• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವಿಜಯ್‌ಗೆ ಬೆಂಬಲ ಘೋಷಿಸಿದ ಮುಸ್ಲಿಂ ಲೀಗ್‌ : ನಿರೀಕ್ಷೆಗೂ ಮೀರಿ ಏರಿಕೆಯಾದ ದಳಪತಿ ಸಂಖ್ಯಾಬಲ..

ಐದು ದಿನಗಳ ಕಣ್ಣಾಮುಚ್ಚಾಲೆ ಆಟಕ್ಕೆ ಕೊನೆಗೂ ಬಿತ್ತು ಬ್ರೇಕ್‌, ಯಾವುದೇ ಕ್ಷಣದಲ್ಲಿ ವಿಜಯ್‌ ಪಟ್ಟಾಭಿಷೇಕ್ಕೆ ಮುಹೂರ್ತ ನಿಗದಿ ಸಾಧ್ಯತೆ..

ಪ್ರತಿಧ್ವನಿ by ಪ್ರತಿಧ್ವನಿ
May 9, 2026
in Top Story, ಇದೀಗ, ದೇಶ, ರಾಜಕೀಯ
0
ವಿಜಯ್‌ಗೆ ಬೆಂಬಲ ಘೋಷಿಸಿದ ಮುಸ್ಲಿಂ ಲೀಗ್‌ : ನಿರೀಕ್ಷೆಗೂ ಮೀರಿ ಏರಿಕೆಯಾದ ದಳಪತಿ ಸಂಖ್ಯಾಬಲ..
Share on WhatsAppShare on FacebookShare on Telegram

ಚೆನೈ : ತಮಿಳುನಾಡಿನಲ್ಲಿ ನೂತನವಾಗಿ ಸರ್ಕಾರ ರಚಿಸುವ ಹಾದಿಯಲ್ಲಿ ಸಾಗುತ್ತಿರುವ ನಟ ವಿಜಯ್‌ ಅವರಿಗೆ ಎದುರಾಗಿದ್ದ ಸಂಕಟಗಳು ದೂರವಾಗಿವೆ. ಆರಂಭದಲ್ಲಿ ಕಾಂಗ್ರೆಸ್‌ ವಿಜಯ್‌ ಬೆಂಬಲಕ್ಕೆ ನಿಂತಿತ್ತು, ಅದಾದ ಬಳಿಕ ಎರಡು ಎಡಪಕ್ಷಗಳೂ ಸಹ ಬೇಷರತ್‌ ಆಗಿ ಬೆನ್ನಿಗೆ ನಿಲ್ಲುದಾಗಿವೆ ಘೋಷಿಸಿದ್ದವು. ಆದರೆ ವಿಸಿಕೆ ಬೆಂಬಲದ ವಿಚಾರದಲ್ಲಿ ಗೊಂದಲ ಮೂಡಿತ್ತು.

ADVERTISEMENT
Kota Shrinivas Poojari On BSY Abhimanotsava :ದಕ್ಷಿಣದಲ್ಲಿ ಬಿಜೆಪಿಗೆ ಹೆಬ್ಬಾಗಿಲು ತೆರೆದ ಕಟ್ಟಾಳು ಯಡಿಯೂರಪ್ಪ

ಬಳಿಕ ವಿಸಿಕೆಯು ವಿಜಯ್‌ಗೆ ಯಾವುದೇ ಷರತ್ತುಗಳಿಲ್ಲದೆ ಬೆಂಬಲವನ್ನು ನೀಡಿದೆ. ಆದರೆ ಆರಂಭದಲ್ಲಿ ನಾವು ವಿಜಯ್‌ ಬೆಂಬಲಿಸಲ್ಲ ಎಂದಿದ್ದ ಮುಸ್ಲಿಂ ಲೀಗ್‌ ಕೂಡ ಈಗ ವಿಜಯ್‌ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದು, ತಮಿಳುನಾಡಿನ ರಾಜ್ಯಪಾಲ ರಾಜೇಂದ್ರ ಅರ್ಳೇಕರ್‌ ಸೂಚನೆಯಂತೆ ಇದೀಗ ವಿಜಯ್‌ ಬಳಿ ಇರುವ ಶಾಸಕರ ಸಂಖ್ಯಾಬಲ 118 ರ ಬದಲು 120 ಏರಿಕೆಯಾಗಿದೆ. ಹೀಗಾಗಿ ತಮಿಳುನಾಡಿನ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಯ ಎಲ್ಲ ಅಡ್ಡಿ ಆತಂಕಗಳು ದೂರವಾದಂತಾಗಿದೆ.

 ಈ ವಾರದ ಆರಂಭದಲ್ಲಿ ನಡೆದಿದ್ದ ರಾಜಕೀಯ ಸಂಘರ್ಷ, ಸರ್ಕಾರ ರಚನೆಯ ಹಗ್ಗ- ಜಗ್ಗಾಟ ತಮಿಳುನಾಡಿನ ವಿಜಯ್‌ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಆದರೆ ಇದೀಗ ತಮಿಳುನಾಡಿನಲ್ಲಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ದಾರಿ ಸುಗಮವಾಗಿದೆ.

ಟಿವಿಕೆಗೆ ಮುಸ್ಲಿಂ ಲೀಗ್‌ ಬೆಂಬಲದ ಪತ್ರ ಇಲ್ಲಿದೆ…

Image

ಟಿವಿಕೆಗೆ ಬೆಂಬಲ ಘೋಷಿಸಿರುವ ಪಕ್ಷಗಳಲ್ಲಿ ವಿದುತಲೈ ಚಿರುತೈಗಲ್ ಕಚ್ಚಿ (VCK) ಮತ್ತು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಎರಡೂ ಪಕ್ಷಗಳು ತಲಾ ಇಬ್ಬರು ಶಾಸಕರನ್ನು ಹೊಂದಿದ್ದು, ಈಗ ತಮಿಳಗ ವೆಟ್ರಿ ಕಳಗಂ (TVK) ಗೆ ತಮ್ಮ ಬೇಷರತ್ತಾದ ಬೆಂಬಲವನ್ನು ನೀಡಿವೆ. ಈ ಪಕ್ಷಗಳ ಬೆಂಬಲದೊಂದಿಗೆ, ಟಿವಿಕೆ ನೇತೃತ್ವದ ಒಕ್ಕೂಟದ ಬಲವು ಈಗ 120 ಕ್ಕೆ ತಲುಪಿದ್ದು, ಸರ್ಕಾರ ರಚನೆಯ ದಾರಿ ಸುಲಭವಾಗಿದೆ.

ಇದನ್ನೂ ಓದಿ : ಬಂಗಾಳದಲ್ಲಿ ಬಿಜೆಪಿ ಹೊಸ ಅಧ್ಯಾಯ : ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣ ವಚನ

ವಿಸಿಕೆ ಬೆಂಬಲ ಪತ್ರದಲ್ಲೇನಿದೆ..?

ತಮಿಳುನಾಡಿನಲ್ಲಿ ಸ್ಥಿರ ಮತ್ತು ಪ್ರಜಾಪ್ರಭುತ್ವ ಸರ್ಕಾರವನ್ನು ಖಚಿತಪಡಿಸಿಕೊಳ್ಳಲು ವಿಜಯ್ ಅವರನ್ನು ಬೆಂಬಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಮ್ಮ ಇಬ್ಬರು ಶಾಸಕರ ಪರವಾಗಿ ಟಿವಿಕೆ ಅಧ್ಯಕ್ಷ ಡಾ. ಥೋಲ್ ತಿರುಮಾವಲವನ್, ತಮಿಳುನಾಡು ರಾಜ್ಯದಲ್ಲಿ ಸರ್ಕಾರ ರಚಿಸುವ ಉದ್ದೇಶದಿಂದ ಅದರ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿ ಜೋಸೆಫ್ ವಿಜಯ್ ಅವರ ನೇತೃತ್ವದಲ್ಲಿ ಟಿವಿಕೆಗೆ ನಮ್ಮ ಬೆಂಬಲವನ್ನು ಈ ಮೂಲಕ ತಿಳಿಸುತ್ತಿದ್ದೇವೆ ಎಂದು ಉಲ್ಲೇಖಿಸಲಾಗಿದೆ.

ತಮಿಳುನಾಡಿನ ಜನರಿಗೆ ಸ್ಥಿರ ಮತ್ತು ಪ್ರಜಾಪ್ರಭುತ್ವದ ಆಡಳಿತವನ್ನು ನೀಡುವ ಉದ್ದೇಶದಿಂದ ಈ ಬೆಂಬಲವನ್ನು ಘೋಷಿಸಲಾಗಿದೆ. ದಯವಿಟ್ಟು ನಮ್ಮ ಬೇಷರತ್ತಾದ ಬೆಂಬಲವನ್ನು ಸ್ವೀಕರಿಸಿಕೊಳ್ಳುವಂತೆ ನಾನು ಘನತೆವೆತ್ತ ನಿಮ್ಮನ್ನು ವಿನಂತಿಸುತ್ತೇನೆ ಎಂದು ವಿಸಿಕೆ ಶಾಸಕಾಂಗ ಪಕ್ಷದ ನಾಯಕ ವನ್ನಿ ಅರಸು ಅವರು ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರಿಗೆ ಸಹಿ ಮಾಡಿರುವ ಪತ್ರದಲ್ಲಿ ಹೇಳಲಾಗಿದೆ.

Tags: DemocracyGovernor Of TamilnaudIUMLLeftist PartiesNew Govt In TamilnaduPratidhvaniTamilaga Vettri Khazaghamtamilnadu newsTamilnadu Political RevolutionTamilnadu PoluiticsThol TirumavalvanTVKVCK
Previous Post

ವಿಜಯ್‌ ಸಿಎಂ ಆಗುವ ಹಾದಿ ಸುಗಮ : ಟಿವಿಕೆಗೆ ವಿಸಿಕೆ ಬೇಷರತ್‌ ಬೆಂಬಲ : ಘೋಷಣೆಯಷ್ಟೇ ಬಾಕಿ..

Next Post

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಬೆಂಗಳೂರಿನಲ್ಲಿ ಟ್ರಾಫಿಕ್ ಬದಲಾವಣೆ: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

Related Posts

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ
Top Story

Breking:ಹೃದಯಾಘಾತದಿಂದ ನಟ-ನಿರ್ಮಾಪಕ ದಿಲೀಪ್ ರಾಜ್ ನಿಧನ

by ಪ್ರತಿಧ್ವನಿ
May 13, 2026
0

ಬೆಂಗಳೂರು: ಕನ್ನಡ ಕಿರುತೆರೆ ಮತ್ತು ಚಿತ್ರರಂಗದ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ನಿಧನರಾಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇಂದು ಬೆಳಗಿನ ಜಾವ...

Read moreDetails
ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

ಮೋದಿ ಭಾಷಣದ ಬಳಿಕ ರಾಜಕೀಯ ಕದನ: ಸಿದ್ದರಾಮಯ್ಯ–ಪ್ರಲ್ಹಾದ್ ಜೋಶಿ ನಡುವೆ ತೀವ್ರ ವಾಕ್ಸಮರ

May 13, 2026
ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

ನೀಟ್ ಪರೀಕ್ಷೆಯಲ್ಲಿ ಭಾರೀ ಅಕ್ರಮ ಶಂಕೆ: ನಾಶಿಕ್‌ನಲ್ಲಿ ವಿದ್ಯಾರ್ಥಿಗಳ ಬಂಧನ, ದೊಡ್ಡ ಹಗರಣ ಬಯಲಾಗುವ ಸಾಧ್ಯತೆ!

May 12, 2026
ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

ಸಾರಿಗೆ ನೌಕರರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಿಹಿ ಸುದ್ದಿ

May 12, 2026
ಸಿಎಂ ಆದ ತಕ್ಷಣವೇ ವಿಜಯ್‌ರ ಮೊದಲ ಆದೇಶ: ದೇವಾಲಯ, ಶಾಲೆಗಳ ಬಳಿ ಈ ವಸ್ತು ಮಾರಾಟಕ್ಕೆ ಬ್ರೇಕ್!

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸಂಚಲನ: ಶುಭೇಂದು ಅಧಿಕಾರಿಗೆ ಶಾಸಕನಿಂದ ಬಹಿರಂಗ ಬೆದರಿಕೆ!

May 12, 2026
Next Post
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಬೆಂಗಳೂರಿನಲ್ಲಿ ಟ್ರಾಫಿಕ್ ಬದಲಾವಣೆ: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಬೆಂಗಳೂರಿನಲ್ಲಿ ಟ್ರಾಫಿಕ್ ಬದಲಾವಣೆ: ಈ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada