ ಮುನ್ಸೂಚನೆ ಸಿಕ್ಕಿದೆಯಾ? ಅನ್ನೋ ಪ್ರಶ್ನೆಗಳನ್ನು ಎದುರಾಗ್ತಿವೆ..
ಮುಡಾ ಹಗರಣದ ಬಳಿಕ ಕಾಂಗ್ರೆಸ್‌ಲ್ಲಿ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಚಿಂತನೆ ನಡೆಸಿದ್ಯಾ..? ಅನ್ನೋ ಪ್ರಶ್ನೆಯೂ ಎದುರಾಗಿದ್ದು, ಉಪಚುನಾವಣೆ ಮುಗಿಯಲಿ ಅಂತಾ ಹೈಕಮಾಂಡ್ ಕಾಯ್ತಿತ್ತಾ..? ಅದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿದ್ರಾ..? ಅನ್ನೋ ಬಗ್ಗೆ ಬಿಜೆಪಿ ನಾಯಕರು ಪ್ರಶ್ನೆ ಎತ್ತಿದ್ದಾರೆ. ಆಪರೇಷನ್ ಕಮಲ, 50 ಕೋಟಿ ಆಫರ್ ಅನ್ನೋ ಹಳೇ ವಿಚಾರ ಕೆದಕಿ ಸಂದೇಶ ರವಾನೆ ಮಾಡಿದ್ರಾ..? ಈ ಮೂಲಕ ಆಪ್ತ ಬಳಗ ಬೆಂಬಲಕಕ್ಕೆ ನಿಲ್ಲುವಂತೆ ತಂತ್ರಗಾರಿಕೆ ಮಾಡಿದ್ರಾ..? ಅನ್ನೋ ಅನುಮಾನಗಳೂ ಕಾಡುತ್ತಿವೆ.
ಸಿದ್ದರಾಮಯ್ಯ ಬಂಧನ ಮಾಡಿದ್ರೆ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟಗಳು ನಡೆಯುತ್ತವೆ ಅನ್ನೋದು ಕಟು ಸತ್ಯ. ಆದರೂ ಜಾರಿ ನಿರ್ದೇಶನಾಲಯ ಅಧಿಕಾರಿಗಳು ತನಿಖೆಯಲ್ಲಿ ಪ್ರಮುಖ ಸಾಕ್ಷಿಗಳು ಸಿಕ್ಕರೆ ಸಿಎಂ ಸಿದ್ದರಾಮಯ್ಯ ಅವರನ್ನು ಬಂಧನ ಮಾಡದೆ ಬಿಡುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕರ್ತವ್ಯ. ಕಾನೂನು ಸುವ್ಯವಸ್ಥೆಗೂ ಸಿಎಂ ಸಿದ್ದರಾಮಯ್ಯ ಅವರನ್ನು ಬಂಧನ ಮಾಡುವ ವಿಚಾರಕ್ಕೂ ಸಂಬಂಧವಿಲ್ಲ. ಇ.ಡಿ ಅಧಿಕಾರಿಗಳು ಸಮಗ್ರವಾದ ದಾಖಲೆಗಳನ್ನು ಸಂಗ್ರಹ ಮಾಡ್ತಿದ್ದಾರೆ ಎನ್ನಲಾಗ್ತಿದೆ.