ಹೆಚ್ಚು ಜನ ತಮ್ಮ ಮಸಲ್ ಬಿಲ್ಡ್ ಮಾಡಬೇಕು ಅಂತ ಸಾಕಷ್ಟು ಪ್ರಯತ್ನವನ್ನ ಪಡ್ತಾರೆ. ಅದರಲ್ಲೂ ಕೂಡ ಗಂಡು ಮಕ್ಕಳು ಜಿಮ್ ಗೆ ವರ್ಕೌಟ್ ಅಂತ ಪ್ರತಿದಿನ ಅದರ ಬಗ್ಗೆ ಯೋಚನೆ ಮಾಡ್ತಾ ಇರ್ತಾರೆ.ವರ್ಕ್ ಮಾಡುವುದರ ಜೊತೆಗೆ ನಾವು ಸೇವಿಸುವಂತಹ ಆಹಾರ ಕೂಡ ಅಷ್ಟೇ ಮುಖ್ಯ. ಪೋಷಕಾಂಶಗಳು ಮತ್ತು ಪ್ರೋಟೀನ್ ಇರುವಂತ ಆಹಾರವನ್ನು ತಿನ್ನುವುದರಿಂದ ಬೇಗನೆ ಮಸಲ್ ಗೇನ್ ಆಗುತ್ತೆ. ಆದರೆ ಕೆಲವರು ವೆಜಿಟೇರಿಯನ್ಸ್ ಆಗಿರೋದ್ರಿಂದ ನಾನ್ ವೈಜ್ ಅಥವಾ ಮಾಂಸ ಪದಾರ್ಥವನ್ನು ತಿನ್ನೋದಕ್ಕೆ ಆಗೋದಿಲ್ಲ. ಇಂಥವರು ತರಕಾರಿಗಳನ್ನು ತಿಂದು ಮಸಲ್ ನ ಗೈನ್ ಮಾಡ್ಕೊಳ್ಬೋದು. ಯಾವ ತರಕಾರಿಗಳು ಮಸಲ್ ಬಿಲ್ಡ್ ಮಾಡುವುದಕ್ಕೆ ಉತ್ತಮ ಅನ್ನೋದರ ಡೀಟೇಲ್ಸ್ ಹೇಗಿದೆ..

ಬೀಟ್ರೂಟ್
ಮಸಲ್ ಬಿಲ್ಡ್ ಮಾಡಬೇಕು ಅಂತ ಇದ್ರೆ ತಮ್ಮ ಡಯಟ್ ಅಲ್ಲಿ ಬೀಟ್ರೂಟ್ ನ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು, ಉತ್ತಮ ಇದ್ರಲ್ಲಿ ಪೊಟ್ಯಾಶಿಯಂ ,ಮೆಗ್ನೀಷಿಯಂ ,ಫೈಬರ್ ಹಾಗೂ ಸಾಕಷ್ಟು ವಿಟಮಿನ್ ಅಂಶ ಇರುವುದರಿಂದ ದೇಹಕ್ಕೆ ಉತ್ತಮ. ಇನ್ನು ಬೀಟ್ರೂಟ್ ಸೇವಿಸುವುದರಿಂದ ನಿಮಗೆ ಎಕ್ಸ್ಟ್ರಾ ಸ್ಟ್ರೆಂತ್ ಸಿಗುತ್ತೆ ವರ್ಕೌಟ್ ಮಾಡೋದಿಕ್ಕೆ ಅಥವಾ ಏರೋಬಿಕ್ ಟ್ರೈನಿಂಗ್ ಟೈಮಲ್ಲಿ ಹೆಚ್ಚು ಶಕ್ತಿ ಒದಗುತ್ತದೆ ಕಾರಣ ಇದರಲ್ಲಿ ಶುಗರ್ ಕಂಟೆಂಟ್ ಇರುತ್ತದೆ.

ಆಲೂಗಡ್ಡೆ
ವರ್ಕೌಟ್ ಮಾಡುವ ಮುನ್ನ ಆಲುಗಡ್ಡೆಯನ್ನು ಸೇವಿಸುವುದರಿಂದ ಇದರಲ್ಲಿರುವ ಕಾರ್ಬೋಹೈಡ್ರೇಟ್ಸ್ ನಮ್ಮ ದೇಹಕ್ಕೆ ಉತ್ತಮವಾದ ಶಕ್ತಿಯನ್ನು ನೀಡುತ್ತದೆ. ಹಾಗೂ ಫೈಬರ್ ಇರುವುದರಿಂದ ನಮ್ಮ ದೇಹಕ್ಕೆ ಎನರ್ಜಿಯನ್ನ ಬೂಸ್ಟ್ ಮಾಡುತ್ತದೆ. ಹಾಗೂ ವಿಟಮಿನ್ B6 ಇರುವುದರಿಂದ ಮಜಲ್ ಗೈನ್ ಮಾಡುವುದಕ್ಕೆ ಸಹಾಯಕಾರಿ. ಹಾಗಾಗಿ ದಿನಕ್ಕೆ ಒಂದು ಕಪ್ ಅಷ್ಟು ಬೇಕ್ ಮಾಡಿರುವಂತ ಪೊಟಾಟೋವನ್ನು ತಿನ್ನುವುದು ಉತ್ತಮ.

ಅವಕಾಡು
ಇದರಲ್ಲಿ ಹೆಚ್ಚು ಪ್ರೋಟೀನ್ ಇರುತ್ತದೆ.ದಿನಕ್ಕೆ ಅಬ್ಬಬ್ಬಾ ಅಂದ್ರು ಒಂದು ಕಪ್ಪಲ್ಲಿ ಮೂರರಿಂದ ನಾಲ್ಕು ಗ್ರಾಮ್ ಅಷ್ಟು ಅವಕಾಡು ತಿನ್ನುವುದರಿಂದ ಮಸಲ್ ಗಾಯಿನ ಮಾತ್ರವಲ್ಲದೆ ದೊಡ್ಡದ ಮಸಲ್ ನಿಮ್ಮದಾಗುತ್ತದೆ.. ಇಷ್ಟು ಮಾತ್ರವಲ್ಲದೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು , ಕ್ಯಾನ್ಸರ್ ಹಾಗೂ ಲೋ ಬಿಪಿಗೆ ಅವಕಾಡು ಉತ್ತಮ ಪರಿಹಾರ.

ಇದೆಲ್ಲದರ ಜೊತೆಗೆ ಬ್ರೊಕೋಲಿ, ಬೀನ್ಸ್, ಗಾರ್ಲಿಕ್ ಹೂಕೋಸು, ಇವೆಲ್ಲವನ್ನ ತಮ್ಮ ಡಯಟ್ ನಲ್ಲಿ ಅಳವಡಿಸಿಕೊಂಡರೆ ಮಸಾಲೆ ಗೈನ್ ಮಾಡುವುದು ತುಂಬಾನೇ ಈಸಿ.
