ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ನಂತರ, ಶುಕ್ರವಾರ, ನವೆಂಬರ್ 19 ರಂದು ಮುಸ್ಲಿಂ ಸಂಘಟನೆಗಳ ಮುಖಂಡರು ಮತ್ತು ಬಿಎಸ್‌ಪಿ ಎಂಪಿ ಕುನ್ವರ್ ಡ್ಯಾನಿಶ್ ಅಲಿ ಅವರು ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಜಮಾತ್-ಎ-ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯದ್ ಸಾದತುಲ್ಲಾ ಹುಸೇನಿ ಮಾತನಾಡಿ, “ನಾವು ಈಗ ಸಿಎಎ-ಎನ್‌ಆರ್‌ಸಿ ಮುಂತಾದ ಇತರ ಜನವಿರೋಧಿ ಮತ್ತು ಸಂವಿಧಾನ ವಿರೋಧಿ ಕಾನೂನುಗಳನ್ನು ಸಹ ಹಿಂಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇವೆ ಮತ್ತು ಅವುಗಳನ್ನು ಸಹ ಹಿಂತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತೇವೆ. ರೈತರ ಬೇಡಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಗೂ ಸಮ್ಮತಿಸಿರುವುದು ನಮಗೆ ಸಂತಸ ತಂದಿದೆ. ಇದನ್ನು ಮೊದಲೇ ಮಾಡಿದ್ದರೆ ಅನೇಕ ಸಾವು ನೋವುಗಳನ್ನು ತಪ್ಪಿಸಬಹುದಿತ್ತು ಎಂದಿದ್ದಾರೆ.
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ಸ್ವಾಗತಿಸಿರುವ ಜಮಿಯತ್ ಉಲಮಾ-ಎ-ಹಿಂದ್ ಮುಖ್ಯಸ್ಥ ಅರ್ಷದ್ ಮದನಿ ಹೇಳಿಕೆಯಲ್ಲಿ, “ಸಿಎಎ ಆಂದೋಲನವು ರೈತರನ್ನು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಲು ಪ್ರೋತ್ಸಾಹಿಸಿತು. ಸರ್ಕಾರವು ಈಗ ಸಿಎಎ ಅನ್ನು ಹಿಂಪಡೆಯಬೇಕು. .ನಮ್ಮ ರೈತರು ಅಗಾಧ ತ್ಯಾಗ ಮಾಡಿದ್ದಾರೆ ನಾವು ಅವರ ಹೋರಾಟವನ್ನು ಅಭಿನಂದಿಸಲೇಬೇಕು. ದೇಶದ ಎಲ್ಲ ಚಳವಳಿಗಳಂತೆ ರೈತ ಚಳವಳಿಯನ್ನು ಬಗ್ಗುಬಡಿಯಲು ಎಲ್ಲ ಪ್ರಯತ್ನಗಳನ್ನು ಮಾಡಲಾಯಿತು, ರೈತರನ್ನು ವಿಭಜಿಸಲು ಷಡ್ಯಂತ್ರಗಳನ್ನು ರೂಪಿಸಿದರು ಆದರೆ ರೈತರು ಅದೆಲ್ಲವನ್ನು ಹಿಮ್ಮೆಟ್ಟಿ ತಮ್ಮ ಹೋರಾಟವನ್ನು ಮುಂದುವರೆಸಿದ ಪರಿಣಾಮವೇ ಇದು ಎಂದಿದ್ದಾರೆ.

ನ್ಯಾಯಸಮ್ಮತವಾದ ಉದ್ದೇಶಕ್ಕಾಗಿ ಪ್ರಾಮಾಣಿಕತೆ ಮತ್ತು ತಾಳ್ಮೆಯಿಂದ ಚಳವಳಿ ನಡೆಸಿದರೆ ಮುಂದೊಂದು ದಿನ ಯಶಸ್ಸು ಸಿಗುತ್ತದೆ ಎಂಬ ಸತ್ಯ ಮತ್ತೊಮ್ಮೆ ಬೆಳಕಿಗೆ ಬಂದಿದೆ. ರೈತರ ಶ್ರಮವನ್ನು ಶ್ಲಾಘಿಸಿದ ಅವರು, ಮಹಿಳೆಯರು ಮತ್ತು ವೃದ್ಧರು ಸಹ ನ್ಯಾಯಕ್ಕಾಗಿ ಹಗಲು ರಾತ್ರಿ ಬೀದಿಗಿಳಿದಿದ್ದರಿಂದ ಚಳವಳಿ ಯಶಸ್ವಿಯಾಯಿತು.
ಸಿಎಎಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಅರ್ಷದ್ ಮದನಿ ಅವರು, “ನಮ್ಮ ದೇಶದ ರಚನೆಯು ಪ್ರಜಾಪ್ರಭುತ್ವವಾಗಿದೆ ಎಂದು ನಮ್ಮ ಪ್ರಧಾನಿ ಹೇಳುತ್ತಾರೆ, ಮುಸ್ಲಿಮರಿಗೆ ಸಮಸ್ಯೆಯಾಗುವಂತೆ ತಂದಿರುವ ಕಾನೂನುಗಳತ್ತ ಗಮನ ಹರಿಸಬೇಕು. ಕೃಷಿ ಕಾನೂನುಗಳಂತೆ, ಸಿಎಎ ಕೂಡ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಮಜ್ಲಿಸ್ ಎಮುಶಾವರತ್ ಅಧ್ಯಕ್ಷ ನವೈದ್ ಹಮೀದ್ ಮಾತನಾಡಿ, ಸಿಎಎ, ಯುಎಪಿಎ ಸೇರಿದಂತೆ ಎಲ್ಲ ಕಠೋರ ಕಾನೂನುಗಳನ್ನು ಹಿಂಪಡೆಯಬೇಕು, ಲಖೀಂಪುರ ಖೇರಿಯಲ್ಲಿ ರೈತರ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪಿ ತಂದೆ ಸಚಿವನನ್ನು ಕೂಡಲೇ ವಜಾಗೊಳಿಸಿ, ಕಿಸಾನ್ ಆಂದೋಲನದಲ್ಲಿ ಮಡಿದ ಎಲ್ಲಾ ರೈತರಿಗೆ ಸೂಕ್ತ ಪರಿಹಾರ ನೀಡಬೇಕು..” ಎಂದು ಆಗ್ರಹಿಸಿದ್ದಾರೆ.
ಕೃಷಿ ಕಾಯ್ದೆಯಂತೆ ತಡಮಾಡದೆ ಸಿಎಎ ಕಾಯ್ದೆ ಅನ್ನು ಹಿಂಪಡೆದುಕೊಳ್ಳಿ ಪ್ರಧಾನಿ ಮೋದಿ ಅವರೇ ಎಂದು ಬಿಎಸ್‌ಪಿ ಅಮ್ರೋಹಾ ಕ್ಷೇತ್ರದ ಎಂಪಿ ಕುನ್ವರ್ ಡ್ಯಾನಿಶ್ ಅಲಿ ಮಾತನಾಡಿ, 3 ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ನಿರ್ಧಾರ ಸ್ವಾಗತಾರ್ಹ ಕ್ರಮವಾಗಿದೆ. ಬಲಿಷ್ಠ ರಾಜ್ಯ ಶಕ್ತಿ ಮತ್ತು ಅವರ ಕ್ರೂರಿ ಬಂಡವಾಳಶಾಹಿ ಸ್ನೇಹಿತರ ವಿರುದ್ಧ ಹೋರಾಡಿದ ರೈತರನ್ನು ನಾನು ಅಭಿನಂದಿಸುತ್ತೇನೆ. ನರೇಂದ್ರ ಮೋದಿ ಜೀ ಪೌರತ್ವ ತಿದ್ದುಪಡಿ ಕಾಯಿದೆ #CAA ಅನ್ನು ಮತ್ತಷ್ಟು ವಿಳಂಬವಿಲ್ಲದೆ ಪರಿಗಣಿಸಬೇಕು ಮತ್ತು ರದ್ದುಗೊಳಿಸಬೇಕು. ಎಂದು ಟ್ವೀಠ್ ಮಾಡಿದ್ದಾರೆ.






