
ರಾಜ್ಯದಲ್ಲಿ ತೀವ್ರ ಚರ್ಚೆ ಮತ್ತು ಕುತೂಹಲಕ್ಕೆ ಕಾರಣವಾಗಿದ್ದ ಜಾತಿ ಜನಗಣತಿ ವರದಿ ಅಧಿಕೃತವಾಗಿ ಬಹಿರಂಗಗೊಂಡಿದೆ. ಸೋರಿಕೆಯಾಗಿದ್ದ ವರದಿಯ ಅಂಕಿ ಅಂಶಗಳಿಗೆ ಹೋಲುವಂತಿರುವ ಈ ವರದಿಯಲ್ಲಿ ರಾಜ್ಯದಲ್ಲಿ ಮುಸ್ಲಿಂ ಸಮುದಾಯವೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ವರದಿ ನೀಡಲಾಗಿದೆ.

ಈ ವರದಿಯ ಅಂಕಿ ಅಂಶಗಳ ಪ್ರಕಾರವಾಗಿ ಕರ್ನಾಟಕದಲ್ಲಿ 72.25 ಲಕ್ಷ ಮುಸ್ಲಿಮರಿದ್ದು, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 18.7 ರಷ್ಟಿದ್ದಾರೆ.

ಇನ್ನುಳಿದಂತೆ ಲಿಂಗಾಯತ 66 ಲಕ್ಷ ಜನ, ವೀರಶೈವ ಲಿಂಗಾಯತರು 10 ಲಕ್ಷ ಜನ, ಮತ್ತೊಂದು ಪ್ರಬಲ ಸಮುದಾಯವಾದ ಒಕ್ಕಲಿಗರು 61 ಲಕ್ಷ ಜನ, ಪರಿಶಿಷ್ಟ ಜಾತಿ ಒಂದು ಕೋಟಿ, ಪರಿಶಿಷ್ಟ ಪಂಗಡ 42 ಲಕ್ಷ ಹಾಗಿ ಕುರುಬರು 44 ಲಕ್ಷ ಮತ್ತು ಬಣಜಿಗ 10 ಲಕ್ಷ, ಕ್ರಿಶ್ಚಿಯನ್ 9 ಲಕ್ಷ ಜನಸಂಖ್ಯೆ ಎಂದು ವರದಿ ನೀಡಲಾಗಿದೆ.