ಮುಡಾ ಹಗರಣದ ತನಿಖೆ ಚುರುಕುಗೊಳಿಸಿರುವ ED, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ರನ್ನು ನಿನ್ನೆ ವಿಚಾರಣೆ ಮಾಡಿತ್ತು. ದಾಖಲೆಗಳನ್ನ ತಿದ್ದಿರೋ ಆರೋಪ ಹಿನ್ನೆಲೆ ನೋಟಿಸ್ ನೀಡಿದ್ದ ED ಅಧಿಕಾರಿಗಳು, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಸೇರಿದಂತೆ ಹಲವು ಅಧಿಕಾರಿಗಳಿಗೆ ನೋಟಿಸ್ ಕೊಟ್ಟು ಸತತ 11 ಗಂಟೆಗಳ ವಿಚಾರಣೆ ಮಾಡಿದ್ದಾರೆ. ದೀಪಾ ಚೋಳನ್ ವಿಚಾರಣೆ ಬಳಿಕ ಲೋಕಾಯುಕ್ತ ಅಧಿಕಾರಿಗಳಿಗೆ ED ಪತ್ರ ಬರೆದಿದೆ ಎನ್ನಲಾಗ್ತಿದೆ.
ಸಿಎಂ ಪತ್ನಿ ಪಾರ್ವತಿಗೆ ಅಕ್ರಮವಾಗಿ ಸೈಟ್ ಹಂಚಿಕೆಯಲ್ಲಿ ಅಕ್ರಮವಾಗಿದೆ ಅನ್ನೋ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ.. ಸೈಟ್ ಪಡೆಯುವಲ್ಲಿ ಸಿಎಂ, ಸಿಎಂ ಮಗ ಪ್ರಭಾವ ಬೀರಿರುವ ಬಗ್ಗೆ ಲೋಕಾಯುಕ್ತ DGಗೆ ಇಡಿ ಅಧಿಕಾರಿಗಳು ವಿವರಗಾಗಿ ಪತ್ರ ಬರೆದಿದ್ದಾರೆ. ಮುಡಾ ತನಿಖೆ ಬಳಿ ಇ.ಡಿ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದು ಡಿ ನೋಟಿಫಿಕೇಷನ್, ಭೂ ಪರಿವರ್ತನೆಯಲ್ಲಿ ಅಕ್ರಮ ನಡೆದಿರೋದು ಸಾಬೀತಾಗಿದೆ. ಅಧಿಕಾರಿಗಳ ಮೇಲೆ ಸಿಎಂ ಆಪ್ತರು ಒತ್ತಡ ಹೇರಿದ್ದಾರೆ. ಹಿಂದಿನ ಆಯುಕ್ತ ನಟೇಶ್ ಇದ್ದಾಗ ಸೈಟ್ ಹಂಚಿಕೆ ನಡೆದಿದ್ದು ಸೈಟ್ ಹಂಚಿಕೆ ವಿಚಾರದಲ್ಲಿ ಸಾಕ್ಷಿಗಳನ್ನ ತಿರುಚಲಾಗಿದೆ ಅಂತ ಆರೋಪಿಸಲಾಗಿದೆ.
ಮುಡಾ ಹಗರಣದ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು, ಒಂದಲ್ಲ.. ಎರಡಲ್ಲ.. 1,095 ಸೈಟ್ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಗಿದೆ ಅನ್ನೋ ಮಾಹಿತಿ ಸಿಕ್ಕಿದೆ. ಇಡಿ ಲೋಕಾಯುಕ್ತಕ್ಕೆ ಬರೆದಿರುವ ಪತ್ರದಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದ್ದು, ₹700 ಕೋಟಿ ರುಪಾಯಿ ಮೌಲ್ಯದ ನಿವೇಶನಗಳ ಹಗರಣ ನಡೆದಿದೆ. ಮೂಲ ಮಾಲೀಕರ ಬದಲಿಗೆ ನಕಲಿ ವ್ಯಕ್ತಿಗಳಿಗೆ ಸೈಟ್ ನೀಡಲಾಗಿದೆ. ಹೈಟೆಕ್ ಕಾರು ಕೊಟ್ಟವರಿಗೂ ಮುಡಾ ಸೈಟ್ ಹಂಚಿಕೆ ಮಾಡಲಾಗಿದೆ ಅಂತ ಇಡಿ ಹೇಳಿದೆ. 5 ಸಾವಿರ ಸೈಟ್ಗಳ ಪೈಕಿ 1,946 ಸೈಟ್ಗಳ ದಾಖಲೆ ಇಲ್ಲ. ಅಕ್ರಮದಲ್ಲಿ ಹಿಂದಿನ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಪಿಎ ಪ್ರಶಾಂತ್ ಪಾತ್ರ ಅಂತ ಇಡಿ ಉಲ್ಲೇಖ ಮಾಡಿದೆ.
ಇನ್ನೊಂದೆಡೆ ಮುಡಾದಿಂದ ಸೈಟ್ ಪಡೆದಿರುವ 48 ಜನರ ಲಿಸ್ಟ್ PRATHIDVANI ಗೆ ಲಭ್ಯವಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು, ಪ್ರಭಾವಿಗಳು, ಅಧಿಕಾರಿಗಳ ಕುಟುಂಬಸ್ಥರು, ರಾಜಕಾರಣಿಗಳ ಸಂಬಂಧಿಕರ ಹೆಸರಲ್ಲಿ ಸೈಟ್ ಹಂಚಿಕೆಯಾಗಿದೆ. ಸೈಟ್ ಹಂಚಿಕೆಯಲ್ಲಿ ಭಾರಿ ಅಕ್ರಮವಾಗಿದೆ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಇನ್ನು ಮುಡಾ ಅಕ್ರಮದ ಕುರಿತಂತೆ ಇಡಿ ತಲಾಶ್ ನಡೆಸಲಿದ್ದು, ಇನ್ನಷ್ಟು ಸ್ಪೋಟಕ ಮಾಹಿತಿಗಳು ಹೊರಬೀಳುವ ಸಾಧ್ಯತೆ ಇದೆ.
ಇದೇ ವೇಳೆ ಇನ್ನೆರಡು ದಿನಗಳಲ್ಲಿ 48 ಮುಡಾ ಸೈಟ್ಗಳನ್ನು ವಾಪಸ್ ಮುಡಾ ವಶಕ್ಕೆ ಪಡೆಯುತ್ತೇವೆ ಅಂತ ಮೈಸೂರು ಡಿಸಿ ಲಕ್ಷ್ಮೀಕಾಂತ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. 2023ರ ಮಾರ್ಚ್ 21 ರಂದು ಪ್ರಾಧಿಕಾರದ ಸಭೆ ನಡೆದಿತ್ತು. ಆದ್ರೆ ಸಭೆಯನ್ನೇ ಯಾಮಾರಿಸಿ ಅಂದಿನ ಮಾಜಿ ಆಯುಕ್ತ ದಿನೇಶ್ ಕುಮಾರ್ ಕಳ್ಳಾಟ ಎಸಗಿದ್ರು. ಮೊನ್ನೆಯಷ್ಟೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಲತಾ ಸೈಟ್ ವಾಪಸ್ಸು ಪಡೆಯುವ ಬಗ್ಗೆ ಆದೇಶ ಹೊರಡಿಸಿದ್ರು. ಇದರ ಬೆನ್ನಲೇ ಮುಡಾ ಅಲರ್ಟ್ ಆಗಿದೆ.