![](https://pratidhvani.com/wp-content/uploads/2024/09/n633084587172769082508650ec4b5c910d6d909e6a14e012ad91bb402086784db7b0e1935d3f4f6c5d14b5-1024x576.jpg)
ಆನೇಕಲ್: ಆನೇಕಲ್ನಲ್ಲಿ (Anekal) ಒಂದು ಅಮಾನವೀಯ ಘಟನೆ ನಡೆದಿದೆ.ನಿರ್ಜನ ಪ್ರದೇಶದಲ್ಲಿ ನವಜಾತ ಶಿಶುವನ್ನು (Baby) ಜೀವಂತವಾಗಿ ಹೂತು ಹಾಕಿದ ಘಟನೆ ಆನೇಕಲ್ ತಾಲೂಕಿನ ಕತ್ರಿಗುಪ್ಪೆ ದಿಣ್ಣೆ ಗ್ರಾಮದಲ್ಲಿ ನಡೆದಿದೆ. ಸ್ಥಳೀಯರು ಬಹಿರ್ದೆಸೆಗೆ ಹೋದಾಗ ಮಗುವಿನ ಚೀರಾಟ ಕೇಳಿ, ಸ್ಥಳಕ್ಕೆ ದೌಡಾಯಿಸಿದ್ದಾರೆ.ಮಗುವನ್ನು ರಕ್ಷಿಸಿದ್ದಾರೆ.
![](https://pratidhvani.com/wp-content/uploads/2024/09/n633077106172769104096652ead4e31b8ac12114c54551215743b44609c3e2efd56bc8be1e4efc1a7443e7.jpg)
ನಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಮಕ್ಕಳ ರಕ್ಷಣಾಧಿಕಾರಿ ಹೆಚ್.ಕೆ.ಆಶಾ ತಂಡ ಮಗುವನ್ನು ಸಂರಕ್ಷಿಸಿದ್ದಾರೆ. ದೊಮ್ಮಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ ಸಣ್ಣಪುಣ್ಣ ಗಾಯಗಳಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣ ನಡೆದಿದೆ.