ಬೆಂಗಳೂರು : ಮಹಿಳಾ ಪ್ರೀಮಿಯರ್ ಲೀಗ್ 2026ರ ಉದ್ಘಾಟನೆಗೆ ಕ್ಷಣಗಣೆ ಆರಂಭವಾಗಿದೆ, ಜನವರಿ 9 ರಂದು ಸಂಜೆ 7.30ಕ್ಕೆ ನಾಲ್ಕನೇ ಸೀಸನ್‌ಗೆ ಅದ್ದೂರಿ ಚಾಲನೆ ದೊರೆಯಲಿದೆ. ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ವರ್ಷದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಬಲಿಷ್ಠವಾಗಿ ಪ್ರದರ್ಶನ ನೀಡಲು ಸಿದ್ಧವಾಗಿದೆ.
ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಶಬ್ನಿಮ್ ಇಸ್ಮಾಯಿಲ್ ಅವರು ತಂಡಕ್ಕೆ ಸೇರ್ಪಡೆಯಿಂದಾಗಿ ಬೌಲಿಂಗ್‌ಗೆ ಇನ್ನಷ್ಟು ಬಲ ಬಂದಂತಾಗಿದೆ. ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ಮಧ್ಯಮ ಕ್ರಮಾಂಕದ ಆಟದ ಗೆಲುವಿನ ತಂತ್ರಗಾರಿಕೆಯು ತಂಡಕ್ಕೆ ಶಕ್ತಿ ನೀಡಲಿದೆ. ಅಲ್ಲದೆ ಸ್ಫೋಟಕ ಹೇಲಿ ಮ್ಯಾಥ್ಯೂಸ್ ಬ್ಯಾಟಿಂಗ್ ಅಬ್ಬರಕ್ಕೆ ಮುಂಬೈ ತಂಡ ಸಾಕ್ಷಿಯಾಗಲಿದೆ, ಹೀಗಾಗಿ ಅತ್ಯಂತ ಭಯಾನಕ ತಂಡಗಳಲ್ಲಿ ಮುಂಬೈ ಒಂದಾಗಿದೆ.
ಉಭಯ ತಂಡಗಳ ನಡುವಿನ ಪೈಪೋಟಿಯು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಪ್ರಬಲ ಪ್ರದರ್ಶನ ಹಾಗೂ ಉತ್ಸುಕತೆಯನ್ನು ಹೆಚ್ಚಿಸುತ್ತಾ ಬಂದಿದೆ. 2026ರ ಆವೃತ್ತಿಯಲ್ಲಿ ಎರಡೂ ತಂಡಗಳು ಏಳು ಬಾರಿ ಸೆಣಸಾಡಿವೆ. ಮುಂಬೈ ಇಂಡಿಯನ್ಸ್ ನಾಲ್ಕು ಗೆಲುವುಗಳೊಂದಿಗೆ ಸ್ವಲ್ಪ ಮುನ್ನಡೆ ಸಾಧಿಸಿದೆ ಮತ್ತು ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ಮೂರು ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.
ಇನ್ನೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್‌ಗೆ ಟಕ್ಕರ್ ನೀಡಲು ತನ್ನದೇ ಆದ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿಯೂ ನಾಯಕಿಯಾಗಿ ಸ್ಮೃತಿ ಮಂಧಾನ ನೇತೃತ್ವದಲ್ಲಿ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿ ಆರ್‌ಸಿಬಿ ಅಭಿಮಾನಿಗಳಿದ್ದಾರೆ. ಇನ್ನುಳಿದಂತೆ ಉಪನಾಯಕಿ ಇಟ್ಟುಕ ಜಾರ್ಜಿಯಾ ವೋಲ್, ಗೌತಮಿ ನಾಯಕ್, ಗ್ರೇಸ್ ಹ್ಯಾರಿಸ್, ರಿಚಾ ಘೋಷ್, ನಡಿನ್ ಡಿ ಕ್ಲರ್ಕ್, ಪೂಜಾ ವಸ್ತ್ರಾಕರ್, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಅರುಂಧತಿ ರೆಡ್ಡಿ, ಲಾರೆನ್ ಬೆಲ್, ಕುಮಾರ್ ಪ್ರತ್ಯೂಷಾ, ಸಯಾಲಿ ಸತ್ಗರೇ, ಪ್ರೇಮಾ ರಾವತ್, ದಯಾಳನ್ ಹೇಮಲತಾ ಹಾಗೂ ಲೆನ್ಸಿ ಸ್ಮಿತ್ ಒಳಗೊಂಡ ಆಕ್ರಮಣಕಾರಿ ಆಟಗಾರ್ತಿಯರು ಎದುರಾಳಿ ತಂಡಗಳಿಗೆ ಬಿಸಿ ಮುಟ್ಟಿಸಲಿದ್ದಾರೆ.
ಅದರಂತೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ನಾಯಕಿಯಾಗಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿಯಾಗಿ ಹೇಲಿ ಮ್ಯಾಥ್ಯೂಸ್ ಇನ್ನುಳಿದಂತೆ ಜಿ ಕಮಲಿನಿ, ನ್ಯಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಅಮನ್‌ಜೋತ್ ಕೌರ್, ಸಜೀವನ್ ಸಜನಾ, ಪೂನಮ್ ಖೇಮ್ನಾರ್, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ತ್ರಿವೇಣಿ ವಸಿಷ್ಟ, ನಲ್ಲ ರೆಡ್ಡಿ, ಸಲ್ಲಿಕಾ ಇಫಿಲೌಸ್ ಸೇರಿದಂತೆ ರಾಹಿಲಾ ನಿಕೋಲಾ ಕ್ಯಾರಿ ಈ ಆಟಗಾರ್ತಿಯರು ಮುಂಬೈ ತಂಡದಲ್ಲಿ ಪ್ರದರ್ಶನ ನೀಡಲಿದ್ದಾರೆ.











