ಮಾಜಿ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಮುಖಂಡ ನಾರಾಯಣಸಾ ಭಾಂಡಗೆ ಕಾಂಗ್ರೆಸ್ ವಿರುದ್ಧ ನಾಲಿಗೆ ಹರಿ ಬಿಟ್ಟಿದ್ದಾರೆ. ಕಾಂಗ್ರೆಸ್ಸಿಗರಿಗೆ ಮುಸಲ್ಮಾನರೇ ಅವರಿಗೆ ತಂದೆ ತಾಯಿ. ಕಾಂಗ್ರೆಸ್ ಪಕ್ಷ ಮುಸಲ್ಮಾನರ ಪಕ್ಷ ಎಂದು ರಾಹುಲ್ ಗಾಂಧಿಯವರೇ ಹೇಳಿದ್ದಾರಲ್ಲ ಎಂದು ಲೇವಡಿ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಎಲ್ಲ ಸೌಲತ್ತುಗಳನ್ನು ಮುಸಲ್ಮಾನರಿಗೆ ಮೊದಲು ಕೊಡಬೇಕೆಂದು ಕಾಂಗ್ರೆಸ್ ಪಕ್ಷದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರಲ್ಲ. ಅದನ್ನ ನಾವು ಪೇಪರ್ ನಲ್ಲಿ ನೋಡಿದ್ದೇವೆ. ಎರಡು ಮಕ್ಕಳನ್ನ ಹೆತ್ತವರು ನಾವು ಟ್ಯಾಕ್ಸ್ ಕಟ್ಟಬೇಕು. ಹತ್ತು ಮಕ್ಕಳನ್ನ ಹೆತ್ತವರು ಅದರ ಉಪಯೋಗ ತಗೆದುಕೊಳ್ಳಬೇಕಾ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಉಸ್ಮಾನ್ ಗಣಿ ಹುಮನಾಬಾದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಉಸ್ಮಾನ್ ಗಣಿ ಭಾರತ ಮಾತೆಯ ಬಗ್ಗೆ ಅವಮಾನ ಮಾಡಿದ್ದಾರೆ. ಬಸವಣ್ಣನವರ ಬಗ್ಗೆ ಮಾತನಾಡಲು ಸೊಕ್ಕಾ ಈ ಮಕ್ಕಳಿಗೆ. ಇವರನ್ನ ಹಿಡಿದು ಒದಿಬೇಕು. ನಾನು ಇದ್ರೆ ಮಾತ್ರ ಒದಿತಿದ್ದೆ. ಬಸವಣ್ಣನವರ ಬಗ್ಗೆ ಹೀನವಾಗಿ ಮಾತಾಡಿದ್ರೂ ಯಾವ ಮಠಾಧೀಶರು ಮಾತನಾಡಲಿಲ್ಲ. ನನಗೆ ಇದು ಆಶ್ಚರ್ಯ ಆಯಿತು ಎಂದಿದ್ದಾರೆ.
ಮಠಾಧೀಶರು ಸ್ವಹಿತ ರಾಜಕಾರಣಕ್ಕೆ ಇಳಿದಿದ್ದಾರೆ. ಅಲ್ಲಿದ್ದವರು ಹೇಗೆ ಸುಮ್ಮನೇ ಕೂತ್ರೋ ಗೊತ್ತಿಲ್ಲ. ಎಸ್ಪಿಯವರು ಗಡಿಪಾರು ಮಾಡ್ತೀವಿ ಅಂದ್ರು. ಇನ್ನೊಮ್ಮೆ ಅವನು ಬಾಯಿಂದ ಮಾತನಾಡದ ಹಾಗೆ ಮಾಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದೇನೆ. ಭಾರತ ಮಾತೆ, ಗಂಗಾ ಮಾತೆ ಎನ್ನೋದು ಅವೈಜ್ಞಾನಿಕ ಎಂದಿದ್ದ ಉಸ್ಮಾನ್ ಗಣಿ ವಿರುದ್ಧ ಹೀಗೆ ಆಕ್ರೋಶ ಮಾತುಗಳನ್ನಾಡಿದ್ದಾರೆ.