ಕೊಲೆ ಪ್ರಕರಣದಲ್ಲಿ ಮೈಸೂರಿನಲ್ಲಿ (Mysuru) ಮಹಜರು ಮಾಡಲಿರೋ ಪೊಲೀಸರು ದರ್ಶನ್ (Actor darshan) ತಂಗಿದ್ದ ಖಾಸಗಿ ಹೋಟೆಲ್ ನಲ್ಲಿ ಸಾಕ್ಷಿ ಕಲೆಹಾಕಲು ಮುಂದಾಗಿದ್ದಾರೆ. ಇಂದು ದರ್ಶನ್ ರನ್ನ ಮೈಸೂರಿಗೆ ಕರೆದೊಯ್ಯಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.
ರೇಣುಕಾಸ್ವಾಮಿ (Renuka swamy) ಕೊಲೆ ಬಳಿಕ ದರ್ಶನ್ ಮೈಸೂರಿಗೆ ತೆರಳಿದ್ದ ಮಾಹಿತಿ ಲಭ್ಯವಾಗಿದೆ. ಮೈಸೂರಿನ ಖಾಸಗಿ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಿದ್ದ ದರ್ಶನ್ ,ಅಲ್ಲಿಂದಲೇ ಮೃತದೇಹ ವಿಲೇವಾರಿ ಮಾಡಲು ಪೋನ್ ಕರೆ ಮಾಡಿದ್ದಾಗಿ ತಿಳಿದು ಬಂದಿದೆ.
ಅಲ್ಲದೇ ಆರೋಪಿಗಳು ಸರೆಂಡರ್ ಆಗಲು ಮೀನಾಮೇಷ ಎಣಿಸಿ ಬಳಿಕ ದರ್ಶನ್ ಆರೋಪಿಗಳನ್ನು ಭೇಟಿ ಮಾಡಿದ್ದಾರೆ. ಅದ್ರಿಂದ ಮೈಸೂರಿಗೆ ತೆರಳಿ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ದರ್ಶನ್ ತಂಗಿದ್ದ ಹೊಟೇಲ್ ಹಾಗೂ ಇತರೆಡೆ ತನಿಖೆ ನಡೆಸಿ,ಬಳಿಕ ಹೊಟೇಲ್ ನಲ್ಲಿ ಪರಿಶೀಲನೆ ನಡೆಸಿ ಮಹಜರು ಸಾಧ್ಯತೆ.