ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಬಗ್ಗೆ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ಒಂದು ವೇಳೆ ಅರ್ಹರಿದ್ದು, ಎಪಿಎಲ್ ಆಗಿ ಬದಲಾಗಿದ್ರೆ, ಮತ್ತೆ ಬಿಪಿಎಲ್ ಕಾರ್ಡ್ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದಿದ್ದಾರೆ.
ಆದಾಯ ತೆರಿಗೆ ಹಾಗೂ ಸರ್ಕಾರಿ ನೌಕರರು ಒಟ್ಟು 1 ಲಕ್ಷದ 2,509 ಎಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ. ಆದಾಯ ತೆರಿಗೆ ಪಾವತಿ ಮಾಡೋ 98,473 ಕಾರ್ಡ್ಗಳಲ್ಲಿ 8,179 ಕಾರ್ಡ್ಗಳನ್ನು ಮಾತ್ರ ಅಮಾನತು ಮಾಡಲಾಗಿದೆ. ಸರ್ಕಾರಿ ನೌಕರರದ್ದು 4036 ಕಾರ್ಡ್ಗಳು ಇದ್ದು, ಅದರಲ್ಲಿ 468 ಕಾರ್ಡ್ ಅಮಾನತು ಮಾಡಲಾಗಿದೆ. ಒಟ್ಟು 8,647 ಕಾರ್ಡ್ ರದ್ದು ಮಾಡಲಾಗಿದೆ ಎಂದಿದ್ದಾರೆ.
ನಿನ್ನೆ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಪರಿಶೀಲನೆ ಮಾಡಿದ್ದ ಬಿಜೆಪಿ ನಾಯಕರು ಇಂದು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಪರಿಶೀಲನೆ ಮಾಡಿದ್ದಾರೆ. ಬಿಪಿಎಲ್ ಕಾರ್ಡ್ ವಂಚಿತ ಬಡವರ ಮನೆಗೆ ಬಿಜೆಪಿ ನಾಯಕರು ಭೇಟಿ ನೀಡಿ ಸಮಸ್ಯೆ ಆಲಿಸಿದ್ದಾರೆ. ಜಯನಗರದ ಪುಟ್ಟಯ್ಯನಪಾಳ್ಯದ ಸ್ಲಂಗೆ ಭೇಟಿ ನೀಡಿದ್ದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಆರ್ ಅಶೋಕ್, ಶಾಸಕ ಸಿ ಕೆ ರಾಮಮೂರ್ತಿ ಪರಿಶೀಲಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನ ನರಕ ಮಾಡಲು ಹೊರಟಿದೆ. ಜನರು ತಿನ್ನುವ ಅನ್ನ ಕಿತ್ತುಕೊಳ್ಳಲು ಹೊರಟಿದೆ. ಅನ್ಯಭಾಗ್ಯ ಎಂದು ಹೇಳಿ ಹಸಿವಿನ ಭಾಗ್ಯ ಕಲ್ಪಿಸುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಸ್ಲಂನಲ್ಲಿ ವಾಸ ಮಾಡೋ ಜನರ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದಾರೆ. ಈ ಸರ್ಕಾರ ಯೂ ಟರ್ನ್ ಸರ್ಕಾರ. ಮೂಡಾ ಸೈಟ್ ತೆಗೆದು ಕೊಂಡ್ರು ವಾಪಾಸ್ ಕೊಟ್ರು. ವಕ್ಪ್ ನೋಟೀಸ್ ಕೊಟ್ರು ವಾಪಾಸ್ ಪಡೆದ್ರು. ಈಗ ರೇಷನ್ ಕಾಡ್ ಎಂದು ವ್ಯಂಗ್ಯ ಮಾಡಿದ್ದಾರೆ.