ಬೆಂಗಳೂರು : ಸತತ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ನಾಯಕ ಎಂಟಿಬಿ ನಾಗರಾಜು ಹಲ್ಲು ಕಿತ್ತ ಹಾವಿನಂತಾಗಿದ್ದಾರೆ, ಇಷ್ಟು ದಿನ ತನ್ನ ಸೋಲಿಗೆ ಮಾಜಿ ಸಚಿವ ಡಾ. ಕೆ ಸುಧಾಕರ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾರಣ ಎಂದು ಆಕ್ರೋಶ ಹೊರ ಹಾಕಿದ್ದ ಎಂಟಿಬಿ ಇದೀಗ ತಮ್ಮ ಸೋಲಿನ ಹೊಣೆಯನ್ನು ಮುಸ್ಲಿಂ ಸಮುದಾಯದ ಹೆಗಲ ಮೇಲೆ ಹಾಕಿದ್ದಾರೆ .

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದ ಆತ್ಮಾವಲೋಕನ ಸಭೆಯಲ್ಲಿ ಎಂಟಿಬಿ ನಾಗರಾಜು ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ. ನನ್ನ ಸೋಲಿಗೆ ಮುಸ್ಲಿಂ ಸಮುದಾಯವೇ ಕಾರಣ . ನಿಮಗೆ ಅಲ್ಲಾ ಸುಮ್ಮನೇ ಬಿಡೋದಿಲ್ಲ ಎಂದು ಬುಸುಗುಟ್ಟಿದ್ದಾರೆ .
ಎರಡು ದಿನಗಳ ಹಿಂದೆ ನಡೆದ ಸಭೆ ಇದಾಗಿದ್ದು ಇದರ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಜೆಪಿಯಿಂದ ಹಣ ಪಡೆದು ಕಾಂಗ್ರೆಸ್ಗೆ ಮತ ಹಾಕಿದ್ದೀರಿ, ಖುರಾನ್ ಮೇಲೆ ಪ್ರಮಾಣ ಮಾಡಿ ಬಿಜೆಪಿಗೆ ಮತ ಹಾಕುತ್ತೇನೆ ಎಂದು ಹೇಳಿದ್ದರು, ಆದರೆ ಅಲ್ಲಾ ಮೇಲೆ ಪ್ರಮಾಣ ಮಾಡಿದ್ದ ಮುಸ್ಲಿಮರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ .